Wednesday, April 30, 2025
30.3 C
Bengaluru
LIVE
ಮನೆ#Exclusive Newsವಿಚ್ಛೇದನವೇ ಕೆಲವರಿಗೆ ಬಂಡವಾಳವಾಗಿದೆ..!

ವಿಚ್ಛೇದನವೇ ಕೆಲವರಿಗೆ ಬಂಡವಾಳವಾಗಿದೆ..!

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ವಿವಾಹ ವಿಚ್ಛೇದನಗಳು ತುಂಬಾ ಆಗುತ್ತಿವೆ.ಅದರಲ್ಲೂ ವಿಚ್ಛೇದನ ಆದ ಮೇಲೆ ಸ್ನೇಹಿತರಿಗೆಲ್ಲಾ ಪಾರ್ಟಿ ಕೊಡುವ ವಾಡಿಕೆ ಮಾಡಿಕೊಂಡಿದ್ದಾರೆ.ಡಿವೋರ್ಸ್​ ಆದ ಇತ್ತೀಚಿಗೆ ಒಬ್ಬ ಮಹಿಳೆ ಗಂಡನ ಫೋಟೋ ಕಾಲಡಿ ಇಟ್ಟುಕೊಂಡು ಸಂತೋಷದಿಂದ ಪೋಟೋ ಶೂಟ್​ ಮಾಡಿಸಿಕೊಂಡಿದ್ದನ್ನ ನಾವು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ಧೇವೆ.

ಅದೇ ರೀತಿ ಗಂಡಸರು ಕೂಡ ಕೇಕ್​ ಕತ್ತರಿಸಿ ಎಣ್ಣೆ ಪಾರ್ಟಿ ಮಾಡುತ್ತಿರುತ್ತಾರೆ. ಇಂತಹ ಘಟನೆಗಳು ಈ ಯುಗದಲ್ಲಿ ಸಾಮನ್ಯ​ ಆಗಿದೆ.ಇನ್ನು ಕೆಲವು ಮಹಿಳೆಯರು  ಕಾನೂನನ್ನು ದುರುಪಯೋಗಪಡಿಸಿಕೊಂಡು ಗಂಡನಿಂದ ಸಿಗುವ ಜೀವನಾಂಶಕ್ಕಾಗಿಯೇ ಬೇಕು ಬೇಕಂತಲೇ ಗಂಡನ ಮೇಲೆ ಆರೋಪಗಳನ್ನು ಹೊರಿಸಿ ವಿಚ್ಛೇದನವನ್ನು ಪಡೆದುಕೊಳ್ಳುತ್ತಿದ್ದಾರೆ.ಆದರೆ ಇತ್ತೀಚಿನ ದಿಗಳಲ್ಲಿ ವಿಚ್ಛೇದನ ಪಡೆಯುವುದೊಂದು ಬಿಸಿನೆಸ್​ ಮಾಡಿಕೊಂಡಿದ್ದಾರೆ.ಗಂಡನ ಆಸ್ತಿಯಲ್ಲಿ ಪಾಲು ಬರುತ್ತದೆ ಎಂದಾಕ್ಷಣ ವಿಚ್ಚೇದನಕ್ಕೆ ಸಜ್ಜಾಗುತ್ತಿದ್ದಾರೆ.

ಇಲ್ಲೊಂದು ಇದಕ್ಕೆ ಉತ್ತಮ ನಿದರ್ಶನದಂತಿರುವ ಘಟನೆಯೊಂದು ನಡೆದಿದ್ದು, ಲಾಯರ್‌ ಆಫೀಸಿನಲ್ಲಿ ಗಂಡ ಬಹಳ ನೋವಿನಿಂದ ತಾನು ಕಷ್ಟಪಟ್ಟು ಕೂಡಿಟ್ಟ ಅಥವಾ ಸಾಲ ಮಾಡಿ ತಂದಂತಹ ಹಣವನ್ನು ಮಾಜಿ ಹೆಂಡತಿಯ ಕೈಗೆ ಕೊಟ್ರೆ, ಆಕೆ ಒಂದು ಚೂರು ದುಃಖ ಪಡದೆ ಖುಷಿ ಖುಷಿಯಾಗಿ ಪರಿಹಾರ ಹಣವನ್ನು ಸ್ವೀಕರಿಸಿದ್ದಾಳೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಶೋನಿ ಕಪೂರ್‌ ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಲಾಯರ್‌ ಆಫೀಸಿನಲ್ಲಿ ಗಂಡ ತನ್ನ ಮಾಜಿ ಹೆಂಡ್ತಿಗೆ ಪರಿಹಾರ ಹಣವನ್ನು ನೀಡುತ್ತಿರುವ ದೃಶ್ಯವನ್ನು ಕಾಣಬಹುದು.

 

 

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments