Tuesday, March 3, 2026
31.7 C
Bengaluru
Google search engine
LIVE
ಮನೆಧರ್ಮಗೊಲ್ಲರಹಟ್ಟಿ ದೇವಸ್ಥಾನಕ್ಕೆ SC ಯುವಕರ ಪ್ರವೇಶ

ಗೊಲ್ಲರಹಟ್ಟಿ ದೇವಸ್ಥಾನಕ್ಕೆ SC ಯುವಕರ ಪ್ರವೇಶ

ಚಿಕ್ಕಮಗಳೂರು : ಗೊಲ್ಲರಹಟ್ಟಿ ದೇವಸ್ಥಾನಕ್ಕೆ SC ಯುವಕರ ಪ್ರವೇಶ ದೇಗುಲದ ಬೀಗ ಮುರಿದು ಪೂಜೆಗೆ ಅಧಿಕಾರಿಗಳ ಅವಕಾಶ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗೇರುಮರಡಿ ಗ್ರಾಮದ ಗೊಲ್ಲರಹಟ್ಟಿ ಪ್ರವೇಶಿಸಿದ್ದಕ್ಕಾಗಿ ಹಲ್ಲೆಗೊಳಗಾಗಿದ್ದ sc ಯುವಕನನ್ನು ಜಿಲ್ಲಾಡಳಿತ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿತು.
ಜೆಸಿಬಿ ಕೆಲಸಕ್ಕೆ ಹೋಗಿದ್ದ sc ಸಮುದಾಯದ ಯುವಕನನ್ನು ಗ್ರಾಮಸ್ಥರು ಥಳಿಸಿದ್ದರು. ನಮ್ಮ ಗ್ರಾಮಕ್ಕೆ ಬರುವಂತಿಲ್ಲ ಎಂದು ನಿಂದಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಸುದ್ದಿ ಮಾಡಿತ್ತು. ಹಲವು ಸಂಘಟನೆಗಳು ನಿನ್ನೆ ತರೀಕೆರೆ ತಾಲೂಕು ಕಛೇರಿ ಮುಂದೆ ಧರಣಿ ನಡೆಸಿದ್ದರು. ಕಾನೂನಿನಲ್ಲಿ ಇಂತಹ ಅಸ್ಪೃಶ್ಯತೆಗೆ ಅವಕಾಶ ಇಲ್ಲದ ಕಾರಣ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಗ್ರಾಮಕ್ಕೆ ಆಗಮಿಸಿತ್ತು. ಆದ್ರೆ ಗ್ರಾಮಸ್ಥರು ಕಂಬದ ನರಸಿಂಹಸ್ವಾಮಿ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕೊಡದೆ ಬೀಗ ಹಾಕಿದ್ದರು.


ದೇಗುಲಕ್ಕೆ ಹಾಕಿದ್ದ ಬೀಗವನ್ನ ಎಎಸ್ಪಿ ಕೃಷ್ಣಮೂರ್ತಿ, ಎಸಿ ಡಾ. ಕೆ.ಜೆ.ಕಾಂತರಾಜ್, ತಹಸೀಲ್ದಾರ್ ವಿ.ಎಸ್.ರಾಜೀವ್, ಡಿವೈಎಸ್ಪಿ ಡಾ. ಹಾಲಮೂರ್ತಿ ರಾವ್ ಸಮ್ಮುಖದಲ್ಲಿ ಬೀಗ ಒಡೆದು ಎಸ್ ಸಿ ಮುಖಂಡರು ಪ್ರವೇಶ ಮಾಡಿದರು. ಗೊಲ್ಲರಹಟ್ಟಿ ಗ್ರಾಮಸ್ಥರಿಂದ ಹಲ್ಲೆಗೊಳಗಾಗಿದ್ದ ಮಾರುತಿ ಎಂಬ ಯುವಕನಿಂದ ದೇವರಿಗೆ ಪೂಜೆ ಮಾಡಿಸಿದರು. ಈ ವೇಳೆ ಉಪಸ್ಥಿತರಿದ್ದ ಹಲವು ಹೋರಾಟಗಾರರು ಸಂವಿಧಾನದ ಪೂರ್ವಪೀಠಿಕೆ ಓದಿದರು. ಹಲ್ಲೆ ಪ್ರಕರಣದ ಅಷ್ಟು ಆರೋಪಿಗಳನ್ನ ಬಂಧಿಸಬೇಕು ಎಂದು ಒತ್ತಾಯಿಸಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments