#Exclusive NewsTop Newsರಾಜಕೀಯಸುದ್ದಿ

ಎಸ್​ಎಂ ಕೃಷ್ಣ ಕಾಂಗ್ರೇಸ್​ ತೊರೆದಿದ್ದು ಯಾವ ಕಾರಣಕ್ಕೆ ಗೊತ್ತಾ…?

ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ತಮ್ಮದೇ ಚಾಪು ಮೂಡಿಸಿದ್ದ ಎಸ್‌ಎಂ ಕೃಷ್ಣ ಅವರು ಇಂದು ಕೊನೆಯುಸಿರೆಳೆದಿದ್ದಾರೆ. 43 ವರ್ಷ ಕಾಂಗ್ರೆಸ್‌ನಲ್ಲೇ  ಇದ್ದ ಎಸ್‌ಎಂ ಕೃಷ್ಣ  ಸಮಾಜವಾದಿ ಪಕ್ಷದಿಂದ ರಾಜಕೀಯಕ್ಕೆ ಎಸ್‌ಎಂ ಕೃಷ್ಣ ಎಂಟ್ರಿಯಾಗಿದ್ದರು. ಬರೋಬ್ಬರಿ 43 ವರ್ಷ ಕಾಂಗ್ರೆಸ್‌ನಲ್ಲಿದ್ದ ಎಸ್‌ಎಂ ಕೃಷ್ಣ ಇತ್ತೀಚೆಗೆ ಯಾಕೆ ಕಾಂಗ್ರೆಸ್ ತೊರೆದಿದ್ದರು ಗೊತ್ತಾ? ಅದೊಂದು ಕಾರಣಕ್ಕೆ ನಾನು ಕಾಂಗ್ರೆಸ್ ಬಿಟ್ಟು ಬಂದೆ ಅಂತ ಸ್ವತಃ ಎಸ್ಎಂ​ ಕೃಷ್ಣ ಅವರು ಬದುಕಿದ್ದಾಗ ಹೇಳಿಕೊಂಡಿದ್ದಾರೆ. ರಾಹುಲ್ ಗಾಂಧಿಯಿಂದ ಕಾಂಗ್ರೆಸ್ ಬಿಟ್ಟಿದ್ರಾ SM ಕೃಷ್ಣ!

ಹಗಲು ರಾತ್ರಿ ಎನ್ನದೇ ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದರು ಎಸ್‌ಎಂ ಕೃಷ್ಣ. ಕಾಂಗ್ರೆಸ್‌ನಲ್ಲಿ ಹೊಸ ನಾಯಕತ್ವ ಪ್ರಯತ್ನ ನಡೆದಿತ್ತು. ರಾಹುಲ್ ಗಾಂಧಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ವಯಸ್ಸಿನಲ್ಲಿ ತನಗಿಂತ ಚಿಕ್ಕವರಾಗಿದ್ದ ರಾಹುಲ್ ಗಾಂಧಿ ಅವರ ಚೌಕಟ್ಟಿನಲ್ಲಿ ಕೆಲಸ ಮಾಡೋದಕ್ಕೆ ನನಗೆ ಆಗಲಿಲ್ಲ. ಹೀಗಾಗಿ ನಾನು ಕಾಂಗ್ರೆಸ್ ಪಕ್ಷವನ್ನು ತೊರೆದೆ ಎಂದು ಎಸ್ಎಂ​ ಕೃಷ್ಣ ಅವರೇ ಬದುಕಿದ್ದಾಗ ಹೇಳಿಕೊಂಡಿದ್ದರು.

ವಯಸ್ಸಿಗೆ ತಕ್ಕ ಹಾಗೆ ಮರ್ಯಾದೆ ಸಿಗುತ್ತಿರಲಿಲ್ವಾ? ನನ್ನ ವಯಸ್ಸಿಗೆ ತಕ್ಕ ಹಾಗೇ ಮರ್ಯಾದೆ ಸಿಗುತ್ತಿರಲಿಲ್ಲ ಎಂದು ಎಸ್‌ಎಂ ಕೃಷ್ಣ ಹೇಳಿಕೊಂಡಿದ್ದರು. 43 ವರ್ಷ ಕಾಂಗ್ರೆಸ್‌ಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಸೋನಿಯಾ ಗಾಂಧಿ ಇರುವವರೆಗೂ ಎಸ್‌ಎಂ ಕೃಷ್ಣ ಅವರಿಗೆ ಒಂದು ದಿನವೂ ತೊಂದರೆಯಾಗದಂತೆ ನೋಡಿಕೊಂಡಿದ್ದರು. ಆದರೆ ರಾಹುಲ್ ಗಾಂಧಿ ಅಧ್ಯಕ್ಷರಾದ ಬಳಿಕ ನನಗೆ ಇರಿಸು ಮುರಿಸು ಉಂಟಾಯ್ತು ಅಂತ ಹೇಳಿಕೊಂಡಿದ್ದರು.

Comments (0)

Your email address will not be published. Required fields are marked *

Back to top button