ರಾಘವೇಂದ್ರ ರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಯಾವ ಸಿನಿಮಾ ಗೊತ್ತಾ..?

ಬೆಂಗಳೂರು : ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಚಿತ್ರವನ್ನು ನಿರ್ದೇಶಿಸಿದಂತಹ ಸುನಿ ಮತ್ತೊಂದು ಪ್ರೇಮ ಕಥೆಯನ್ನು ತರಲು ಪ್ರೇಮಿಗಳ ದಿನ ಫೆಬ್ರವರಿ 14ರ ಮುಂಚೆ ಅಂದರೆ ಇದೇ 9ನೇ ತಾರೀಖು ತೆರೆಯ ಮೇಲೆ ತರಲು ಚಿತ್ರ ತಂಡವು ಯುವ ಪ್ರೇಮಿಗಳ ಮನಸ್ಸಿನಲ್ಲಿ ಪುಳಕವನ್ನು ಹೆಚ್ಚಿಸಿದೆ.

ದೊಡ್ಮನೆಯ ಕುಡಿ ರಾಘವೇಂದ್ರ ರಾಜಕುಮಾರ್ ಮಗನಾದ ವಿನಯ್ ರಾಜಕುಮಾರ್, ಅನಂತು vs ನುಸ್ರತ್ ವಿಭಿನ್ನ ರೀತಿಯ ಪ್ರೇಮ ಕಹಾನಿಯಲ್ಲಿ ನಟಿಸಿದ್ದ ವಿನಯ್ ರವರ ನಟನೆಗೆ ಫಿದಾ ಆಗಿದ್ದ ಪ್ರೇಕ್ಷಕರಿಗೆ ಮತ್ತೊಂದು ಪ್ರೇಮ್ ಕಹಾನಿಯಲ್ಲಿ ವಿನಯ್ ರಾಜ್‌ಕುಮಾರ್ ನಟಿಸುತ್ತಿದ್ದಾರೆ . ಇವರಿಗೆ ನಾಯಕಿಯಾಗಿ ಮಲ್ಲಿಕಾ ಸಿಂಗ್ ನಟಿಸುತ್ತಿದ್ದಾರೆ .

“ಒಂದು ಸರಳ ಪ್ರೇಮ ಕಥೆ” ಪ್ರೀತಿಯನ್ನು ಹೇಗೆಲ್ಲಾ ಬಣ್ಣಿಸಬಹುದು ಎಂದು ಕನ್ನಡ ಚಿತ್ರರಂಗಕ್ಕೆ ತೋರಿಸಿಕೊಟ್ಟ ಜಯಂತ್ ಕಾಯ್ಕಿಣಿರವರ ಸಾಹಿತ್ಯವಿದೆ. ಈ ಹಾಡಿಗೆ ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ. ಮೋಹಕ ತಾರೆ ರಮ್ಯಾ ಈ ಹಾಡನ್ನು ಬಿಡುಗಡೆ ಮಾಡಿರುವುದು ಒಂದು ವಿಶೇಷ.

ಒಂದು ಸರಳ ಪ್ರೇಮ ಕಥೆ, ಫೆಬ್ರವರಿ 9ಕ್ಕೆ ಬಿಡುಗಡೆಯಾಗಲಿದ್ದು ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು ಹುಟ್ಟಿಸಿದೆ ಈ ಹಿಂದೆ ಕ್ಯಾರೆಕ್ಟರ್ ಟೀಸರ್ ಹಾಗೂ ಹಾಡು ಬಿಡುಗಡೆ ಮಾಡಿದ್ದ ಚಿತ್ರತಂಡಕ್ಕೆ ಯುವ ಪ್ರೇಮಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು ಮತ್ತೊಂದು ವಿಶೇಷವೇನೆಂದರೆ ಕನ್ನಡದಲ್ಲಿ ಮೊದಲ ಬಾರಿಗೆ ಸೂಫಿ ಮಾದರಿಯ ಸರಳ ಗೀತೆಯಾದ ಎಲ್ಲಾ ಮಾತನ್ನು ಎಂಬ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದು, ವೀರ್ ಸಮರ್ಥ್ ಸಂಗೀತ ಶಿವಾನಿ ಸ್ವಾಮಿ ಸುಮಧುರ ಹಾಡಿಗೆ ಧ್ವನಿಯಾಗಿದ್ದಾರೆ. ವಿನಯ್ ರಾಜ್ ಕುಮಾರ್ ಹಾಗೂ ನಾಯಕಿ ಮಲ್ಲಿಕಾ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ.

ರಾಘವೇಂದ್ರ ರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಾಧುಕೋಕಿಲಾ ಹಾಗೂ ರಾಜೇಶ್ ನಟರಂಗ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ . ಒಂದು ಸರಳ ಪ್ರೇಮ ಕಥೆ ಯುವ ಪ್ರೇಮಿಗಳ ಮನಸ್ಸು ಗೆಲ್ಲುವುದರಲ್ಲಿ ಸಂದೇಹವೇ ಇಲ್ಲ.




