ಧಾರವಾಡ: ಸಾಮಾನ್ಯವಾಗಿ ನೀವು ಕೆಂಪು ಬಣ್ಣದ ಕಲ್ಲಂಗಡಿ ನೋಡಿಯೇ ಇರುತ್ತೇರಿ. ಆದರೆ, ಧಾರವಾಡದಲ್ಲೊಬ್ಬ ರೈತ ಹಳದಿ ಬಣ್ಣದ ಕಲ್ಲಂಗಡಿ ಹಣ್ಣು ಬೆಳೆದು ಎಲ್ಲರ ಗಮನ ಸೆಳೆದಿದ್ದಾರೆ.
ಧಾರವಾಡ ತಾಲೂಕಿನ ಕುರುಬರಗಟ್ಟಿ ಗ್ರಾಮದ ಮೈಲಾರಪ್ಪ ಗುಡ್ಡಪ್ಪನವರ್ ಅವರು ಒಂದು ಎಕರೆ ಪ್ರದೇಶದಲ್ಲಿ ಹಳದಿ ಕಲ್ಲಂಗಡಿ ಹಣ್ಣನ್ನು ಬೆಳೆದಿದ್ದಾರೆ.
ಸದ್ಯ ಹಳದಿ ಕಲ್ಲಂಗಡಿ ಎಲ್ಲರ ಗಮನ ಸೆಳೆದು, ಕುತೂಹಲಕ್ಕೆ ಕಾರಣವಾಗಿದೆ. ಈ ಮಧ್ಯೆ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಕುರಬರಗಟ್ಟಿ ಗ್ರಾಮದ ಮೈಲಾರಪ್ಪನವರ ತೋಟಕ್ಕೆ ಭೇಟಿ ಕೊಟ್ಟು, ಹಳದಿ ಕಲ್ಲಂಗಡಿ ಹಣ್ಣನ್ನು ಸೇವಿಸಿ ಖುಷಿಪಟ್ಟಿದ್ದಾರೆ.


