Wednesday, April 30, 2025
32 C
Bengaluru
LIVE
ಮನೆ#Exclusive NewsTop Newsಇಸ್ರೋ ಐತಿಹಾಸಿಕ ಸಾಧನೆ: ಡಾಕಿಂಗ್‌ ಸಾಹಸ ಯಶಸ್ವಿಯಾಗಿಸಿದ ವಿಶ್ವದ 4ನೇ ದೇಶ ಭಾರತ

ಇಸ್ರೋ ಐತಿಹಾಸಿಕ ಸಾಧನೆ: ಡಾಕಿಂಗ್‌ ಸಾಹಸ ಯಶಸ್ವಿಯಾಗಿಸಿದ ವಿಶ್ವದ 4ನೇ ದೇಶ ಭಾರತ

 

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಐತಿಹಾಸಿಕ ಸಾಧನೆ ಮಾಡಿದೆ. ಸ್ಪೇಸ್ ಡಾಕಿಂಗ್ ಪ್ರಯೋಗದ ಭಾಗವಾಗಿ ಬಾಹ್ಯಾಕಾಶದಲ್ಲಿ ಉಪಗ್ರಹಳ ಜೋಡಣೆಯಲ್ಲಿ ಇಸ್ರೋ ಯಸಸ್ವಿಯಾಗಿ ಪೂರ್ಣಗೊಳಿಸಿದೆ. ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಈ ಮೂಲಕ ಬಾಹ್ಯಾಕಾಶ ಉಪಗ್ರಹಗಳ ಡಾಕಿಂಗ್ ಮತ್ತು ಅನ್ ಡಾಕಿಂಗ್ ಪ್ರಯೋಗ ಯಶಸ್ವಿಯಾಗಿದ್ದು, ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಎರಡು ಉಪಗ್ರಹಗಳನ್ನು ಜೋಡಿಸುವ ಹಾಗೂ ಬೇರ್ಪಡಿಸುವ ಪ್ರಯೋಗದಲ್ಲಿ ಇಲ್ಲಿಯವರೆಗೆ ಅಮಡರಿಕ, ರಷ್ಯಾ ಮತ್ತು ಚೀನಾ ಯಶಸ್ಸು ಕಂಡಿತ್ತು.

ಈ ಬಗ್ಗೆ ಟ್ವೀಟ್​​​​ನಲ್ಲಿ ಮಾಹಿತಿ ನೀಡಿರುವ ಇಸ್ರೋ, ಭಾರತವು ಬಾಹ್ಯಾಕಾಶ ಇತಿಹಾಸದಲ್ಲಿ ತನ್ನ ಹೆಸರನ್ನು ಡಾಕ್ ಮಾಡಿದೆ. ಭಾರತದ ಇಸ್ರೋದಿಂದ ನಡೆಸಲಾದ ಸ್ಪೇಡೆಕ್ಸ್ ಮಿಷನ್ ಯಶಸ್ಸು ಸಾಧಿಸಿದೆ. ಈ ಕ್ಷಣಕ್ಕೆ ಸಾಕ್ಷಿಯಾಗಲು ಹೆಮ್ಮೆಪಡುತ್ತೇವೆ ಎಂದು ಹೇಳಿದೆ.

ಭಾರತವು ಯಶಸ್ವಿ ಬಾಹ್ಯಾಕಾಶ ಸಾಧಿಸಿದ 4ನೇ ರಾಷ್ಟ್ರವಾಗಿದೆ ಎಂದು ಬರೆಯಲಾಗಿದೆ. ಜೋಡಣೆ ಬಳಿಕ ಸಿಗ್ನಲ್ ಮೂಲಕ ಉಪಗ್ರಹಗಳ ನಿಯಂತ್ರಣ ಯಶಸ್ವಿಯಾಗಿದೆ. ಅನ್​​​​​​​ಡಾಕಿಂಗ್ ಮತ್ತು ವಿದ್ಯುತ್ ಸರಬರಾಜು ಪರೀಕ್ಷೆಗಳನ್ನು ಮುಂಬರುವ ದಿನಗಳಲ್ಲಿ ನಡೆಸಲಾಗುವುದು ಎಂದು ಇಸ್ರೋ ಹೇಳಿಕೆ.

ಜನವರಿ 12ರಂದು ಇಸ್ರೋ ಎರಡು ಬಾಹ್ಯಾಕಾಶ ನೌಕಗಳನ್ನು ಮೂರು ಮೀಟರ್ ಸಮೀಪಕ್ಕೆ ತಂದು ಡಾಕೀಂಗ್​​ಗೂ ಮುನ್ನ ಪ್ರಾಯೋಗಿಕ ಪ್ರಯತ್ನವನ್ನು ನಡೆಸಿತ್ತು. ಬಳಿಕ ಎರಡೂ ಉಪಗ್ರಹಗಳನ್ನು ಹಿಂದೆಕ್ಕೆ ಸರಿಸಿ ಸುರಕ್ಷಿತವಾಗಿ ನೆಲೆಗೊಳಿಸಿತ್ತು.

ಇನ್ನು 2024ರ ಡಿಸೆಂಬರ್.30ರಂದು ಬಾಹ್ಯಾಕಾ ಡಾಕಿಂಗ್ ಪ್ರಯೋಗವನ್ನು ಇಸ್ರೋ ಯಶಸ್ವಿಯಾಗಿ ಆರಂಭಿಸಿತ್ತು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments