ಪ್ರಭಾಸ್ ಅವರು ನಟಿಸಿರುವ ‘ದಿ ರಾಜಾ ಸಾಬ್’ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಥಮನ್ ಎಸ್. ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಮಾರುತಿ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಅಭಿಮಾನಿಗಳಿಗೆ ಖುಷಿ ನೀಡಲು ಸೋಮವಾರ (ಜುಲೈ 28) ‘ಫ್ಯಾನ್ ಇಂಡಿಯಾ ಗ್ಲಿಂಪ್ಸ್’ ಬಿಡುಗಡೆ ಮಾಡಲಾಗುತ್ತಿದೆ. ‘ಬಾಹುಬಲಿ’ ಬಳಿಕ ಕೈಕೊಟ್ಟಿದ್ದ ಪ್ರಭಾಸ್ ಅವರ ಅದೃಷ್ಟ ಈಗ ಮತ್ತೆ ಸರಿಯಾದ ಟ್ರ್ಯಾಕ್ಗೆ ಬಂದಿದೆ. ಅವರು ನಟಿಸಿದ ‘ಸಲಾರ್’ ಸಿನಿಮಾ ಉತ್ತಮವಾಗಿ ಕಮಾಯಿ ಮಾಡಿತ್ತು. ಇತ್ತೀಚೆಗೆ ಬಿಡುಗಡೆ ಆದ ‘ಕಲ್ಕಿ 2898 ಎಡಿ’ ಸಿನಿಮಾ ಕೂಡ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಸೈ ಎನಿಸಿಕೊಂಡಿತು. ಈ ಗೆಲುವಿನ ಖುಷಿಯಲ್ಲಿ ಅವರು ತೇಲುತ್ತಿದ್ದಾರೆ. ಅವರ ಮುಂಬರುವ ಸಿನಿಮಾಗಳ ಬಗ್ಗೆ ನಿರೀಕ್ಷೆ ಜಾಸ್ತಿ ಆಗಿದೆ. ಪ್ರಭಾಸ್ ಅಭಿನಯಿಸಿರುವ ‘ದಿ ರಾಜಾ ಸಾಬ್’ ಸಿನಿಮಾ ತಂಡದಿಂದ ಜುಲೈ 29ರಂದು ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ಸಿಗಲಿದೆ.

ಪ್ರಭಾಸ್ ಅವರು ಪ್ರತಿ ಸಿನಿಮಾದಲ್ಲೂ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡುತ್ತಿದ್ದಾರೆ. ‘ಸಲಾರ್’, ‘ಕಲ್ಕಿ 2898 ಎಡಿ’ ಸಿನಿಮಾಗಳಿಗಿಂತಲೂ ಭಿನ್ನವಾದ ಪಾತ್ರವನ್ನು ಅವರು ‘ದಿ ರಾಜಾ ಸಾಬ್’ ಸಿನಿಮಾದಲ್ಲಿ ಮಾಡಿದ್ದಾರೆ. ಅವರ ಲುಕ್ ಈಗಾಗಲೇ ಬಹಿರಂಗ ಆಗಿದೆ. ಈಗ ಒಂದು ಸ್ಪೆಷಲ್ ಆದಂತಹ ವಿಡಿಯೋ ಮೂಲಕ ಅಭಿಮಾನಿಗಳನ್ನು ಖುಷಿಪಡಿಸಲು ಚಿತ್ರತಂಡ ಸಜ್ಜಾಗಿದೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com