ನವದೆಹಲಿ: ಮಯನ್ಮಾರ್ ಹಾಗೂ ಥೈಲ್ಯಾಂಡ್ ಪ್ರಬಲ ಭೂಕಂಪಕ್ಕೆ ತತ್ತರಿಸಿ ಹೋಗಿವೆ. ಈ ಎರಡು ದೇಶಗಳ ಮಧ್ಯೆ 735 ಮೈಲಿಯಷ್ಟು ಅಂತರವಿದೆ. ಈ ದೇಶದಲ್ಲಿ ಈಗ ಗಂಟೆಗಳು ಉರುಳಿದಂತೆ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಅವಶೇಷಗಳಡಿ ಸಿಲುಕಿದ್ದ ಅನೇಕರು ಪ್ರಾಣ ಬಿಟ್ಟಿದ್ದು, ಸದ್ಯದ ಮಾಹಿತಿ ಪ್ರಕಾರ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 1,000ಕ್ಕೂ ಹೆಚ್ಚಾಗಿದೆ.
ಮಯನ್ಮಾರ್‌ಗಿಂತಲೂ ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಭೂಕಂಪಕ್ಕೆ ಅಧಿಕ ಅನಾಹುತ ನಡೆದಿದೆ. ಇಲ್ಲಿ ಅವಶೇಷಗಳಡಿ ಸಿಲುಕಿದ್ದವರ ಶವಗಳು ಸಿಕ್ಕಿದ್ದರಿಂದ ಸಾವು- ನೋವಿನ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಗಾಯಾಳುಗಳಿಗೆ ರಕ್ತದಾನ ಮಾಡುವಂತೆ ಸೇನೆ ಮನವಿ ಮಾಡಿಕೊಂಡಿದೆ. ಬದುಕುಳಿದವರ ಚಿಕಿತ್ಸೆಗೆ ಭಾರತ 15 ಟನ್ ರಕ್ಷಣಾ ಸಾಮಗ್ರಿಯನ್ನು ಈಗಾಗಲೇ ಕಳುಹಿಸಿದೆ