Top Newsಮನರಂಜನೆಸುದ್ದಿ

ಬಿಗ್ ಬಾಸ್ ಮನೆಯಲ್ಲಿ ಅನುಷಾ ರೈಗೆ ಸಿಕ್ತು ಲಕ್ಷ ಲಕ್ಷ ರೂಪಾಯಿ ಚೆಕ್..

ಅನುಷಾ ರೈ ಅವರು ‘ಬಿಗ್ ಬಾಸ್​’ನಿಂದ ಎಲಿಮಿನೇಟ್ ಆಗಿದ್ದಾರೆ. 50 ದಿನಗಳ ಕಾಲ ದೊಡ್ಮನೆಯಲ್ಲಿ ಇದ್ದ ಅವರು ಈಗ ಹೊರಕ್ಕೆ ಬಂದಿದ್ದಾರೆ. ಅನುಷಾ ಅವರಿಗೆ ‘ಬಿಗ್ ಬಾಸ್’ ಮನೆಯಲ್ಲಿ ಲಕ್ಷ ಲಕ್ಷ  ಬಹುಮಾನಗಳು ಸಿಕ್ಕಿದೆ. ಅದೇ ರೀತಿ ಅವರಿಗೆ ಸಿಕ್ಕ ಬಹುಮಾನದ ಮೊತ್ತವೂ ತುಂಬಾನೇ ದೊಡ್ಡದ್ದಾಗಿದೆ. ಅವರು ದೊಡ್ಮನೆಯಿಂದ ಹೊರ ಹೋಗಲು ಕಾರಣವಾದ ಅಂಶ ಹಾಗೂ ಹೊರ ಹೋದ ಅವರಿಗೆ ಸಿಕ್ಕ ಬಹುಮಾನ.ಅನುಷಾ ರೈ ಅವರು  ಕಿರುತೆರೆಯ ಮೂಲಕ ಫೇಮಸ್ ಆದವರು. ಅವರು ದೊಡ್ಮನೆಗೆ ಎಂಟ್ರಿ ಕೊಟ್ಟು ಎಲ್ಲರ ಗಮನ ಸೆಳೆದರು. ಅವರು ಧರ್ಮ ಕೀರ್ತಿರಾಜ್ ಜೊತೆಗಿನ ಗೆಳೆತನದ ಕಾರಣಕ್ಕೆ ಸಾಕಷ್ಟು ಸುದ್ದಿ ಆಗಿದ್ದರು. ಅವರು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಅವರು ದೊಡ್ಮನೆಯಿಂದ ಹೊರಕ್ಕೆ ಹೋಗಿದ್ದಾರೆ. ಉಳಿದ ಸ್ಪರ್ಧಿಗಳಿಗ ಹೋಲಿಸಿದರೆ ಅನುಷಾ ವೀಕ್ ಸ್ಪರ್ಧಿ ಎನಿಸಿಕೊಂಡರು. ಮೂರು ವಾರಗಳ ಹಿಂದೆ ಅನುಷಾ ನಾಮಿನೇಟ್ ಆಗುವ ಹಂತದಲ್ಲಿ ಇದ್ದರು. ಆದರೆ, ಅವರು ಕೊನೆಯ ಹಂತದಲ್ಲಿ ಬಚಾವ್ ಆದರು. ಎರಡು ವಾರಗಳ ಹಿಂದೆ ನಾಮಿನೇಟ್ ಆಗದೆ ಅವರು ಬಚಾವ್ ಆದರು. ಕಳೆದ ವಾರ ಬರೋಬ್ಬರಿ 10 ಮಂದಿ ನಾಮಿನೇಟ್ ಆಗಿದ್ದರು. ಕೊನೆಯ ಹಂತದಲ್ಲಿ ಧರ್ಮ ಹಾಗೂ ಅನುಷಾ ಇದ್ದರು. ಈ ಪೈಕಿ ಅನುಷಾ ಎಲಿಮಿನೇಟ್ ಆಗಿದ್ದಾರೆ.

 

Comments (0)

Your email address will not be published. Required fields are marked *

Back to top button