ನೊಯ್ಡಾ: ಕರ್ತವ್ಯದಲ್ಲಿ ಅದ್ಭುತವಾದ ಸಮರ್ಪಣಾ ಪ್ರಜ್ಞೆಯನ್ನು ಪ್ರದರ್ಶಿಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೋಮವಾರ ಗ್ರೇಟರ್ ನೋಯ್ಡಾದಲ್ಲಿ ಕುಡುಕನೊಬ್ಬನನ್ನು ಕಾಪಾಡಿದ್ದಾರೆ. ಕುಡಿದು ಅಮಲಿನಲ್ಲಿದ್ದ ವ್ಯಕ್ತಿ ತನ್ನ ಜೀವವನ್ನು ಅಂತ್ಯಗೊಳಿಸಲು ಪ್ರಯತ್ನಿಸುತ್ತಿದ್ದ. ಆತನನ್ನು ರಕ್ಷಿಸಲು ಪೊಲೀಸರು ಆಳವಾದ ಚರಂಡಿಗೆ ಹಾರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಕುಡುಕ ಚರಂಡಿಗೆ ಬಿದ್ದಿದ್ದಾನೆ. ನೊಯ್ಡಾ ಪೋಲೀಸರು ಚರಂಡಿಯೊಳಗೆ ಹಾರಿ ಅವನನ್ನು ಎಳೆದಿದ್ದಾರೆ. ಕುಡುಕನನ್ನು ಕಾಪಾಡಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ನನ್ನು ಸೋಹನ್‌ವೀರ್ ಸಿಂಗ್ ಎಂದು ಗುರುತಿಸಲಾಗಿದ್ದು, ಅವರು ಸ್ಥಳೀಯ ಪಂಚಶೀಲ ಹೊರಠಾಣೆಯ ಉಸ್ತುವಾರಿ ವಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಕುಡಿತದ ಅಮಲಿನಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿ ಶಹೀದ್ ಭಗತ್ ಸಿಂಗ್ ರಸ್ತೆಯ ಬಳಿ ಆಳವಾದ ಮತ್ತು ಕೊಳಕು ಚರಂಡಿಗೆ ಬಿದ್ದಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಬಂದಿತು. ಆ ಫೋನ್ಗೆ ತ್ವರಿತವಾಗಿ ಪ್ರತಿಕ್ರಿಯಿಸಿದ ಸಬ್ ಇನ್ಸ್‌ಪೆಕ್ಟರ್ ಸೋಹನ್‌ವೀರ್ ಸಿಂಗ್, ಸಬ್ ಇನ್‌ಸ್ಪೆಕ್ಟರ್ ನವನೀತ್ ಕುಮಾರ್ ಮತ್ತು ಹೆಡ್ ಕಾನ್‌ಸ್ಟೆಬಲ್ ಪ್ರದೀಪ್ ಕುಮಾರ್ ಅವರೊಂದಿಗೆ ಘಟನಾ ಸ್ಥಳಕ್ಕೆ ಧಾವಿಸಿದರು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
VIDEO | An intoxicated man jumped into a drain in Greater Noida on Monday in an apparent suicide bid. Sub-Inspector Sohanveer Singh of the local Phase 2 police station also jumped into the drain and rescued the man.
The man was later hospitalised and is stable now, says Noida… pic.twitter.com/wNy933vMhP
— Press Trust of India (@PTI_News) July 8, 2024
ಆ ಚರಂಡಿಯಲ್ಲಿ ವೇಗವಾಗಿ ಹರಿಯುವ ಕೊಳಕು ನೀರಿನಿಂದ ಆ ವ್ಯಕ್ತಿ ತೇಲಿ ಹೋಗುತ್ತಿರುವುದನ್ನು ನೋಡಿದ ಅವರು ಆತನನ್ನು ಕಾಪಾಡಿದರು. “ಅದ್ಭುತ ಶೌರ್ಯವನ್ನು ಪ್ರದರ್ಶಿಸಿದ ಸಿಂಗ್ ಚರಂಡಿಗೆ ಹಾರಿ ವ್ಯಕ್ತಿಯನ್ನು ರಕ್ಷಿಸಿದರು” ಎಂದು ವಕ್ತಾರರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ಆ ವ್ಯಕ್ತಿಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com