ಬೆಂಗಳೂರು: ನಾಡಿನಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿದ್ದು, ಹೂವು, ಹಣ್ಣು ಖರೀದಿಗೆ ಬೆಂಗಳೂರಿನ ಸಿಟಿ ಮಂದಿ ಮುಗಿಬಿದ್ದಿದ್ದಾರೆ.. ಕನಕಾಂಬರ, ಮಲ್ಲಿಗೆ, ಸೇವಂತಿಗೆ, ಚೆಂಡು ಹೂವು ಸೇರಿ ಬಗೆ ಬಗೆಯ ಹೂವುಗಳ ಮಾರಾಟ ಭರದಿಂದ ಸಾಗಿದ್ದು, ಸತತ ಮಳೆ ಹಿನ್ನೆಲೆ ಹೂವಿನ ದರದಲ್ಲಿ ಕೊಂಚ ಪ್ರಮಾಣದ ಏರಿಕೆ ಕಂಡು ಬಂದಿದೆ.
ಕೆಆರ್ ಮಾರ್ಕೆಟ್‌ನಲ್ಲಿ ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಸೇರಿದ್ದು, ಅವೆನ್ಯೂ ರಸ್ತೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಜನಮಯವಾಗಿದೆ. ಭಾರೀ ಜನಸಂಖ್ಯೆ ಹಿನ್ನೆಲೆ ಕೆಆರ್ ಮಾರ್ಕೆಟ್, ಹೂವಿನ ಮಾರ್ಕೆಟ್, ಅವೆನ್ಯೂ ರಸ್ತೆ ಸುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ. ಅಲ್ಲದೇ ಕೆಆರ್ ಮಾರ್ಕೆಟ್ ಫ್ಲೈಓವರ್ ಮೇಲೂ ಕಿ.ಮೀ.ಗಟ್ಟಲೇ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಸತತ ಮಳೆ ಹಿನ್ನೆಲೆ ಹೂಗಳ ಬೆಲೆ ಏರಿಕೆಯಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆ ಕನಕಾಂಬರ, ಮಲ್ಲಿಗೆ, ಸೇವಂತಿಗೆ, ಸುಗಂಧರಾಜ, ಚೆಂಡು ಹೂಗಳ ಖರೀದಿ ಜೋರಾಗಿದೆ.


