Thursday, May 1, 2025
25.2 C
Bengaluru
LIVE
ಮನೆಕ್ರಿಕೆಟ್ಸೋಲಿನ ಮೂಲಕ ಐಪಿಎಲ್‌ ವೃತ್ತಿ ಜೀವನ ಮುಗಿಸಿದ ದಿನೇಶ್‌ ಕಾರ್ತಿಕ್‌!

ಸೋಲಿನ ಮೂಲಕ ಐಪಿಎಲ್‌ ವೃತ್ತಿ ಜೀವನ ಮುಗಿಸಿದ ದಿನೇಶ್‌ ಕಾರ್ತಿಕ್‌!

ಅಹಮದಾಬಾದ್‌: ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಿನೇಶ್ ಕಾರ್ತಿಕ್ ತಮ್ಮ ಐಪಿಎಲ್ ವೃತ್ತಿಜೀವನವನ್ನು ಅಂತ್ಯಗೊಳಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಬುಧವಾರದ ಎಲಿಮಿನೇಟರ್ ಅವರ ಕೊನೆಯ ಪಂದ್ಯವಾಗಿದೆ. ಇದರೊಂದಿಗೆ ಡಿಕೆ ಐಪಿಎಲ್‌ಗೆ ಗುಡ್‌ಬೈ ಹೇಳಿದ್ದಾರೆ.

ಬೆಂಗಳೂರು ಅವರನ್ನು ಮುಂದಿನ ಋತುವಿಗೆ ಉಳಿಸಿಕೊಳ್ಳುವುದಿಲ್ಲ ಅಥವಾ ಹರಾಜಿಗೂ ಕೂಡ ಅವರು ಬರುವುದಿಲ್ಲ. ಅಂದ ಹಾಗೆ ಕಾರ್ತಿಕ್‌ ಐಪಿಎಲ್‌ ನಿವೃತ್ತಿಯನ್ನು ಇನ್ನೂ ಅಧಿಕೃತವಾಗಿ ಘೋಷಿಸಲಿಲ್ಲ ಆದರೆ, ಪಂದ್ಯದ ಕೊನೆಯಲ್ಲಿ ಆರ್‌ಸಿಬಿ ಸಹ ಆಟಗಾರರು ದಿನೇಶ್ ಕಾರ್ತಿಕ್ ಅವರಿಗೆ ಗೌರವ ರಕ್ಷೆ ನೀಡಿದರು. ಈ ವೇಲೆ ವಿಕೆಟ್‌ ಕೀಪಿಂಗ್‌ ಗ್ಲೌಸ್ ಕಳಚಿ ಬೇಸರದಿಂದ ಮೈದಾನ ತೊರೆದರು. ಆಗ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳು, ಡಿಕೆ.. ಡಿಕೆ… ಘೋಷಣೆಗಳನ್ನು ಕೂಗಿದರು.

ಎಲಿಮಿನೇಟರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತ ನಂತರ ವಿರಾಟ್ ಕೊಹ್ಲಿ ಕೂಡ ದಿನೇಶ್‌ ಕಾರ್ತಿಕ್‌ ಅವರನ್ನು ಅಪ್ಪಿಕೊಂಡು ಭಾವುಕರಾದರು. ರಾಜಸ್ಥಾನ್‌ ರಾಯಲ್ಸ್‌ ತಂಡದೊಂದಿಗೆ ಕೊನೆಯವರೆಗೂ ಹೋರಾಡಿದ ಆರ್‌ಸಿಬಿ, ರೋವ್ಮನ್‌ ಪೊವೆಲ್ ಅವರನ್ನು ಕಟ್ಟಿ ಹಾಕಲು ಸಾಧ್ಯವಾಗದೆ ಸೋಲು ಒಪ್ಪಿಕೊಂಡಿತು. ಇದರಿಂದಾಗಿ ಕೊನೆಯ ಬಾರಿ ಐಪಿಎಲ್ ಕಪ್ ಹಿಡಿದು ವೃತ್ತಿ ಜೀವನಕ್ಕೆ ಅದ್ಧೂರಿಯಾಗಿ ವಿದಾಯ ಹೇಳುವ ಅವಕಾಶವನ್ನೂ ಕಾರ್ತಿಕ್‌ ಕಳೆದುಕೊಂಡರು.

250ಕ್ಕೂ ಹೆಚ್ಚು ಪಂದ್ಯಗಳು

ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ ದಿನೇಶ್ ಕಾರ್ತಿಕ್ ಒಟ್ಟು 257 ಪಂದ್ಯಗಳನ್ನು ಆಡಿದ್ದು 4842 ರನ್ ಗಳಿಸಿದ್ದಾರೆ. ಇದರಲ್ಲಿ 22 ಅರ್ಧಶತಕಗಳಿವೆ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 10 ಆಟಗಾರರಲ್ಲಿ ಡಿಕೆ ಕೂಡ ಒಬ್ಬರು. ಅದರಲ್ಲೂ ಆರ್‌ಸಿಬಿ ಸೇರಿದ ನಂತರ ಕಾರ್ತಿಕ್‌, ಕ್ರಿಕೆಟ್‌ನ ನೈಜ ಜಗತ್ತಿಗೆ ಪರಿಚಯವಾದರು ಎನ್ನಬಹುದು. ಅವರ ಆಟ ಸಾಕಷ್ಟು ಸುಧಾರಿಸಿದೆ. ಅವರು ಉತ್ತಮ ಫಿನಿಶರ್. ಕ್ರೀಸ್‌ನಲ್ಲಿದ್ದರೆ ಪಂದ್ಯ ಗೆದ್ದಂತೆ ಎಂಬ ನಂಬಿಕೆ ಆರ್‌ಸಿಬಿ ಅಭಿಮಾನಿಗಳಲ್ಲಿ ಮೂಡುವಂತೆ ಮಾಡಿದ್ದರು ಡಿಕೆ. ಆದರೆ ಕಳೆದ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದರು. ಅವರು 13 ಎಸೆತಗಳಲ್ಲಿ 11 ರನ್ ಗಳಿಸಿ ವಿಕೆಟ್‌ ಒಪ್ಪಿಸಿದರು.

ಕಾಮೆಂಟರಿ ಆಗಿ ಕಾರ್ಯನಿರ್ವಹಣೆ

ದಿನೇಶ್‌ ಕಾರ್ತಿಕ್‌ ಭಾರತ ತಂಡದ ಪರ ನಿಯಮಿತವಾಗಿ ಆಡುತ್ತಿಲ್ಲ. ಹಾಗಾಗಿ ಕಾಮೆಂಟರಿ ಕರ್ತವ್ಯವನ್ನೂ ನಿರ್ವಹಿಸುತ್ತಿದ್ದಾರೆ. 2022ರ ಐಪಿಎಲ್‌ನಲ್ಲಿ 183 ಸ್ಟ್ರೈಕ್ ರೇಟ್‌ನೊಂದಿಗೆ 330 ರನ್ ಗಳಿಸಿದ್ದ ಕಾರ್ತಿಕ್‌, ನಾಲ್ಕು ವರ್ಷಗಳ ನಂತರ ರಾಷ್ಟ್ರೀಯ ತಂಡಕ್ಕೆ ಮರಳಿದ್ದರು. ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ವೈಫಲ್ಯ ಅನುಭವಿಸಿತ್ತು. ನಂತರ ಭಾರತ ತಂಡದಲ್ಲ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಪ್ರಸಕ್ತ ಐಪಿಎಲ್‌ ಋತುವಿನಲ್ಲೂ 15 ಪಂದ್ಯಗಳಲ್ಲಿ 326 ರನ್ ಗಳಿಸಿದ್ದಾರೆ.

ಐಪಿಎಲ್‌ನಲ್ಲಿ 6 ತಂಡಗಳನ್ನು ಪ್ರತಿನಿಧಿಸಿದ್ದ ಕಾರ್ತಿಕ್‌

ದಿನೇಶ್ ಕಾರ್ತಿಕ್ ಐಪಿಎಲ್‌ನಲ್ಲಿ ಒಟ್ಟು 6 ತಂಡಗಳನ್ನು ಪ್ರತಿನಿಧಿಸಿದ್ದಾರೆ. ಅವರು ಮೊದಲು ತಮ್ಮ ವೃತ್ತಿಜೀವನವನ್ನು ಡೆಲ್ಲಿ ಡೇರ್‌ಡೆವಿಲ್ಸ್‌ನೊಂದಿಗೆ (ಡೆಲ್ಲಿ ಕ್ಯಾಪಿಟಲ್ಸ್) 2008 ರಲ್ಲಿ ಪ್ರಾರಂಭಿಸಿದರು. ನಂತರ ಅವರನ್ನು 2011ರ ಐಪಿಎಲ್ ಹರಾಜಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಪಂಜಾಬ್ ಕಿಂಗ್ಸ್) ಖರೀದಿಸಿತ್ತು. ಮುಂದಿನ ಎರಡು ವರ್ಷಗಳ ಕಾಲ ಅವರು ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಅಲ್ಲದೆ 2013ರ ಐಪಿಎಲ್ ಟ್ರೋಫಿ ಗೆದ್ದ ಮುಂಬೈ ತಂಡದಲ್ಲಿ ಕಾರ್ತಿಕ್‌ ಆಡಿದ್ದರು. ಮುಂಬೈ ಪರ 19 ಇನಿಂಗ್ಸ್‌ಗಳಲ್ಲಿ 510 ರನ್ ಗಳಿಸಿದ್ದರೂ ಅವರನ್ನು ತಂಡ ಉಳಿಸಿಕೊಂಡಿರಲಿಲ್ಲ.

2014ರಲ್ಲಿ ಮತ್ತೆ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡದ್ದ ಅವರು, 2015ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 12.5 ಕೋಟಿ ರೂ.ಗಳಿಗೆ ಆಡಿದ್ದರು. ಆದರೆ, 2016 ಮತ್ತು 2017 ರಲ್ಲಿ ಅವರು ಗುಜರಾತ್ ಲಯನ್ಸ್‌ ಪರ ಆಡಿದ್ದರು. 2018 ರಿಂದ ಅವರು ನಾಲ್ಕು ಋತುಗಳಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಪ್ರತಿನಿಧಿಸಿದ್ದರು. ಕೆಕೆಆರ್‌ಗೆ ನಾಯಕನಾಗಿರುವುದು ಕೂಡ ವಿಶೇಷ. ಅವರು 2022 ರಲ್ಲಿ ಮತ್ತೆ ಆರ್‌ಸಿಬಿಗೆ ಮರಳಿದ್ದರು.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments