Top Newsರಾಜಕೀಯ

ಯಮುನಾ ನದಿಯಲ್ಲಿ ಮನಮೋಹನ್ ಸಿಂಗ್​ ಅಸ್ಥಿ ವಿಸರ್ಜನೆ

ನವದೆಹಲಿ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಸ್ಥಿಯನ್ನು ಮಜ್​​ನೂ ಕಾ ತಿಲಾ ಗುರುದ್ವಾರದ ಬಳಿ ಇರುವ ಯಮುಮನಾ ನದಿಯಲ್ಲಿ ಭಾನುವಾರ ವಿಸರ್ಜನೆ ಮಾಡಲಾಯಿತು.

ಸಿಂಗ್ ಅವರ ಅಂತ್ಯಕ್ರಿಯೆ ನಡೆದಿದ್ದ ನಿಗಮ್ ಬೋಧ್ ಘಾಟ್​​​​ನಿಂದ ಭಾನುವಾರ ಬೆಳಿಗ್ಗೆ ಅಸ್ಥಿಯನ್ನು ಸಂಗ್ರಹಿಸಿದ ಅವರ ಕುಟುಂಬಸ್ಥರು, ಬಳಿಕ ಅದನ್ನು ಯಮುನಾ ನದಿ ದಂಡೆಯಲ್ಲಿ ಅಸ್ಥ್ ಘಾಟ್​ಗೆ ತಂದರು. ನಂತರ ಸಿಖ್ ಧರ್ಮದ ಪ್ರಕಾರ ವಿಧಿವಿಧಾನಗಳನ್ನು ನೆರವೇರಿಸಿ, ಚಿತಾಭಸ್ಮವನ್ನು ವಿಸರ್ಜಿಸಲಾಯಿತು.

ಅಸ್ಥಿ ವಿಸರ್ಜನೆ ವೇಳೆ ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಮತ್ತು ಪುತ್ರಿಯರಾದ ಉಪಿಂದರ್ ಸಿಂಗ್, ದಮನ್ ಸಿಂಗ್ ಮತ್ತು ಅಮೃತ್ ಸಿಂಗ್ ಅವರು ಉಪಸ್ಥಿತರಿದ್ದರು.

ಮೋತಿಲಾಲ್ ನೆಹರೂ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಸಿಂಗ್ ಕುಟುಂಬಸ್ಥರು, ಸಿಖ್ ವಿಧಿವಿಧಾನಗಳ ಅನ್ವಯ ಜನವರಿ 1 ರಂದು ಅಖಂಡ ಪಥ್ ನಡೆಸಲಿದ್ದಾರೆ. ಸಂಸತ್ತಿನ ಬಳಿಯಿರುವ ರಖಬ್ ಗಂಜ್ ಗುರುದ್ವಾರದ ಬಳಿ ಜನವರಿ 3ರಂದು ಭೋಗ್ ಕಾರ್ಯಕ್ರಮ ಅಂತಿಮ ಅರ್ದಾಸ್ ಮತ್ತು ಕೀರ್ತನ್ ನಡೆಯಲಿವೆ.

92 ವರ್ಷದ ಸಿಂಗ್ ಅವರು ಆನಾರೋಗ್ಯದಿಂದಾಗಿ ಡಿ.26ರಂದು ನಿಧನ ಹೊಂದಿದ್ದರು. ದೆಹಲಿತ ನಿಗಮ್ ಬೋಧ್ ಘಾಟ್​ನಲ್ಲಿ ಶನಿವಾರ ಅವರ ಅಂತ್ಯಕ್ರಿಯೆ ನಡೆಯಿತು.

Comments (0)

Your email address will not be published. Required fields are marked *

Back to top button