ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿಕೊಂಡು ಬಂದಿದ್ದಂತ ದರ್ಶನ್ ಅಂಡ್ ಗ್ಯಾಂಗ್, ಆತನ ಮೇಲೆ ಭೀಕರವಾಗಿ ಹಲ್ಲೆ ಮಾಡಿ ಹತ್ಯೆ ಮಾಡಲಾಗಿತ್ತು. ಇದು ಯಾವುದೇ ಸಿನಿಮಾಗೂ ಕಡಿಮೆಯಿಲ್ಲ ಎನ್ನಲಾಗಿತ್ತು. ಹೀಗಾಗಿಯೇ ದರ್ಶನ್ ಅಂಡ್ ಗ್ಯಾಂಗ್ ಅರೆಸ್ಟ್ ಎಂಬ ಟೈಟಲ್ ನಡಿಯಲ್ಲೇ ಚಿತ್ರವನ್ನು ಮಾಡೋ ಸುಳಿವನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನೀಡಿದ್ದಾರೆ.
ನಟ ದರ್ಶನ್ ಅಂಡ್ ಗ್ಯಾಂಗ್ ನಡೆಸಿದಂತ ರೇಣುಕಾಸ್ವಾಮಿ ಹತ್ಯೆ ಪ್ರಕರಣ ದಿನಕ್ಕೊಂದು ತಿರುಪು ಪಡೆಯುತ್ತಿದೆ. ಇಂದು ಪ್ರಕರಣ ಸಂಬಂಧ ಸ್ಪೋಟಕ ಮಾಹಿತಿ ಹೊರಬಿದ್ದಿದ್ದು, ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದಿದ್ದೇ ನಟ ದರ್ಶನ್. ಆ ಕಾರಣಕ್ಕೇ ರೇಣುಕಾಸ್ವಾಮಿ ಶೆಡ್ ನಲ್ಲೇ ಸಾವನ್ನಪ್ಪಿರೋದಾಗಿ ಹೇಳಲಾಗುತ್ತಿತ್ತು.
ಇದೇ ಸಂದರ್ಭದಲ್ಲಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಎಕ್ಸ್ ನಲ್ಲಿ ಪೋಸ್ಟ್ ಒಂದು ಮಾಡಿದ್ದು, ಅದರಲ್ಲಿ ಒಬ್ಬ ಸ್ಟಾರ್ ತನ್ನ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದ ಇನ್ನೊಬ್ಬ ಡೈ ಹಾರ್ಡ್ ಅಭಿಮಾನಿಯನ್ನು ಕೊಲ್ಲಲು ಒಬ್ಬ ಡೈ ಹಾರ್ಡ್ ಫ್ಯಾನ್ ಅನ್ನು ಬಳಸುತ್ತಿರುವುದು ಸ್ಟಾರ್ ಆರಾಧನಾ ಸಿಂಡ್ರೋಮ್ನ ವಿಲಕ್ಷಣತೆಗೆ ಸೂಕ್ತ ಉದಾಹರಣೆಯಾಗಿದೆ. ಅಭಿಮಾನಿಗಳು ತಮ್ಮ ತಾರೆಯರು ತಮ್ಮ ಜೀವನವನ್ನು ಹೇಗೆ ನಡೆಸಬೇಕು ಎಂದು ಆದೇಶಿಸಲು ಬಯಸುತ್ತಾರೆ ಎಂಬುದು ಅದೇ ಸಿಂಡ್ರೋಮ್ನ ಅನಿವಾರ್ಯ ಅಡ್ಡಪರಿಣಾಮವಾಗಿದೆ ಎಂಬುದಾಗಿ ಕಥೆಯ ಬಗ್ಗೆ ಇಂಟ್ಸ್ ನೀಡುವ ಮೂಲಕ, ಮಾಹಿತಿ ಹಂಚಿಕೊಂಡಿದ್ದಾರೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com