ದುನಿಯಾ ವಿಜಯ್ ಅವರು ನಿರ್ದೇಶನದಲ್ಲಿ ಮೂಡಿ ಬಂದ ಮೊದಲ ಸಿನಿಮಾ ‘ಸಲಗ’ ಹಿಟ್ ಆಯಿತು. ಆ ಬಳಿಕ ಅವರು ನಿರ್ದೇಶನ ಮಾಡಿದ ಎರಡನೇ ಸಿನಿಮಾ ಎಂದರೆ ಅದು ‘ಭೀಮ’. ಈ ಸಿನಿಮಾ ಕೂಡ ರೌಡಿಸಂ ಬಗ್ಗೆ ಇರಲಿದೆ. ಈ ಸಿನಿಮಾ ಬಗ್ಗೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚುನಾವಣೆ, ಐಪಿಎಲ್ ಕಾರಣದಿಂದ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಿನಿಮಾಗಳು ರಿಲೀಸ್ ಆಗಿರಲಿಲ್ಲ. ಈಗ ಚಿತ್ರರಂಗಕ್ಕೆ ಮತ್ತೆ ಕಳೆ ಬರುತ್ತಿದೆ. ದುನಿಯಾ ವಿಜಯ್ ನಟನೆಯ ‘ಭೀಮ’ ಸಿನಿಮಾ ಆಗಸ್ಟ್ 9ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಕರ್ನಾಟಕದಾದ್ಯಂತ 400ಕ್ಕೂ ಅಧಿಕ ಥಿಯೇಟರ್ಗಳಲ್ಲಿ ರಿಲೀಸ್ ಆಗಲಿದೆ. ವಿಶೇಷ ಎಂದರೆ ಇತ್ತೀಚೆಗೆ ಮುಚ್ಚಲ್ಪಟ್ಟ 18 ಥಿಯೇಟರ್ಗಳು ಈಗ ಮರುಜೀವ ಪಡೆಯುತ್ತಿವೆ. ದುನಿಯಾ ವಿಜಯ್ ಅವರು ನಿರ್ದೇಶನದಲ್ಲಿ ಮೂಡಿ ಬಂದ ಮೊದಲ ಸಿನಿಮಾ ‘ಸಲಗ’ ಹಿಟ್ ಆಯಿತು. ಆ ಬಳಿಕ ಅವರು ನಿರ್ದೇಶನ ಮಾಡಿದ ಎರಡನೇ ಸಿನಿಮಾ ಎಂದರೆ ಅದು ‘ಭೀಮ’. ಈ ಸಿನಿಮಾ ಕೂಡ ರೌಡಿಸಂ ಬಗ್ಗೆ ಇರಲಿದೆ. ಈ ಸಿನಿಮಾ ಬಗ್ಗೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ನಿರ್ಮಾಪಕ ಜಗದೀಶ್ ಗೌಡ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ.