#Exclusive NewsTop Newsಫ್ರೀಡಂ ಟಿವಿ ವಿಶೇಷರಾಜಕೀಯರಾಜ್ಯವಿಶೇಷಸುದ್ದಿ

ಶಾಸಕ ಮುನಿರತ್ನ ರಾಸಲೀಲೆ ಎಲ್ಲೇಲ್ಲಿ ನಡೆಸಿದ್ದ ಗೊತ್ತಾ!?

ಬೆಂಗಳೂರು: ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಕೇಸ್ ಸಂಬಂಧ RR ನಗರ ಕ್ಷೇತ್ರದ ಶಾಸಕ ಬಿಜೆಪಿ ಮುನಿರತ್ನಗೆ ನ್ಯಾಯಾಂಗ ಬಂಧನದಲ್ಲಿದ್ದ ಮುನಿರತ್ನ ಈಗ SIT ಕಸ್ಟಡಿಯಲ್ಲಿದ್ದು, ಕೋರ್ಟ್ ಆದೇಶದಂತೆ ಮುನಿರತ್ನರನ್ನ ವಶಕ್ಕೆ ಪಡೆದ ವಿಶೇಷ ತನಿಖಾ ದಳದ ಅಧಿಕಾರಿಗಳು ಆರೋಪಿಯ ವಿಚಾರಣೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಸಂತ್ರಸ್ತ ಮಹಿಳೆ ಮುನಿರತ್ನ ವಿರುದ್ಧ ಮತ್ತಷ್ಟು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ವಿಧಾನಸೌಧ ಮತ್ತು ವಿಕಾಸಸೌದದಲ್ಲಿ ಮಾತ್ರವಲ್ಲದೇ ಸರ್ಕಾರಿ ಕಾರಿನಲ್ಲೂ ಸಹ ಅತ್ಯಾಚಾರವೆಸಗಿರುವುದಾಗಿ ಸಂತ್ರಸ್ತೆ ಮಹಿಳೆ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ಈ ಆರೋಪ ಮುನಿರತ್ನಗೆ ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆಗಳಿವೆ.ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಬಿಜೆಪಿ ಶಾಸಕ ಮುನಿರತ್ನ ಈಗ SIT ಕಸ್ಟಡಿಯಲ್ಲಿದ್ದಾರೆ. ಕೋರ್ಟ್ ಆದೇಶದಂತೆ ಮುನಿರತ್ನರನ್ನ ವಶಕ್ಕೆ ಪಡೆದ ವಿಶೇಷ ತನಿಖಾ ದಳದ ಅಧಿಕಾರಿಗಳು ಆರೋಪಿಯ ವಿಚಾರಣೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಸಂತ್ರಸ್ತ ಮಹಿಳೆ ಮುನಿರತ್ನ ವಿರುದ್ಧ ಮತ್ತಷ್ಟು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಬೇರೆ-ಬೇರೆ ಆಯಾಮಗಳಲ್ಲೂ ತನಿಖೆ
ತನಿಖಾಧಿಕಾರಿ SP ಸೌಮ್ಯಲತಾ ಮತ್ತು ಎಸಿ ಸೈಮನ್ ಆರೋಪಗಳ ಸಂಬಂಧ ಪ್ರಾಥಮಿಕ ಮಾಹಿತಿ ಕಲೆಹಾಕಿದ್ದಾರೆ. ಸಂತ್ರಸ್ಥೆ ಮಾಡಿರೋ ಆರೋಪಗಳನ್ನ ಮುಂದಿಟ್ಟು ಮುನಿರತ್ನರಿಂದ ಉತ್ತರ ಪಡೆದಿದ್ದಾರೆ. ಆದ್ರೆ ಸಂತ್ರಸ್ಥೆ ಆರೋಪಗಳೆಲ್ಲ ಸುಳ್ಳು ಎಂದಷ್ಟೇ ಮುನಿರತ್ನ ಹೇಳುತ್ತಿದ್ದಾರೆ. ಇನ್ನು ಆರೋಪಿ ಹೇಳಿಕೆ ದಾಖಲಿಸಿಕೊಂಡು ಪ್ರಾಥಮಿಕವಾಗಿ ಸಿಕ್ಕಿರೋ ಸಾಕ್ಷ್ಯಗಳನ್ನು ಮುಂದಿಟ್ಟು ಮತ್ತೊಮ್ಮೆ ಮುನಿರತ್ನರನ್ನ ವಿಚಾರಣೆ ನಡೆಸಲಿದ್ದಾರೆ.

ಇಷ್ಟಲ್ಲದೇ ನಾಳೆಯಿಂದ ಬೇರೆ ಆಯಾಮಗಳಲ್ಲೂ ಕೂಡ ತನಿಖೆ ಮುಂದುವರಿಯಲಿದೆ ಅದೇನಂದ್ರೆ ಆರೋಪಿ ಕರೆದೊಯ್ದಯ ಸ್ಥಳ ಮಹಜರು ಪ್ರಕ್ರಿಯೆ. ಆರೋಪಿ ಮುನಿರತ್ನ ಪುರುಷತ್ವ ಪರೀಕ್ಷೆ ನಡೆಸುವ ಸಾಧ್ಯತೆ. ಬೌರಿಂಗ್ ಆಸ್ಪತ್ರೆಯಲ್ಲಿ ನಡೆಯಲಿರುವ ಪುರುಷತ್ವ ಪರೀಕ್ಷೆ, ಮುನಿರತ್ನ ಮೊಬೈಲ್ ಬಗ್ಗೆ ಎಸ್ಐಟಿ ಹೆಚ್ಚು ಪೋಕಸ್ ಮಾಡಿದೆ. ಆದ್ರೆ ಕೋಲಾರದ ಬಳಿ ಮೊಬೈಲ್ ಮಿಸ್ಸಿಂಗ್ ಆಗಿದೆ ಎಂದು ಮುನಿರತ್ನ ಹೇಳಿದ್ದಾರೆ. ಸದ್ಯ ಮುನಿರತ್ನ ಮೊಬೈಲ್ ನ IMEI ನಂಬರ್ ಪಡೆದು ಮೊಬೈಲ್ ಶೋಧ ನಡೆಸಿದ್ದಾರೆ. ಯಾಕಂದ್ರೆ ಈ ಮೊಬೈಲ್ ನಿಂದಲೇ ವೀಡಿಯೋ ಕಾಲ್ ಮಾಡಿದ್ರು, ಅರೆಬೆತ್ತಲಾಗುವಂತೆ ಒತ್ತಾಯ ಮಾಡಿದ್ದರು ಎಂದು ಸಂತ್ರಸ್ಥೆ ಆರೋಪ ಮಾಡಿದ್ದಾರೆ.

ಹೀಗೆ ಶಾಸಕ ಮುನಿರತ್ನ ಕೇಸ್ ಸಂಬಂಧ ಹಂತ ಹಂತವಾಗಿ SIT ಟೀಂ ತನಿಖೆ ನಡೆಸಲಿದೆ. ಸ್ಥಳ ಮಹಜರು ಪ್ರಕ್ರಿಯೆ ಕೂಡ ಬಹಳ ಮುಖ್ಯವಾಗಿದ್ದು, ಮೊಬೈಲ್ ಸಿಕ್ಕರೇ ತನಿಖೆಗೆ ದೊಡ್ಡ ಬಲ ಬರಲಿದೆ. ಒಟ್ನಲ್ಲಿ ಶಾಸಕರಾಗಿ ಐಷಾರಾಮಿ ಜೀವನ ನಡೆಸುತ್ತಿದ್ದ ಮುನಿರತ್ನ ಈಗ ರೇಪ್ ಕೇಸ್ ಆರೋಪಿಯಾಗಿ ವಿಲವಿಲ ಅಂತಿರೋದು ಸತ್ಯ.

 

 

 

 

Comments (0)

Your email address will not be published. Required fields are marked *

Back to top button