ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮಿಂಚಿದ ಯುವ ಆಟಗಾರ ಧ್ರುವ್ ಜುರೇಲ್ (Dhruv Jurel)ಅರ್ಧಶತಕ ಬಾರಿಸಿದ ಬಳಿಕ ಸೆಲ್ಯೂಟ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಧ್ರುವ್ ನಡೆಗೆ ಕಾರಣವೂ ಇದೆ.
ಧ್ರುವ್ ಜುರೇಲ್.. ಟೆಸ್ಟ್ ಕೆರೀರ್ನ ಮೊದಲ ಅರ್ಧಶತಕ (90ರನ್) ಗಳಿಸಿ ಮಿಂಚಿದ್ದಾರೆ. ಅರ್ಧಶತಕದ ಬಾರಿಸಿದ ಕೂಡಲೇ ಧ್ರುವ್ ಸೆಲ್ಯೂಟ್ (salute) ಮಾಡಿದ್ದು ಎಲ್ಲರನ್ನು ಅಚ್ಚರಿಗೀಡು ಮಾಡಿತು. ಯಾಕೆ ಅನ್ನೋದು ಮೊದಲಿಗೆ ಯಾರಿಗೂ ಅರ್ಥ ಆಗಲಿಲ್ಲ. ಕಾರಣ ತಿಳಿದ ಬಳಿಕ ನೆಟ್ಟಿಗರು ಧ್ರುವ್ ನಿನಗೆ ಹ್ಯಾಟ್ಸಾಫ್ ಎನ್ನತೊಡಗಿದ್ದಾರೆ.
30ರನ್ಗಳ ಓವರ್ನೈಟ್ ಸ್ಕೋರ್ ಜೊತೆಗೆ ಇಂದಿನ ಇನ್ನಿಂಗ್ಸ್ ಆರಂಭಿಸಿದ ಯುವ ಬ್ಯಾಟರ್ ಧ್ರುವ್ ಜುರೇಲ್ ಮೆಲ್ಲಗೆ ಗೇರ್ ಬದಲಿಸುತ್ತಾ ಸ್ಕೋರ್ಬೋರ್ಡ್ನಲ್ಲಿ ರನ್ ಹೆಚ್ಚಿಸಿದರು. ಟೇಲ್ ಎಂಡರ್ಗಳ ಜೊತೆಗೂಡಿ ಇಂಗ್ಲೆಂಡ್ ಮುನ್ನಡೆಯನ್ನು ಕೇವಲ 46 ರನ್ಗಳಿಗೆ ಇಳಿಸಿದರು.
ಇಂದು ಮೊದಲ ಅರ್ಧಶತಕ ಗಳಿಸಿದ ತಕ್ಷಣವೇ ಧ್ರುವ್ ಜುರೇಲ್ ಸೆಲ್ಯೂಟ್ ಮಾಡಿದರು. ಮಾಜಿ ಸೈನಿಕರಾದ ತಮ್ಮತಂದೆಯ ಗೌರವಾರ್ಥ ಧ್ರುವ್ ಈ ಸೆಲ್ಯೂಟ್ ಮಾಡಿದರು..
1999ರ ಕಾರ್ಗಿಲ್ ಯುದ್ಧದಲ್ಲಿ ಧ್ರುವ್ ತಂದೆ ನೇಮ್ಚಂದ್ ಜುರೇಲ್ ದೇಶಸೇವೆ ಮಾಡಿದರು. ಹವಾಲ್ದಾರ್ ಹುದ್ದೆಯಲ್ಲಿದ್ದಾಗ ಅವರ ಸೇವಾ ನಿವೃತ್ತಿ ಪಡೆದುಕೊಂಡರು. ಧ್ರುವ್ರನ್ನು ಸೇನಾಧಿಕಾರಿ ಹುದ್ದೆಯಲ್ಲಿ ನೋಡಲು ನೇಮ್ಚಂದ್ ಜುರೇಲ್ ಬಯಸಿದ್ದರು.
ಆದರೆ, ಚಿಕ್ಕಂದಿನಿಂದ ಧ್ರುವ್ಗೆ ಇದ್ದ ಕ್ರಿಕೆಟ್ ಆಸಕ್ತಿ ಕಂಡು ಪುತ್ರನನ್ನು ಪ್ರೋತ್ಸಾಹಿಸಿದರು. ಇತ್ತೀಚಿಗೆ ಟೆಸ್ಟ್ ಕ್ಯಾಪ್ ಪಡೆದಾಗ ಆ ಕ್ಷಣಗಳನ್ನು ತಂದೆಗೆ ಅಂಕಿತ ಮಾಡಿದ್ದರು.