Top Newsರಾಜ್ಯಸಿನಿಮಾಸುದ್ದಿ

ದರ್ಶನ್‌ಗೆ ಜೊತೆ ಸಿನಿಮಾ ಮಾಡ್ತೀನಿ: ಡೈರೆಕ್ಟರ್‌ ಜೋಗಿ ಪ್ರೇಮ್‌

ಧ್ರುವ ಸರ್ಜಾ ನಟಿಸಿರುವ ‘ಕೆಡಿ’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿರುವ ಡೈರೆಕ್ಟರ್ ಪ್ರೇಮ್ ಅವರು ಮುಂದಿನ ದಿನಗಳಲ್ಲಿ ದರ್ಶನ್ ಜೊತೆ ಸಿನಿಮಾ ಮಾಡ್ತೀನಿ, ಯಾವುದೇ ಕಾರಣಕ್ಕೂ ಬಿಡಲ್ಲ ಎಂದಿದ್ದಾರೆ.

ದರ್ಶನ್ ನನ್ನ ಬದ್ರರ್, ನನ್ನ ಕುಟುಂಬವಿದ್ದಂತೆ. ಹೋದ ವರ್ಷ ಅವರ ಹುಟ್ಟುಹಬ್ಬಕ್ಕೆ ಸಿನಿಮಾ ಮಾಡುವ ಕುರಿತು ಕೂತು ಮಾತನಾಡಿ ಪ್ಲ್ಯಾನ್ ಮಾಡಿದ್ದೇವು. ಕೆಡಿ ಸಿನಿಮಾದ ಕೆಲಸ ಮುಗಿದ್ಮೇಲೆ ದರ್ಶನ್ ಜೊತೆ ಸಿನಿಮಾ ಮಾಡೇ ಮಾಡುತ್ತೇನೆ. ಇನ್ನೂ ರೆಗ್ಯೂಲರ್ ಬೇಲ್ ಸಿಕ್ಮೇಲೆ ದರ್ಶನ್ ಅವರನ್ನು ಭೇಟಿಯಾಗಿ ಮಾತನಾಡಿ ಬಂದಿದ್ದೇನೆ. ಯಾವಾಗಲೂ ಮಾತನಾಡುತ್ತಿರುತ್ತೇವೆ. ಸಿನಿಮಾ ಬಿಟ್ಟು ನಾವು ಎಮೋಷನಲಿ ಕನೆಕ್ಟ್ ಆಗಿದ್ದೇವೆ ಎಂದಿದ್ದಾರೆ.

ಆಗ ನಾವು ‘ಕರಿಯ’ ಸಿನಿಮಾ ಮಾಡಬೇಕಾದರೆ ಮೀನಾ ತೂಗುದೀಪ ಅವರು ಅಡುಗೆ ಮಾಡಿ ಹಾಕೋರು. ಕೈ ತುತ್ತು ಕೊಡುತ್ತಿದ್ದರು. ಅವರ ಮನೆಯಲ್ಲಿ ಅನ್ನ ತಿಂದಿದ್ದೇವೆ. ಒಂದು ಕುಟುಂಬದ ಹಾಗೇಯೇ ಇರುತ್ತೇವೆ. ಮೊನ್ನೆಯಷ್ಟೇ ಭೇಟಿಯಾದೆ, ಈಗ ಅವರು ಚೇತರಿಸಿಕೊಳ್ತಿದ್ದಾರೆ ಎಂದಿದ್ದಾರೆ. ಇನ್ನೂ ದರ್ಶನ್‌ಗೆ ಬೆನ್ನು ನೋವಿದೆ. ಸ್ವಲ್ಪ ಹುಷಾರ್ ಆದ್ಮೇಲೆ ‘ಡೆವಿಲ್’ ಶೂಟಿಂಗ್ ಮಾಡುತ್ತಾರೆ. 100% ‘ಡೆವಿಲ್’ ಸಿನಿಮಾ ಬಂದೇ ಬರುತ್ತದೆ.

Comments (0)

Your email address will not be published. Required fields are marked *

Back to top button