Thursday, January 29, 2026
18 C
Bengaluru
Google search engine
LIVE
ಮನೆ#Exclusive Newsಕೆಎಸ್​ಆರ್​ಟಿಸಿ ಬಸ್ ಚಾಲನೆ ವೇಳೆ ಚಾಲಕನಿಗೆ ಫಿಟ್ಸ್: 40ಕ್ಕೂ ಹೆಚ್ಚು ಪ್ರಯಾಣಿಕರು ಜಸ್ಟ್​ ಮಿಸ್

ಕೆಎಸ್​ಆರ್​ಟಿಸಿ ಬಸ್ ಚಾಲನೆ ವೇಳೆ ಚಾಲಕನಿಗೆ ಫಿಟ್ಸ್: 40ಕ್ಕೂ ಹೆಚ್ಚು ಪ್ರಯಾಣಿಕರು ಜಸ್ಟ್​ ಮಿಸ್

ಬೆಂಗಳೂರು: ಕೆಎಸ್​ಆರ್​ಟಿಸಿ ಬಸ್ ಚಾಲನೆ ವೇಳೆ ಚಾಲಕನಿಗೆ ಫಿಟ್ಸ್​​ ಕಾಣಿಸಿಕೊಂಡ ಪರಿಣಾಮ ಸರಣಿ ಅಪಘಾತ  ಸಂಭವಿಸಿರುವಂತಹ ಘಟನೆ ಡಿ. 25 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಡಕಶಿರದ ಮಾರುತಿ‌ನಗರದ ಬಳಿ ನಡೆದಿದೆ. ಬಸ್​​ನಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಸ್ಪಲ್ಪ ಯಾಮಾರಿದ್ದರೆ ಹತ್ತಾರು ಅಮಾಯಕರ ಪ್ರಾಣ ಹೋಗುತ್ತಿತ್ತು. ಘಟನೆಯಲ್ಲಿ ಓರ್ವ ರೈತನಿಗೆ ತೀವ್ರ ಗಾಯವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅಪಘಾತದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನೆಲಮಂಗಲ ಡಿಪೋ, ಚಿತ್ರದುರ್ಗ ವಿಭಾಗಕ್ಕೆ ಸೇರಿದ KA-57F4409 ನಂಬರ್​ ಕೆಎಸ್​ಆರ್​ಟಿಸಿ ಬಸ್ ಪಾವಗಡ ಟು ಬೆಂಗಳೂರಿಗೆ ಸಂಚರಿಸುತ್ತಿತ್ತು. ಚಾಲಕ ಫಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದನಂತೆ. ಅಪಘಾತದ ವೇಳೆ ಚಾಲಕನಿಗೆ ಫಿಟ್ಸ್ ಬಂದಿತ್ತಂತೆ. ಈ ವೇಳೆ ರಸ್ತೆ ಪಕ್ಕ ನಿಂತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದು, ಒಂದು ಗೂಡ್ಸ್ ಆಟೋ ಮತ್ತು ಬೈಕ್​ಗೆ ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ ಹೊಡೆದಿದೆ.

ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ರೈತ ನಾರಾಯಣ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ತಲೆಗೆ ತೀವ್ರವಾಗಿ ಗಾಯಗೊಂಡಿದ್ದು, ಕಳೆದ ನಾಲ್ಕು ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಕೆಎಸ್​ಆರ್​ಟಿಸಿಯಿಂದ ಒಬ್ಬರೇ ಒಬ್ಬರು ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿಲ್ಲ. ಒಂದು ರೂ ಕೂಡ ಪರಿಹಾರ ನೀಡಿಲ್ಲವಂತೆ. ಸದ್ಯ  ಮಡಕಶಿರ ಪೋಲಿಸರು ಎಫ್ಐಆರ್ ದಾಖಲಿಸಿ ಬಸ್ ವಶಕ್ಕೆ ಪಡೆದುಕೊಂಡಿದ್ದಾರೆ.

ಮೈನಿಂಗ್ ಲಾರಿ ಡಿಕ್ಕಿ: ಬೈಕ್​ನಲ್ಲಿದ್ದ ಇಬ್ಬರು ಸಾವು

ಮೈನಿಂಗ್ ಲಾರಿ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಸವಾರರಿಬ್ಬರು ಸಾವನ್ನಪ್ಪಿರುವಂತಹ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸುಶೀಲಾನಗರ ಬಳಿ ನಡೆದಿದೆ. ಆದಿಕೇಶ್ವರ(20), ಸಂತೋಷ್​​(22) ಮೃತರು. ಮತ್ತಿಬ್ಬರಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಒಂದೇ ಬೈಕ್‌ನಲ್ಲಿ ನಾಲ್ವರು ಯುವಕರು ತೆರಳುತ್ತಿದ್ದರು. ಸಂಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments