ಅಯ್ಯೋ…ರೇಣುಕಾ ಕೊಲೆ…ಆಕಸ್ಮಿಕ ಅಲ್ಲಪ್ಪಾ !
ದಚ್ಚು ಆರ್ಡರ್-ಮರ್ಡರ್…ಖಾತ್ರಿ…ಕ್ಯಾಕರಿಸಿರಪ್ಪಾ !
ವಾ.ಓ: ದರ್ಶನ್ ಕೊನೆಗೂ ಕಂಬಿ ಎಣಿಸುವುದನ್ನು ಖಾಯಂ ಮಾಡಿಕೊಳ್ಳುವ ಹಾದಿಯಲ್ಲಿದ್ದಾರೆ. ಮೊನ್ನೆ ಮೊನ್ನೆವರೆಗೆ ಇನ್ನೇನು ಜಾಮೀನು ಸಿಕ್ಕಿ ಬಿಡುತ್ತದೆ, ಪರಪ್ಪನ ಅಗ್ರಹಾರದಿಂದ ಆರ್‌ಆರ್ ನಗರದ ತೂಗುದೀಪ ನಿಲಯದವರೆಗೆ ಮೆರವಣಿಗೆ ಮಾಡಿಕೊಂಡು ಹೋಗುತ್ತೇವೆ, ಪಟಾಕಿ ಹಚ್ಚುತ್ತೇವೆ, ಎಣ್ಣೆ ಹೊಡೆದು ಕೇಕೆ ಹಾಕುತ್ತೇವೆ..ಹೀಗಂತ ಆ ವ್ಯಕ್ತಿಯ ಗ್ಯಾಂಗು ಶಪಥ ಮಾಡಿತ್ತು. ಆದರೆ ಈಗ ಹೊರ ಬೀಳುತ್ತಿರುವ ಸುದ್ದಿ ಕೇಳಿದರೆ ಸಾಕು, ದಾಸನಿಗೆ ಪರಪ್ಪನ ಅಗ್ರಹಾರವೇ ಕೆಲವು ವರ್ಷ ಖಾಯಂ ಆಗಲಿದೆ.
ವಾ.ಓ: ಡಿ ಗ್ಯಾಂಗ್…ರೇಣುಕಾಸ್ವಾಮಿಯನ್ನು ಕೊಲೆ ಮಾಡಿ ಅಕಸ್ಮಿಕವಾಗಿ ಸಿಕ್ಕಿಬಿದ್ದಿತ್ತು. ಕಾಸು ಕೊಟ್ಟು ಮೂವರು ಆರೋಪಿಗಳನ್ನು ಕೊಲೆಗಾರರರು ಎಂದು ಬಿಂಬಿಸಿದ್ದರು ದರ್ಶನ್. ಅದೇ ರೀತಿ ಪ್ಲಾನ್ ವರ್ಕ್ಔಟ್ ಆಗುತ್ತದೆ. ನನ್ನನ್ಯಾರು ಹಿಡಿಯೋರು ? ಯಜಮಾನ ನಾನಲ್ಲವಾ ? ಲಕ್ಷಾಂತರ ಅಭಿಮಾನಿಗಳು ಜೊತೆಗಿಲ್ಲವಾ ? ರಾಜಕಾರಣಿಗಳ ಸಂಪರ್ಕ ನನಗಿಲ್ಲವಾ ? ಹೀಗೆ ಬಾಲ ಬಡಿದುಕೊಂಡು ನಕ್ಕಿದ್ದರು ಅವರೆಲ್ಲ…ಆದರೆ ಕರ್ಮ ಕರೆಯದೇ ಇರುತ್ತಾ ? ಈಗ ತಗುಲು ಹಾಕಿಕೊಂಡು ಮುದ್ದೆ ಮುರಿಯುತ್ತಿದ್ದಾರೆ…ಅದು ಇನ್ನಷ್ಟು ವರ್ಷ ರಿನ್ಯೂವಲ್ ಆಗಲಿದೆ…ನೋ ಡೌಟ್…
ವಾ.ಓ: ರೇಣುಕಾಸ್ವಾಮಿಯನ್ನು ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಹೊಡೆದು, ಬಡಿದು, ಹೆದರಿಸಿ…ಅದನ್ನು ವಿಡಿಯೋ ಮಾಡಿ, ಸಾಮಾಜಿಕ ತಾಣದಲ್ಲಿ ಹಾಕಬೇಕು. ಬೇರೆ ಯಾರಾದರೂ ಇದೇ ರೀತಿ ಪರಮ ಪತಿವ್ರತೆ ಪವಿತ್ರಾ ಗೌಡಳನ್ನು ಕೀಳಾಗಿ ನೋಡಿದರೆ, ಸಂದೇಶ ಕಳಿಸಿದರೆ ಅವರಿಗೂ ಇದೇ ಗತಿ ಎಂದು ತೋರಿಸಬೇಕು. ಇದು ಮೊದಲಿದ್ದ ಅಜೆಂಡಾ. ಇದರಲ್ಲಿ ರೇಣುಕಾ ಸ್ವಾಮಿಯನ್ನು ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಹೀಗಂತ ಎಪ್ಪತ್ತು ದಿನದ ಹಿಂದೆ ಸಿಕ್ಕ ಸಾಕ್ಷಿ ಮಾತಾಡಿದ್ದವು. ಆದರೀಗ ಕೇಸ್ ಉಲ್ಟಾ ಪಲ್ಟಾ…
ವಾ.ಒ: ಬೆಂಗಳೂರಿನ ಖಾಕಿ ಪಡೆ ಅದ್ಯಾವ ರೀತಿ ಈ ಕೇಸ್‌ಗೆ ಪಾತಾಳ ಗರಡಿ ಹಾಕಿಬಿಟ್ಟಿತು ಗೊತ್ತೆ ? ಇದುವರೆಗೆ ಪೊಲೀಸ್ ಇಲಾಖೆ ಅನೇಕ ಸಾಕ್ಷಿಗಳನ್ನು ಕೂಡಿ ಹಾಕಿದೆ. ನಾಲ್ಕು ಸಾವಿರ ಪುಟಗಳ ವರದಿಯನ್ನು ತಯಾರಿಸಿದೆ. ಎರಡು ನೂರಕ್ಕೂ ಹೆಚ್ಚು ಸಾಕ್ಷಿಗಳನ್ನು ಗಣನೆಗೆ ಪಡೆದುಕೊಂಡಿದೆ. ಪ್ರತ್ಯಕ್ಷ ಪರೋಕ್ಷ ಸಾಕ್ಷಿಗಳನ್ನು ಮಾತಾಡಿಸಿದೆ. ಎಲ್ಲವನ್ನೂ ಅಳೆದು ತೂಗಿದೆ. ಅದೆಲ್ಲದರ ಪರಿಣಾಮ ಏನು ಗೊತ್ತೆ ? ದರ್ಶನ್ ಅಂಡ್ ಗ್ಯಾಂಗ್ ರೇಣುಕಾಸ್ವಾಮಿಯನ್ನು ಕೊಲೆ ಮಾಡಲೆಂದೇ ಸಕಲ ಮಾಡಿಕೊಂಡಿತ್ತು. ಅನುಮಾನ ಇಲ್ಲ ಎನ್ನುತ್ತಿದೆ ಖಾಕಿ ಮೂಲ.
ವಾ.ಓ: ರೇಣುಕಾಸ್ವಾಮಿಯನ್ನು ಒಂದು ತಿಂಗಳಿAದ ಬೆನ್ನುಬಿದ್ದಿದ್ದು ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ. ಈತನೇ ಮೊದಲು ರೇಣುಕಾಗೆ ಬೇರೊಂದು ಅಕೌಂಟ್‌ನಿAದ ಸಂಪರ್ಕ ಮಾಡಿದ್ಧಾನೆ. ಹುಡುಗಿ ಹೆಸರಿನಲ್ಲಿ ಖೆಡ್ಡಾಕ್ಕೆ ಕೆಡವಿದ್ದಾನೆ. ಕೊನೆಗೆ ರೇಣುಕಾಸ್ವಾಮಿಯನ್ನು ಅಪಹರಣ ಮಾಡಲಾಗಿದೆ. ಅದಕ್ಕೆ ಇನ್ನಿಬ್ಬರು ಸೆಲೆಬ್ರಿಟಿಗಳು ಸೇರಿಕೊಂಡಿವೆ. `ನಮ್ಮ ಈ ಪುಣ್ಯಕಾರ್ಯದಿಂದ ದರ್ಶನ್‌ಗೆ ಸಮಾಧಾನವಾದರೆ ಸಾಕು..’ ಇದೇ ಸೆಲೆಬ್ರಿಟೀಸ್ ª
ÀÄನಸಲ್ಲಿ ಇತ್ತು. ಈಗ ಬಾಲ ಮುಚ್ಚಿಕೊಂಡು ಮುಲುಗುತ್ತಿವೆ ಎಲ್ಲವೂ…
ವಾ.ಓ: ರೇಣುಕಾಸ್ವಾಮಿಯನ್ನು ದುರ್ಗದಿಂದ ಬೆಂಗಳೂರಿನ ಆರ್‌ಆರ್ ನಗರದ ದರ್ಶನ್ ಮನೆಗೆ ಮೊದಲು ಕರೆತಂದಿದ್ದು, ನಂತರ ಶೆಡ್‌ನಲ್ಲಿ ಇಟ್ಟಿದ್ದು, ಬರೋಬ್ಬರಿ ಹದಿನೆಂಟು ಮಂದಿ ದಾಂಢಿಗರು ಸಣಕಲು ರೇಣುಕಾಗೆ ಹಿಗ್ಗಾಮುಗ್ಗಾ ಹೊಡೆದಿದ್ದು, ಕೊನೆಗೆ ದರ್ಶನ್ ಅಂಡ್ ಪವಿತ್ರ ಕೂಡ ಪ್ರತಾಪ ತೋರಿಸಿದ್ದು, ಮೈ ಕೈ ತುಂಬಾ ಬಾರಿಸಿದ್ದು, ರಕ್ತಪಾತ ಮಾಡಿದ್ದು, ಬೇಡಿಕೊಂಡರೂ ಗಹಗಹಿಸಿ ನಕ್ಕಿದ್ದು…ಅಂತಿಮವಾಗಿ ರೇಣುಕಾ ಮರಣ ಹೊಂದಿದ್ದು…ಇದನ್ನೆಲ್ಲ ನೋಡಿ…ಸಾಕ್ಷಿಗಳನ್ನು ಪರಿಗಣಿಸಿ ಖಾಕಿ ಅಂತಿಮ ತೀರ್ಮಾನಕ್ಕೆ ಬಂದಿದೆ. ಇದು ಪ್ರಿಪ್ಲಾನ್ಡ್ ಮರ್ಡರ್. ಇದರ ರೂವಾರಿ ದರ್ಶನ್…ಫಿನಿಶ್…
ವಾ.ಓ: ಇದುವರೆಗೆ ಆರೋಪಿ ನಂಬರ್ ೨ ಆಗಿದ್ದ ದರ್ಶನ್‌ಗೆ ಪ್ರಮೋಶನ್ ಸದ್ಯದಲ್ಲೇ ಸಿಗಲಿದೆ. ನಂಬರ್ ವನ್ ಪಟ್ಟವನ್ನು ಶರವೇಗದಲ್ಲಿ ದಾಸ ಅಲಂಕರಿಸಲಿದ್ದಾರೆ. ಆ ಮೂಲಕ ಕರುನಾಡಿನಲ್ಲಿ ನಾನೇ ನಂಬರ್ ವನ್ ಹೀರೋ ಎನ್ನುತ್ತಿದ್ದ ದಾಸನಿಗೆ ಖಾಕಿ ಪಡೆ ಅದೇ ಬಿರುದನ್ನು ಈ ಕೇಸ್‌ನಲ್ಲೂ ದಯಪಾಲಿಸಲಿದೆ. ಜೀವನ ಸಾರ್ಥಕ ಆಯಿತಲ್ಲವೆ ಸಾರಥಿ ? ಪವಿತ್ರ ಗೌಡ…ಆರೋಪಿ ನಂಬರ್ ವನ್ ಪಟ್ಟದಿಂದ ಕೊಂಚ ಕೆಳಗೆ ಇಳಿಯಲಿದ್ದಾರೆ. ಅವರಿಗೆ ಯಾವ ಕಿರೀಟ ತೊಡಿಸುತ್ತದೊ ಖಾಕಿ ಲಾಠಿ ? ನೋಡೋಣ…ಕಾಯೋಣ…
ವಾ.ಓ: ರೇಣುಕಾಸ್ವಾಮಿ ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಬರೀ ಬೆದರಿಸಿ, ವಿಡಿಯೋ ಮಾಡಿ ಕಳಿಸುವ ತಯಾರಿ ನಡೆದಿತ್ತು. ಹೀಗಂತ ಎಲ್ಲರೂ ತಿಳಿದಿದ್ದರು. ಪೊಲೀಸರಿಗೂ ಇದೇ ಅನುಮಾನ ಇತ್ತು. ಆದರೆ ಎಪ್ಪತ್ತು ದಿನಗಳಲ್ಲಿ ಏನೇನೊ ಆಗಿ ಹೋಗಿದೆ. ಒಂದೊAದೇ ಮಾಹಿತಿ, ಒಂದೊAದೇ ಸಾಕ್ಷಿ…ಒಂದೊAದೇ ವಿವರ…ದಕ್ಕುತ್ತಾ ದಕ್ಕುತ್ತಾ…ಕೊನೆಗೆ ಅದು ದರ್ಶನ್ ಬಂಗಲೆಗೆ ಮುಳ್ಳು ಬೇಲಿ ಹಾಕುವ ಅದೃಷ್ಟವನ್ನು ಕೊಟ್ಟಿದೆ. ತೂಗುದೀಪ ನಿಲಯ ಮುಖ ಮುಚ್ಚಿಕೊಂಡಿದೆ…
ವಾ.ಓ: ನೋಡಿ….ಇದು ಬರೀ ಸಿನಿಮಾ ಮಂದಿಗೆ ಮಾತ್ರ ಅಲ್ಲ. ಎಲ್ಲರಿಗೂ ಪಾಠವಾಗಬೇಕು. ಕಾನೂನು ಎಲ್ಲರಿಗೂ ಒಂದೇ ಎನ್ನುವುದು ಅರಿವಾಗಬೇಕು. ನಾನೇ ಬೇರೆ ನನ್ನ ಸ್ಟೆöÊಲೇ ಬೇರೆ ಎಂದು ಪಾಳೇಗಾರಿಕೆ ನಡೆಸಲು ಹೋದರೆ ದರ್ಶನ್ ಗತಿ ನಿಮಗೂ ಅಮರಿಕೊಳ್ಳುತ್ತದೆ. ಜೊತೆಗೆ ಸೆಲೆಬ್ರಿಟೀಗಳೂ ಇದನ್ನು ಮೆದುಳಲ್ಲಿ ತುರುಕಿಕೊಳ್ಳಬೇಕು. `ನಮ್ ಬಾಸ್ ಕೈ ಬಿಡಲ್ಲ…’ ಎಂದು ರಕ್ತಪಾತಕ್ಕೆ ಇಳಿದರೆ ಯಾವನೂ ಬರಲ್ಲ. ಅವರ ಜೀವನ ಅವರಿಗೆ ಅಲ್ಲವೆ ?. ಅದಕ್ಕೆ ಸಾಕ್ಷಿಯಾಗಿ ಉಳಿದ ಆರೋಪಿಗಳ ಒದ್ದಾಟ…ಸಂಕಟ…
ವಾ.ಓ: ಈಗ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಲು ಸಜ್ಜಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಸಕಲ ಸಾಕ್ಷಿಗಳನ್ನು ವರದಿ ರೂಪದಲ್ಲಿ ಕೋರ್ಟ್ ಮುಂದೆ ಹಾಜರು ಪಡಿಸಲಿದ್ದಾರೆ. ಯಾವುದೇ ರೀತಿ ದರ್ಶನ್ ಈ ಕುಣಿಕೆಯಿಂದ ತಪ್ಪಿಸಕೊಳ್ಳಬಾರದು, ಇದುವರೆಗೆ ಮಾಡಿದ್ದೆಲ್ಲ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಬಾರದು. ಇಡೀ ದೇಶವೇ ನೋಡುತ್ತಿರುವ ಈ ಪ್ರಕರಣವನ್ನು ತಾರ್ಕಿಕ ಅಂತ್ಯಗೊಳಿಸಬೇಕು. ಅದು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು…ಸೇಮ್ ಟೈಮ್ ಪಾಠವೂ ಆಗಬೇಕು.
ವಾ.ಓ: ಮೊಬೈಲು, ಸಿಸಿ ಕ್ಯಾಮೆರಾ, ಆಧುನಿಕ ತಂತ್ರಜ್ಞಾನ…ಇತ್ಯಾದಿ ಇತ್ಯಾದಿಗಳ ಸಾಕ್ಷಿಗಳನ್ನು ಖಾಕಿ ಕೂಡಿ ಹಾಕಿದೆ. ಸುಮ್ಮಸುಮ್ಮನೆ ಅವರು ಡಿ ಗ್ಯಾಂಗ್ ಬುಡಕ್ಕೆ ನೀರು ಬಿಟ್ಟಿಲ್ಲ. ಹಾಗೆ ಮಾಡಿದರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ. ಇಷ್ಟಿದ್ದರೂ ಕೆಲವು ಸೆಲೆಬ್ರಿಟಿಗಳು ಏನೆಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ ಗೊತ್ತೆ ? `ದರ್ಶನ್‌ಗೆ ಡ್ಯಾಮೇಜ್ ಮಾಡಲು ಇದೆಲ್ಲ ಹುನ್ನಾರ ನಡೆಯುತ್ತಿದೆ. ಯಾರೋ ದುಡ್ಡು ಕೊಟ್ಟು ಮಾಡಿಸುತ್ತಿದ್ಧಾರೆ…’ ಹೀಗೆ ಬೊಗಳುತ್ತಿವೆ. ಅಯ್ಯೋ…ನಿಮ್ಮ ಮೆದುಳಿಗೆ ಲಕ್ವಾ ಹೊಡೆಯಾ…
ವಾ.ಓ: ಯಾವನು ಎಷ್ಟು ಉರುಳಾಡಿ…ನೆಗೆದು ಬಿದ್ದರೂ…ವಿಷ ಕುಡಿದು ಸತ್ತರೂ…ಖಾಕಿ ನಿಯತ್ತಾಗಿ ಕೆಲಸ ಮಾಡುತ್ತಿದೆ. ಅದರ ಫಲಿತಾಂಶ ಎಲ್ಲರ ಕಣ್ಣ ಮುಂದಿದೆ. ಬರೀ ಕರುನಾಡಿನ ಜನರು ಮಾತ್ರ ಅಲ್ಲ. ದೇಶದ ಜನರೂ ದರ್ಶನ್ ಪ್ರಕರಣವನ್ನು ಬಯಲಿಗೆ ಎಳೆದ ರೀತಿ ಹಾಗೂ ತೆಗೆದುಕೊಂಡು ಹೋಗುತ್ತಿರುವ ರೀತಿಗೆ ಶಬ್ಬಾಶ್ ಎನ್ನುತ್ತಿದ್ದಾರೆ. ಇವರ ಶ್ರಮ ಸಾರ್ಥಕವಾಗುವ ಸಮಯ ಇನ್ನೇನು ಕಣ್ಣ ಮುಂದಿದೆ. ಕಾಟೇರ ವರ್ಷಗಟ್ಟಲೆ ಒಣಗಿದ ಕುರವನ್ನು ಕೆರೆದುಕೊಳ್ಳುತ್ತಾ ಜೀವನ ನಡೆಸುವ ಕ್ಷಣ ಶೀಘ್ರದಲ್ಲಿ ಪರದೆ ಮುಂದೆ…ನಿರೀಕ್ಷಿಸಿ…
-ಮಹೇಶ್ ದೇವಶೆಟ್ಟಿ, ಫಿಲ್ಮ್ಬ್ಯೂರೊ, ಫ್ರೀಡಂ ಟಿವಿ