ಬಿಗ್ಬಾಸ್ ಮನೆಯಲ್ಲಿ ಈಗಾಗಲೇ ಒಂದು ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ವೈಲ್ಡ್ ಕಾರ್ಡ್ ಮೂಲಕ ಬಂದಿರುವ ಹನುಮಂತು ಚೆನ್ನಾಗಿ ಆಟ
ಆಡುತ್ತಿದ್ದಾರೆ. ಇದೀಗ ವೈಲ್ಡ್ ಕಾರ್ಡ್ ಮೂಲಕ ಇನ್ನೂ ಇಬ್ಬರು ಆಟಗಾರರು ಬರುತ್ತಿದ್ದಾರೆ.
ಲಾಯರ್ ಜಗದೀಶ್ ಮತ್ತು ರಂಜಿತ್ ನಿಯಮ ಮುರಿದು ಹೊರ ಹೋದ ಕಾರಣಕ್ಕೆ ವೈಲ್ಡ್ ಕಾರ್ಡ್ ಮೂಲಕ ಹನುಮಂತು ಅನ್ನು ಒಳಗೆ ಕರೆದುಕೊಳ್ಳಲಾಗಿತ್ತು. ಆದರೆ ಈಗ ಮತ್ತೆ ಇಬ್ಬರು ಸೆಲೆಬ್ರಿಟಿಗಳು ವೈಲ್ಡ್ ಕಾರ್ಡ್ ಮೂಲಕ ಬಿಗ್ಬಾಸ್ ಮನೆ ಒಳಗೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಶೋಭಾ ಶೆಟ್ಟಿ ಮತ್ತು ರಂಜಿತ್ ಅವರುಗಳು ಈ ಬಾರಿ ವೈಲ್ಡ್ ಕಾರ್ಡ್ ಮೂಲಕ ಬಿಗ್ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಂದಹಾಗೆ ಈ ಶೋಭಾ ಶೆಟ್ಟಿಗೆ ಬಿಗ್ಬಾಸ್ ಹೊಸದೇನೂ ಅಲ್ಲ. ಈ ಹಿಂದೆ ತೆಲುಗು ಬಿಗ್ಬಾಸ್ ಸೀಸನ್ 07 ರಲ್ಲಿ ಶೋಭಾ ಶೆಟ್ಟಿ ಭಾಗಿಯಾಗಿದ್ದರು. ಅಲ್ಲಿ ತಮ್ಮ ಜಗಳ, ಕಿರಿಕಿರಿಗಳಿಂದಾಗಿಯೇ ಜನಪ್ರಿಯ ಆಗಿದ್ದರು ಶೋಭಾ ಶೆಟ್ಟಿ.
ಶೋಭಾ ಶೆಟ್ಟಿ ನಟಿಯಾಗಿದ್ದು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅದರ ಜೊತೆಗೆ ವ್ಲಾಗರ್ ಸಹ ಆಗಿರುವ ಶೋಭಾ ಶೆಟ್ಟಿ ಯೂಟ್ಯೂಬ್ ಚಾನೆಲ್ ಹೊಂದಿದ್ದು ತಮ್ಮ ಜೀವನದಲ್ಲಿ ನಡೆಯುವ ಘಟನೆಗಳನ್ನು ವಿಡಿಯೋ ಮಾಡಿ ವ್ಲಾಗ್ ರೂಪದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡುತ್ತಿರುವ ರಂಜಿತ್ ಸಹ ನಟರಾಗಿದ್ದು, ಕಿರುತೆರೆ ಧಾರಾವಾಹಿಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.