Editorial

ಸಂಪಾದಕೀಯ…

ನಾನೂ ಗೆಲ್ಲಬೇಕು. ಸೆಲೆಬ್ರಿಟಿಯಾಗಬೇಕು. ಸಕ್ಸಸ್‌ ಕಾಣಬೇಕು. ನನ್ನ ಕಂಡರೆ ಜನ ಸೆಲ್ಫಿ ತಗೋಬೇಕು…. ಇದು ಎಲ್ಲರ ಕನಸು. ಆದರೆ, ಸಕ್ಸಸ್‌ ಸುಮ್ಮನೆ ಸಿಗಬೇಕಲ್ಲ. ಸಕ್ಸಸ್‌ ಗೆ ಎಲ್ಲಿರುತ್ತೆ ಹೇಳಿ ಶಾರ್ಟ್‌ ಕಟ್. ಅದಕ್ಕಾಗಿ ಬೆವರು, ರಕ್ತ ಬಸಿಯಬೇಕು. ಏಕಾಂತದಲ್ಲಿ ಕಣ್ಣೀರುಗರೆಯಬೇಕು. ಕಠಿಣಾತಿಕಠಿಣ ತೀರ್ಮಾನ ಮಾಡಬೇಕು. ಭಯ ಹತಾಷೆ, ದುಃಖದ ಮಡಿಲಲ್ಲಿ ಈಜಬೇಕು. ಮುಗಿದೇ ಹೋಯಿತು ಅನ್ನೋ ಶೂನ್ಯ ದಾಟಿ ಸೋಲದೆ ಮುಂದುವರಿಲೇಬೇಕು. ಈ ಕಠಿಣ ಹಾದಿ ಎಲ್ಲರಿಗೂ ದಕ್ಕಲ್ಲ. ಗೆಲುವು ಎಂಬುದು ಸಾವು ಬದುಕಿನ ಮಾನಸಿಕ ಹೋರಾಟ. ಇಂಥದ್ದೇ ಹಾದಿ ಕ್ರಮಿಸಿ ಗೆಲವು ಕಂಡವರು ನಮ್ಮ ಸ್ಯಾಂಡಲ್‌ ವುಡ್‌ ನ ನಟರಾದ ಯಶ್‌ ಮತ್ತು ನಟಿ ರಶ್ಮಿಕಾ.

ಎಲ್ಲೋ ಇದ್ದ ಯಶ್‌ ಆಗಸಕ್ಕೆ ಬೆಳೆದುಬಿಟ್ಟರು ಕಾಲೆಳೆವ ಜನ ತಲೆಯೆತ್ತಿ ನೋಡುವಂತೆ. ಯಾರೂ ಇಗ್ನೋರ್ ಮಾಡಲು ಸಾಧ್ಯವೇ ಇಲ್ಲದಂತೆ. ಒಂದು ಚಾನ್ಸ್‌ ಗಾಗಿ‌ ಆಸೆಗಣ್ಣಿಂದ ಕಾಯುತ್ತಿದ್ದ ಬಾಲಕಿ ರಶ್ಮಿಕಾ ಇಂದು ಮುಗಿಲ ಮಲ್ಲಿಗೆ. ಸಣ್ಣ ಚಾನ್ಸ್‌ ಗಾಗಿ ರಕ್ಷಿತ್ ಶೆಟ್ಟಿ ಸಿಕ್ಕರೆ ಸಾಕೆಂದುಕೊಂಡಿದ್ದ ರಶ್ಮಿಕಾ ಧಿಡೀರ್‌ ಪ್ಯಾನ್‌ ಇಂಡಿಯಾ ನಟಿಯಾಗಿಬಿಟ್ಟರು. ಅದು ಆಕೆಯ ರಿಸ್ಕ್‌, ಆಕೆಯ ಎಫರ್ಟ್‌. ಎಷ್ಟು ಬೆಳೆದರೇನಂತೆ ಈ ಇಬ್ಬರು ನತದೃಷ್ಟರಿಗೆ ನೆಮ್ಮದಿ ಕೊಂಚ ದೂರವೇ ಉಳಿದುಬಿಟ್ಟಿದೆ. ಗೆಲುವಿನ ಸವಿಯ ಹೊತ್ತಲ್ಲೇ ಇವರ ಮೂಲದ ಶಾಪ ಇವರನು ಕಾಡಿ ನಕ್ಕ ಮರುಕ್ಷಣವೇ ಖೇದಕ್ಕೆ ದೂಡುತ್ತಿದೆ.ಯಾವ ಮೂಲವು ಇವರ ಗೆಲುವಿಗೆ ನೀರು ಎರೆದಿದೆಯೋ ಅದೇ ಮೂಲ ಈ ಸಾಧಕರಿಗೆ ಆಗಾಗ ಚುಚ್ಚಿ ನೋಯಿಸುತ್ತಿದೆ.

ತನ್ನ ಊರ ಕೆರೆಗೆ ನಾಲ್ಕು ಕೋಟಿ ದೇಣಿಗೆ ಕೊಡುವ ಯಶ್ ಪಾಲಿಗೆ ಆತನ ತಾಯಿ ಮಾಡುವ ಒಂದು ಚೀಟಿ ವ್ಯವಹಾರ ದುಬಾರಿಯಾಗ್ತಿದೆ.ಆಕೆ ಬೀದಿಗೆ ನಿಂತು ಸೆಡ್ಡು ಹೊಡೆವ ಕಾಂಪೌಂಡ್‌ ಕಿರಿಕ್‌ ಯಶ್ ಅವರ ಕಣ್ಣಲ್ಲಿ ಮತ್ತೆ ಬಾಲ್ಯದ ಅವಮಾನದ ಕಣ್ಣೀರನ್ನು ತರಿಸುತ್ತದೆ. ತನ್ನ ಹಡೆದವ್ವಳ ಹಠದ ಎದುರು ಆತನದ್ದು ನಿಸ್ಸಹಾಯಕ ಸ್ಥಿತಿ, ಕಡುಭ್ರಷ್ಟ ಅಧಿಕಾರಿ ಎದುರು ನಿಂತ ಬಡ ರೈತನಂತೆ.

ತನ್ನ ನಟನೆಯಿಂದ ಸಹೃದಯರ ಕಣ್ಣು ತೇವಗೊಳಿಸುವ, ದುಃಖಿತ ಮನಗಳಿಗೆ ಪ್ರೀತಿಯ ಸಿಂಚನ ಕೊಡುವ ರಶ್ಮಿಕಾ ಅವರ ಖಾಸಗಿ ಸ್ಥಿತಿಯೂ ಅದೇ. ಆಕೆಯನ್ನು ಬಿಟ್ಟೂಬಿಡದೆ ಕಾಡುವ ಬಾಲ್ಯದ ‌ ಕಹಿ ಘಟನೆ. ಆಕೆಯ ತಾಯಿ ಆಡಿರುವ ಮಾತುಗಳಲ್ಲಿ ಅವರ ವ್ಯಕ್ತಿತ್ವ ವ್ಯಕ್ತವಾಗಿದೆ. ಇದನ್ನೇ ಹಿಡಿದು ರಶ್ಮಿಕಾ ಮೇಲೆ ದಾಳಿ. ಜತೆಗೆ ಇಂಡಸ್ಟ್ರಿ ಯಲ್ಲಿ ಕ್ಲಿಕ್‌ ಆದಳು ಎಂಬ ಅಸೂಯೆ. ಪ್ರಪೋಗಾಂಡ ಪೂರಿತ ಪ್ರಶ್ನೆಗಳು ರಶ್ಮಿಕಾಳನ್ನು ಜರ್ಝರಿತವಾಗಿಸುತ್ತಿವೆ. ಮದುವೆಯ ಮೆಹಂದಿ ಅಳಿಸುವ ಮುನ್ನವೇ ಆಕೆಯನ್ನು ಅಳಿಸಲಾಗ್ತಿದೆ. ದಾಂಪತ್ಯದ ಸುಖದ ಎದುರು ಇರಿವ ಮಾತುಗಳ ವಿಘ್ನ.

ನಮ್ಮ ಸಮಾಜವೇ ಹಾಗೆ. ಅದು ಬಹುತೇಕ ಸಾಧಕರನ್ನು ಹೀಗೆಯೇ ಅಳಿಸುತ್ತದೆ. ವಿಭಿನ್ನವಾಗಿರುವವರ ಮೇಲೆ ನಿತ್ಯ ದಾಳಿ. ಅವರ ಮುಖಕ್ಕೆ ಮಸಿ ಬಳಿವಲ್ಲಿ ಜನಕ್ಕೆ ಏನೋ ಒಂದು ಖುಷಿ. ಸಮಾಜದ ಈ ವಿಕೃತ ಸಂತೋಷಕ್ಕೆ ಸೆಲಬ್ರಿಟಿಗಳೇ ಬಲಿಪಶುಗಳು. ಕೆಲವರು ಏಕಾಂತದಲ್ಲಿ ಅತ್ತರೆ, ಕೆಲವರದ್ದು ಸಾರ್ವಜನಿಕವಾಗಿ ನೇಣುಗಂಬಕ್ಕೆ ಏರುವ ಸ್ಥಿತಿ.
ಇಂಥ ಅಸಹಾಯಕ ಸ್ಥಿತಿ ಕೇವಲ ಸೆಲಬ್ರಿಟಿಗಳಿಗಷ್ಠೇ ಸೀಮಿತವಲ್ಲ. ನಿಮ್ಮ ಊರಲ್ಲಿ, ಕೆಲಸದ ಜಾಗದಲ್ಲಿ ಕೊಂಚ ಮೇಲೆ ಬಂದವನೂ ಈ ಶಿಕ್ಷೆಗೆ ಗುರಿಯಾಗಲೇಬೇಕು. ಕೊಂಚ ಭಿನ್ನವಾಗಿ ಯೋಚಿಸುವ, ಸಾಧನೆಯ ಕನಸು ಕಾಣುವವರ ಪಾಲಿಗೆ ಅವರ ಸ್ನೇಹಿತರು, ನೆಂಟರಿಸ್ಟರು, ಸಹೋದ್ಯೋಗಿಗಳು, ಕಾಂಪಿಟೇಟರ್‌ ಗಳೇ ಶತೃಗಳು. ಅವನು ಅವಳು ಎಷ್ಟೇ ಬೆಳೆದರೂ ಸಮಾಜ ಅವರನ್ನು ನಿನ್ನ ಜಾಗ ಇಲ್ಲಿದೆ ಎನ್ನುತ್ತಾ ತಾವಿರುವ ಗಟಾರಕ್ಕೆ ಎಳೆಯುತ್ತದೆ.

ಉ ಕ ರಾಜಕಾರಣಿಯೊಬ್ಬ ಬಾರ್ ಗರ್ಲ್ ಗೆ ಮಗು ಕರುಣಿಸಿ ಆಕೆಯ ರಾಜಕಾರಣಿ ಪತ್ನಿವೈ ನೆಮ್ಮದಿ ಕಸಿದುಬಿಟ್ಟ. ಮಾತಾಡಿದ್ರೆ ಮಾನ ಹೋಗುವ ಭಯದಲ್ಲಿದ್ದಾಳೆ ಆ ಮನವಂತೆ.
ನಟನೊಬ್ಬ ಲಂಪಟ ಆದ ಎಂದು ಅತನ ಪತ್ನಿ ಸೇಡಿಗೆ ಬಿದ್ದು ಖಾಕಿಯೊಬ್ಬ ತೆಕ್ಕೆಗೆ ಜಾರಿ ಮಾಡಬಾರದ ಕೆಲ್ಸ್ ಮಾಡಿಬಿಟ್ಟರು. ಮತ್ತೊಬ್ಬ ನಟನ್ ಪತ್ನಿ ರಾದ್ಧಾಂತ ಮಾಡಿ ಡ್ರೈವರ್ ಸಂಗ ಮಾಡಿ ನಟನ ಕೆರಿಯರ್ ಗೆ ಕೊಳ್ಳಿಯಿಟ್ಟುಬಿಟ್ಟಳು.

ಕುಟುಂಬದ ಸದಸ್ಯರ ಇಮ್ಯೇಚುರಿಟಿಯಿಂದ ನೆಮ್ಮದಿ ಕೆಡಿಸಿಕೊಂಡ ನಟರು, ಲೀಡರ್ಸ್ ಗಳ ಪಟ್ಟಿ ಸಣ್ಣದು ಎಂದುಕೊಂಡಿದ್ದೀರಾ..?
ನಮ್ಮ ಸಮಾಜದ ಭಿನ್ನ ವ್ಯಕ್ತಿಗಳ ಕಣ್ಣಲ್ಲಿ ಚಂದ್ರ ನಿತ್ಯ ನೇಣುಹಾಕಿಕೊಳ್ಳುತ್ತಾನೆ.

Comments (0)

Your email address will not be published. Required fields are marked *

Back to top button