ಆತ ವಿಜಯವಾಡದಲ್ಲಿ ಬಿ. ಟೆಕ್ ವ್ಯಾಸಂಗ ಮಾಡುತ್ತಿದ್ದ. ಪದೇ ಪದೇ ಬೆಂಗಳೂರಿನ ಮಾವನ ಮನೆಗೆ ಬಂದು ಹೋಗುತ್ತಿದ್ದ. ಅತ್ತೆಯ ಜೊತೆ ಸಲುಗೆಯಿಂದ ಇರುತ್ತಿದ್ದ ಅವ್ನು ಇತ್ತೀಚೆಗೆ ಹಲ್ಲು ನೋವಿಗೆ ಚಿಕಿತ್ಸೆಗೆಂದು ಮಾವನ ಮನೆಗೆ ಬಂದಿದ್ದ. ಆತ ಬಂದ ವಾರಕ್ಕೆ ಮುದ್ದಿನ ಅತ್ತೆ ನಾಪತ್ತೆ. ಅಷ್ಟಕ್ಕೂ ಮಿಸ್ ಆದ ಮುದ್ದಿನ ಅತ್ತೆ ಏನಾದ್ಲು ಗೊತ್ತಾ?

ಆಕೆಯ ಹೆಸರು ಸುಕನ್ಯಾ. ಬೆಂಗಳೂರಿನ ದೊಡ್ಡತೊಗೂರಿನಿಂದ ಕಾಣೆಯಾಗಿದ್ದ ಈಕೆ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾಳೆ. ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಪೋಡು ಗ್ರಾಮದ ಬಳಿ ಸುಕನ್ಯಾ ದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತನ್ನ ಪತಿ ಅಕ್ಕನ ಮಗನಿಂದಲೇ ಬರ್ಬರವಾಗಿ ಕೊಲೆಯಾಗಿದ್ದಾಳೆ. ವಿಜಯವಾಡದಲ್ಲಿ ಬಿ ಟೆಕ್ ವ್ಯಾಸಂಗ ಮಾಡುತ್ತಿದ್ದ ಪತಿಯ ಅಕ್ಕನ ಮಗ ಜಸ್ವಂತ್ ಕೊಲೆಗೈದ ಪಾಪಿ ಅಳಿಯ.

ಆಂಧ್ರದಿಂದ ವಲಸೆ ಬಂದಿದ್ದ ಸುಕನ್ಯಾ ಕುಟುಂಬ ದೊಡ್ಡ ತೊಗೂರಿನಲ್ಲಿ ನೆಲೆಸಿತ್ತು. ಪತಿ ಎಲೆಕ್ಟ್ರಿಕ್ ಪ್ಯಾನಲ್ ಬೋರ್ಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಸುಕನ್ಯಾ ಇಬ್ಬರು ಮಕ್ಕಳನ್ನು ಪೋಷಣೆ ಮಾಡುತ್ತಿದ್ದಳು. ಇದರ ನಡುವೆ ಆಗಿಂದಾಗ್ಗೆ ಬೆಂಗಳೂರಿಗೆ ಬರುತ್ತಿದ್ದ ಆರೋಪಿ ಜಶ್ವಂತ್ ಅತ್ತೆ ಸುಕನ್ಯಾ ಜೊತೆ ಸಲುಗೆಯಿಂದ ಇರುತ್ತಿದ್ದ, ತನಗೆ ಬೇಕಾದ ಆಡುಗೆ ಕೇಳಿ ಮಾಡಿಸಿಕೊಳ್ಳುತ್ತಿದ್ದ. ಇತ್ತೀಚಿಗೆ ಸಹ ಹಲ್ಲು ನೋವು ಎಂದು ಚಿಕಿತ್ಸೆಗೆ ಮಾವನ ಮನೆಗೆ ಬಂದಿದ್ದ ಆರೋಪಿ ಅತ್ತೆ ಬಳಿ ಹಣ ಕೇಳಿದ್ದ, ಮಾತ್ರವಲ್ಲದೆ ಗೋಲ್ಡ್ ಚೈನ್ ಗೆ ಲಾಕೆಟ್ ಸಹ ಕೇಳಿದ್ದವನಿಗೆ ಅತ್ತೆ ನಿರಾಸೆ ಮಾಡಿದ್ದಾಳೆ. ಇದಾದ ಒಂದು ವಾರಕ್ಕೆ ಕಾಣೆಯಾದ ಅತ್ತೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಇನ್ನೂ ಇದೇ ತಿಂಗಳು 11ನೇ ತಾರೀಖು ಅದೇ ಮೊದಲ ಬಾರಿಗೆ ಅಪಾರ್ಟ್ ಮೆಂಟ್ನಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕೆ ಹೋಗಿದ್ದ ಸುಕನ್ಯಾ ನಾಪತ್ತೆಯಾಗಿದ್ದಳು. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪತಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ. ತನಿಖೆಗಿಳಿದ ಪೊಲೀಸರಿಗೆ ಪ್ರಕರಣ ತಲೆನೋವಾಗಿ ಪರಿಣಮಿಸಿತ್ತು. ಈ ನಡುವೆ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಮಹಿಳೆ ರುಂಡ ಸಿಕಿತ್ತು. ಆದ್ರೆ ಯಾವುದೇ ಕ್ಲೂ ಸಿಕ್ಕಿರಲಿಲ್ಲ. ಟೆಕ್ನಿಕಲ್ ಎವಿಡೆನ್ಸ್ ಮೇಲೆ ಆರೋಪಿ ಜಶ್ವಂತ್ ನನ್ನು ಕರೆಸಿ ನಾಲ್ಕು ದಿನ ವಿಚಾರಣೆ ನಡೆಸಿದರೂ ಸಣ್ಣ ಸುಳಿವು ಪೊಲೀಸರಿಗೆ ಸಿಕ್ಕಿರಲಿಲ್ಲ. ಕೊನೆಗೆ ತಮ್ಮ ಸ್ಟೈಲ್ ನಲ್ಲಿ ವಿಚಾರಣೆ ನಡಸಿದಾಗ ದೃಶ್ಯ ಸಿನಿಮಾ ಸ್ಟೈಲ್ನಲ್ಲಿ ಸ್ವಂತ ಅತ್ತೆಯನ್ನ ಕೊಂದು ಮುಗಿಸಿದ ಕಥೆ ಬಾಯಿ ಬಿಟ್ಟಿದ್ದಾನೆ.

ಹೌದು ಅತ್ತೆ ಸುಕನ್ಯಾಳ ಜೊತೆ ಸಲುಗೆ ಬೆಳೆಸಿಕೊಂಡಿದ್ದ ಆರೋಪಿ ಜಶ್ವಂತ್ ಕಾರಿನ ರಿಪೇರಿಗಾಗಿ ಹಣ ಕೇಳಿದ್ದ, ಹಣ ಕೊಡದಿದ್ದಾಗ ಕುತ್ತಿಗೆಯಲ್ಲಿರುವ ಚೈನ್ ಕೇಳಿದ್ದ. ನೀಡದಿದ್ದಾಗ ಚೈನ್ ಲಾಕೆಟ್ ಕೇಳಿದ್ದಾನೆ ಕೊಡದಿದ್ದಾಗ ಆಕ್ರೋಶಗೊಂಡ ಅಸಾಮಿ ದೃಶ್ಯ ಸ್ಟೈಲ್ನಲ್ಲಿ ಕೊಲೆ ಮಾಡಲು ಮಾಸ್ಟರ್ ಪ್ಲಾನ್ ಮಾಡಿದ್ದಾನೆ.

ಕೊಲೆಗೂ ಮೊದಲು ವಿಜಯವಾಡಗೆ ತೆರಳಿ ಕಾರು ತಂದಿದ್ದ ಜಶ್ವಂತ್ ಅತ್ತೆ ಕೆಲಸ ಮುಗಿಸಿ ಬರುವುದನ್ನೆ ಕಾದಿದ್ದ. ನಿಮ್ಮ ಸಹಾಯ ಬೇಕು ಎಂದು ಕಾರು ಹತ್ತಿಸಿಕೊಂಡಿದ್ದ. ಬಳಿಕ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಪೋಡು ಗ್ರಾಮದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಮೃತದೇಹವನ್ನು ಸುಡಲು ತಮಿಳುನಾಡಿನ ಹೊಸೂರಿಗೆ ತೆರಳಿ ಪೆಟ್ರೋಲ್ ಖರೀದಿಸಿ ತಂದು ಬೆಂಕಿ ಹಚ್ಚಿ ಗೋಲ್ಡ್ ಚೈನ್ ಸಮೇತ ಗೋವಾಕ್ಕೆ ಎಸ್ಕೇಪ್ ಆಗಿದ್ದ. ಅಲ್ಲಿಯೇ ಪೆಬ್ರವರಿ 14 ರಂದು ತನ್ನ ಲವ್ವರ್ ಜೊತೆ ವ್ಯಾಲಂಟೈನ್ಸ್ ಡೇ ಆಚರಿಸಿದ್ದು, ಇದೀಗ ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ಅತಿಥಿಯಾಗಿದ್ದಾನೆ.

ಸದ್ಯ ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ಅತಿಥಿಯಾಗಿರುವ ದೃಶ್ಯ ಸಿನಿಮಾದ ರಿಯಲ್ ಹೀರೋ ಈ ಹಿಂದೆ ಅತ್ತಿಬೆಲೆ ಮತ್ತು ಆಂಧ್ರಪ್ರದೇಶದ ತಿರುಪತಿಯಲ್ಲಿ ಬೈಕ್ ಕಳ್ಳತನ ಕೇಸ್ ನಲ್ಲಿ ಲಾಕ್ ಆಗಿದ್ದ. ಆದ್ರೆ ಇವನ ಹಿನ್ನೆಲೆ ತಿಳಿಯದ ಮಾವ ನರಸಿಂಹ ರೆಡ್ಡಿ ಕುಟುಂಬ ಇದೀಗ ಪತ್ನಿಯನ್ನು ಕಳೆದುಕೊಂಡು ರೋಧಿಸುತ್ತಿರುವುದು ನಿಜಕ್ಕೂ ದುರಂತ.

By admin

Leave a Reply

Your email address will not be published. Required fields are marked *

Verified by MonsterInsights