ಬೆಂಗಳೂರು: ನಿತಿನ್ ಕಾಮತ್ ದೇಶದ ಅತಿದೊಡ್ಡ ಆನ್ ಲೈನ್ ಸ್ಟಾಕ್ ಬ್ರೋಕರೇಜ್ ಸಂಸ್ಥೆ ಝೆರೋಧಾ ಸಂಸ್ಧಾಪಕರಾಗಿದ್ದಾರೆ. 2023ರಲ್ಲಿ 72 ಕೋಟಿ ವೇತನ ಪಡೆದು ನಿತಿನ್ ಕುಮಾರ್ ಎಲ್ಲರ ಗಮನ ಸೆಳೆದಿದ್ದರು.
ಭಾರತದ ಯುವ ಬಿಲಿಯನೇರ್ ಆಗಿ ಸಹ ನಿತಿನ್ ಕುಮಾರ್ ಹೆಸರನ್ನು ಗುರುತಿಸಬಹುದು. ನಿತಿನ್ ಕುಮಾರ್ ಅವರು ಸ್ಟಾಕ್ ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮಾಡುವವರಿಗೆ ಉತ್ತಮವಾದ ಸಲಹೆಗಳನ್ನು ನೀಡಿದ್ದಾರೆ. ಟ್ರೇಡಿಂಗ್ ನಲ್ಲಿ ಸಕ್ರಿಯರಾಗಿರುವವರಿಗೆ ಜೀವನದಲ್ಲಿ ಹಣ ಸಂಪಾದಿಸುವ ಸುಲಭದ ವಿಷಯವಲ್ಲ, ಕಠಿಣ ಮಾರ್ಗಗಳು ಇರುತ್ತದೆ. ಯಶಸ್ವಿ ಟ್ರೇಡರ್ ಆಗಿ ಗುರುತಿಸಿಕೊಳ್ಳಲು ಕೆಲ ಕೆಟ್ಟ ದಿನಗಳನ್ನು ದಾಟಿ ಬರಲೇಬೇಕು. ಸ್ಟಾಕ್ ಮಾರುಕಟ್ಟೆಗಳಲ್ಲಿ ಒಂಟಿಯಾಗಿ ಹೋರಾಟ ಮಾಡಬೇಕು.
ಇಲ್ಲಿ ಯಾರೂ ಯಾರಿಗೂ ಸಹಾಯ ಮಾಡುವುದಿಲ್ಲ. ಕಠಿಣ ಪರಿಸ್ಥಿತಿಗಳನ್ನು ಎದುರಿಸುವ ಹಾಗೂ ನಿರ್ವಹಣೆ ಮಾಡುವುದರಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಿತಿನ್ ಕಾಮತ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.