ಬೆಂಗಳೂರು; ಡಿಸೆಂಬರ್ 22 ರಂದು ಬೆಂಗಳೂರು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದರು. ರಾತ್ರಿ ವೇಳೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಮೇಲೆ ಕೇಸ್ ಒಟ್ಟು 88 ದಾಖಲು ಮಾಡಿದ್ದಾರೆ.
ಹೊಸ ವರ್ಷಾಚರಣೆ ಹಿನ್ನಲೆ ಪೊಲೀಸರಿಂದ ಕ್ರಮ..

ಮುಂದಿನ ವಾರ ಹೊಸವರ್ಷಾಚರಣೆ ಸೆಲೆಬ್ರೇಷನ್ಗೆ ಸಿಲಿಕಾನ್ ಸಿಟಿ ಜನರು ಸಜ್ಜಾಗುತ್ತಿದ್ದಾರೆ. ಆದರೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದವರಿಗೆ ಶಾಕ್ ನೀಡಲು ಪೊಲೀಸರು ಬಿಸಿ ಮುಟ್ಟಿಸಲು ರೆಡಿಯಾಗಿದ್ದಾರೆ. ನಿನ್ನೆ ಒಟ್ಟು 3279 ವಾಹನಗಳ ತಪಾಸಣೆ ಮಾಡಿದ್ದು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದವರ ಮೇಲೆ ಒಟ್ಟು 88 ಕೇಸ್ ದಾಖಲಿಸಿದ್ದಾರೆ.