ಮಂಡ್ಯ: ಇ.ಡಿಗೆ (ED) ತನಿಖೆ ಮಾಡಲು ಅಧಿಕಾರವೇ ಇಲ್ಲ. ಇದು ರಾಜಕೀಯ ಪ್ರೇರಿತ ಹಾಗೂ ದುರುದ್ದೇಶ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಟೀಕಿಸಿದರು.
ಮಂಡ್ಯದ ಕೆಆರ್ ಪೇಟೆಯಲ್ಲಿ ಮಾತನಾಡಿದ ಅವರು, ಇಡಿ ಬಂದಿರೋದು ರಾಜಕೀಯ ಪ್ರೇರಿತವಾಗಿದೆ. ನಾಳೆ ನ್ಯಾಯಾಲಯದಲ್ಲಿ ಕೇಸ್ ಬರ್ತಾ ಇದೆ. ಸಿಂಗಲ್ ಜಡ್ಜ್ ಬೆಂಚ್‌ನಲ್ಲಿ ಬರುತ್ತೆ. ನಾವು ಹಾಕಿರೋ ಅಪೀಲು ಅದು. ಈಗ ಇ.ಡಿ ಅವರು ಮಾಡ್ತಾ ಇದಾರೆ ಅಂದ್ರೆ ಏನು ಅರ್ಥ? ಇ.ಡಿ ಅವರಿಗೆ ಯಾವುದೇ ಅಧಿಕಾರವೂ ಇಲ್ಲ. ಕೋರ್ಟ್ ಮೇಲೆ ಒತ್ತಡ ಹಾಕಲು ಹೀಗೆ ಮಾಡಿದ್ದಾರೆ. ಲೋಕಾಯುಕ್ತ ತನಿಖೆ ಮಾಡ್ತಾ ಇದ್ದಾರೆ. ತನಿಖೆ ಮಾಡಿ ಅವರು ವರದಿ ನೀಡ್ತಾರೆ. ಲೋಕಾಯುಕ್ತ ಮೇಲೆ ಒತ್ತಡ ಹಾಕಲು ಮಾಡ್ತಾ ಇದ್ದಾರೆ. ಇದು ರಾಜಕೀಯ ಪ್ರೇರಿತ ಹಾಗೂ ದುರುದ್ದೇಶ ಎಂದು ಅಸಮಾಧಾನ ಹೊರಹಾಕಿದರುಇಡಿಗೆ ತನಿಖೆ ಮಾಡಲು ಅಧಿಕಾರ ಇಲ್ಲ. ರಾಜ್ಯಾಪಾಲರು ತನಿಖೆ ಮಾಡಿ ಅಂತಾ ಲೋಕಾಯುಕ್ತಾಗೆ ಹೇಳಿರೋದು. ಕೋರ್ಟ್ ಸಹ ಡಿ.24ಕ್ಕೆ ತನಿಖೆ ವರದಿ ನೀಡಿ ಅಂತಾ ಹೇಳಿದ್ದಾರೆ. ಈಗ ಇಡಿ ಯಾಕೆ ಲೆಟರ್ ಬರೆಯುತ್ತಾರೆ? ರಾಜಕೀಯವಾಗಿ ಇಡಿ ಈ ಕೇಸ್ ಮಾಡ್ತಾ ಇದೆ. ತನಿಖೆ ಮಾಡಿ ಈಗ ಯಾಕೆ ಮಾಹಿತಿಯನ್ನು ಸೋರಿಕೆ ಮಾಡ್ತಾ ಇದ್ದಾರೆ. ಪಿಟಿಐ ಹಾಗೂ ಮಾಧ್ಯಮಗಳಿಗೆ ರಿಲೀಜ್ ಮಾಡಿರೋದು ಕಾನೂನು ಬಾಹಿರ ಎಂದು ವಿರೋಧ ವ್ಯಕ್ತಪಡಿಸಿದರು.

ಡಿಕೆಶಿಯಿಂದ ಒಪ್ಪಂದ ಹೇಳಿಕೆ ವಿಚಾರವಾಗಿ ಮಾತನಾಡಿ, ನಮ್ಮ ನಡುವೆ ಯಾವುದೇ ಒಪ್ಪಂದ ಆಗಿಲ್ಲ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ಅದರಂತೆ ನಡೆದುಕೊಳ್ಳೋದು ಎಂದು ಸ್ಪಷ್ಟಪಡಿಸಿದರು.ಸದ್ಯಕ್ಕೆ ಸಚಿವ ಸಂಪುಟ ಪುನಾರಚನೆ ಆಗಲ್ಲ. ನಾನು ಇದುವರೆಗೆ ಹೇಳಿಲ್ಲ. ಯಾರು ಹೇಳ್ತಾರೆ ಅನ್ನೋದು ಮುಖ್ಯವಲ್ಲ. ಹೈಕಮಾಂಡ್ ಸೂಚನೆ ನೀಡಬೇಕು. ಆ ಬಳಿಕ ನಾನು ನಿರ್ಧಾರ ಮಾಡಬೇಕು. ಹೈಕಮಾಂಡ್ ಹೇಳಿಯೂ ಇಲ್ಲ, ನಾನು ತೀರ್ಮಾನವನ್ನು ತೆಗೆದುಕೊಂಡಿಲ್ಲ ಎಂದು ಹೇಳಿದರು.

 

Leave a Reply

Your email address will not be published. Required fields are marked *

Verified by MonsterInsights