Monday, June 23, 2025
25.9 C
Bengaluru
Google search engine
LIVE
ಮನೆ#Exclusive NewsTop Newsಚೀನಾದ ಸೂಪರ್‌‌ ಮಾರ್ಕೆಟ್‌‌ನಲ್ಲಿ ಗಂಧದ ಗುಡಿ ಹಾಡು ವೈರಲ್.!

ಚೀನಾದ ಸೂಪರ್‌‌ ಮಾರ್ಕೆಟ್‌‌ನಲ್ಲಿ ಗಂಧದ ಗುಡಿ ಹಾಡು ವೈರಲ್.!

ಬೀಜಿಂಗ್‌: ವರನಟ ರಾಜ್‌ಕುಮಾರ್‌ ತಮ್ಮ ಹಾಡುಗಳಿಂದಲೇ ಅಜರಾಮರರಾಗಿದ್ದಾರೆ. ಇದೀಗ ಚೀನಾದ ಸೂಪರ್ ಮಾರ್ಕೆಟ್‍ನಲ್ಲಿ ನಟ ಡಾ.ರಾಜ್ ಕುಮಾರ್ ಅವರ ಹಿಟ್ ಹಾಡೊಂದು ಕೇಳಿಬಂದಿದೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರ ಗಮನ ಸೆಳೆದಿದೆ.

ಭಾರತೀಯ ದಂಪತಿ ಚೀನಾದ ಬೀದಿಗಳಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಡಾ.ರಾಜ್‍ಕುಮಾರ್ ಅವರ ‘ಗಂಧದ ಗುಡಿ’ ಚಿತ್ರದ ‘ನಾವಾಡುವ ನುಡಿಯೇ ಕನ್ನಡ ನುಡಿ’ ಹಾಡನ್ನು ಚೀನಾದ ಸೂಪರ್ ಮಾರ್ಕೆಟ್‍ನಲ್ಲಿ ಕೇಳಿ ಸಖತ್‌ ಆಶ್ಚರ್ಯಚಕಿತರಾಗಿದ್ದಾರಂತೆ!

ಹಾಗಾಗಿ ಅವರು ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪ್ರವೀಣ್ ಆರ್ ಎಂಬ ನೆಟ್ಟಿಗರು ಈ ವಿಡಿಯೊವನ್ನು ‘ಕಪಲ್ ಆಫ್ ಕರ್ನಾಟಕ’ ಎಂಬ ಇನ್‌ಸ್ಟಾಗ್ರಾಂ ಪೇಜ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಒಂದೇ ದಿನದಲ್ಲಿ ವೈರಲ್ ಆಗಿ 75,000 ಕ್ಕೂ ಹೆಚ್ಚು ವ್ಯೂವ್ಸ್‌ ಮತ್ತು 10,000 ಲೈಕ್‍ಗಳನ್ನು ಗಳಿಸಿದೆ. ಈ ವಿಡಿಯೊ ನೆಟ್ಟಿಗರ ಹೃದಯವನ್ನು ಗೆದ್ದಿದ್ದರಿಂದ ಅಭಿಮಾನಿಗಳು ಕಾಮೆಂಟ್ ವಿಭಾಗದಲ್ಲಿ ‘ಹಾರ್ಟ್‌’ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.

ಈ ಘಟನೆ ಡಾ.ರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ಹೆಮ್ಮೆಯ ವಿಷಯವಾಗಿದೆ. ಹಾಗಾಗಿ ಸೋಷಿಯಲ್ ಮೀಡಿಯಾ ನೆಟ್ಟಿಗರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ಡಾ.ರಾಜ್ ಕುಮಾರ್ ಅವರ ಜನಪ್ರಿಯತೆ ಗಡಿಗಳನ್ನು ಮೀರಿದೆ ಎಂಬುದನ್ನು ಇದು ತೋರಿಸುತ್ತದೆ” ಎಂದು ಒಬ್ಬರು ಹೇಳಿದರೆ, ಇನ್ನೊಬ್ಬ ಅಭಿಮಾನಿ, “ಈ ಹಾಡು ಕಾಲಾತೀತವಾಗಿದೆ ಮತ್ತು ಪ್ರತಿಯೊಂದು ಸನ್ನಿವೇಶಕ್ಕೂ ಸರಿಹೊಂದುತ್ತದೆ. ಡಾ.ರಾಜ್ ಕುಮಾರ್ ಅವರ ಹೆಚ್ಚಿನ ಹಾಡುಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡಬೇಕು” ಎಂದಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments