SportsTop Newsಕ್ರಿಕೆಟ್ಸುದ್ದಿ

RCB ಮಾಜಿ ಸ್ಪಿನ್ ಮಾಂತ್ರಿಕ ಚಹಲ್ ಪತ್ನಿ ಧನಶ್ರೀಗೆ ಸಿನಿಮಾದಲ್ಲಿ ಬೊಂಬಾಟ್ ಆಫರ್

ಟೀಮ್​ ಇಂಡಿಯಾ ಸ್ಪಿನ್​ ಮೆಜಿಶಿಯನ್ ಎಂದು ಹೆಸರು ಪಡೆದ ಯುಜುವೇಂದ್ರ ಚಹಲ್​ ಪತ್ನಿ​ ಧನಶ್ರೀ ವರ್ಮಾಗೆ ಒಂದು ಬಿಗ್ ಬಜೆಟಿನ ಸಿನಿಮಾದಲ್ಲಿ ಆಫರ್​​ ಬಂದಿದೆ. ಚಹಲ್​ ಪತ್ನಿಯ ಡಾನ್ಸ್​​ಗೆ ಫುಲ್​ ದಿಲ್​​ ಖುಷ್​ ಆಗಿರೋ ಟಾಲಿವುಡ್​​ನ ಟಾಪ್​​ ನಿರ್ಮಾಪಕರೊಬ್ಬರು ಸಿನಿಮಾದಲ್ಲಿ ಆಫರ್​ ಕೊಟ್ಟಿದ್ದಾರೆ. ಚಹಲ್​ ಪತ್ನಿಗೆ ಬಂದಿರೋ ಬೊಂಬಾಟ್​​ ಆಫರ್​​ ಏನು ಎಂದು ಚಹಲ್ ಅಭಿಮಾನಿಗಳಲ್ಲಿ ಕುತುಹಲ ಹೇಚ್ಚಾಗಿದೆ.

ಧನಶ್ರೀ ವರ್ಮಾಗೆ ಈ ಹೈ ಎನರ್ಜಿಯ ಜಬರ್ದಸ್ತ್​​​​ ಡ್ಯಾನ್ಸ್​​ ಮಾಡುತ್ತಾರೆ. ಈ ಸುಂದರಿ ಟೀಮ್​ ಇಂಡಿಯಾದ ಸ್ಪಿನ್​ ಮೆಜಿಶಿಯನ್​ ಯುಜುವೇಂದ್ರ ಚಹಲ್​ರ ಪತ್ನಿ. ಇವರು ಸೋಷಿಯಲ್​ ಮೀಡಿಯಾದಲ್ಲಿ ಯಾವಾಗ್ಲೂ ಟ್ರೆಂಡಿಂಗ್​ನಲ್ಲಿರ್ತಾರೆ. ಸಖತ್​ ಸ್ಟೆಪ್ಸ್​ಗಳನ್ನ ಹಾಕೋ ಧನಶ್ರೀಯ ಡ್ಯಾನ್ಸ್​ ವಿಡಿಯೋಗಳಂತೂ ಸೆನ್ಸೇಷನ್​​ ಸೃಷ್ಟಿಸಿ ಬಿಡುತ್ತವೆ. ಈಕೆಯಲ್ಲಿರುವ ಡಾನ್ಸ್​​ ಕಲೆಗಾರಿಕೆಗೆ ಫಿದಾ ಆಗದೇ ಇರೋರೆ ಇಲ್ಲ ಬಿಡಿ.

ಧನಶ್ರೀ ವರ್ಮಾ ಡಾನ್ಸ್​ಗೆ ಕೇವಲ ಸೋಷಿಯನ್​ ಮೀಡಿಯಾದ ಫ್ಯಾನ್ಸ್​​ ಮಾತ್ರವಲ್ಲ.. ಬಾಲಿವುಡ್​ ಅಂಗಳದ ಹಲವರು ಕೂಡ ಕ್ಲೀನ್​ಬೋಲ್ಡ್​ ಆಗಿದ್ದಾರೆ. ಇದೀಗ ಧನಶ್ರೀಯ ಡಾನ್ಸ್​ಗೆ ತೆಲುಗಿನ ಫೇಮಸ್​​ ನಿರ್ಮಾಪಕ ದಿಲ್​ ರಾಜು ದಿಲ್​ ಖುಷ್​​ ಆಗಿದ್ದಾರೆ. ಇಷ್ಟೇ ಅಲ್ಲ, ಅವ್ರ ಮುಂದಿನ ಪ್ರಾಜೆಕ್ಟ್​​ ಭಾಗವಾಗುವಂತೆ ಬಿಗ್​ ಆಫರ್​ ನೀಡಿದ್ದಾರೆ.

ಅಂದ್ಹಾಗೆ ದಿಲ್​ ರಾಜು ಬಗ್ಗೆ ಬಹುತೇಕರಿಗೆ ಗೊತ್ತೇ ಇದೆ. ಆರ್ಯ, ಬೊಮ್ಮರಿಲ್ಲು, ಮಹರ್ಷಿ, ವಾರಿಸು, ಮಿ.ಪರ್ಫೆಕ್ಟ್​, ವಕಿಲ್​ ಸಾಬ್​, ದುವ್ವಾಡ ಜಗನ್ನಾಥಂನಂತ ಫೇಮಸ್​ ಚಿತ್ರಗಳ ನಿರ್ಮಾಪಕ. ತೆಲಗು ಇಂಡಸ್ಟ್ರಿಯ ಈ ಟಾಪ್​ ನಿರ್ಮಾಪಕರಿಂದ ಧನಶ್ರೀಗೆ ಆಫರ್​ಗೆ ಹೋಗಿದೆ.

ಟಾಲಿವುಡ್​​ ನಿರ್ಮಾಪಕ ದಿಲ್ ​​ರಾಜು ‘ಆಕಾಶಮ್​​ ದಾಟಿ ವಸ್ತಾವಾ’ ಅನ್ನೋ ಡಾನ್ಸ್​ ಬೇಸ್ಡ್​​ ಮೂವಿನ ಪ್ರೋಡ್ಯೂಸ್​​ ಮಾಡ್ತಿದ್ದಾರೆ. ಈಗಾಗಲೇ ಕೋರಿಯಾಗ್ರಾಫರ್​​ ಯಶ್​​ ಹಾಗೂ ಮಲಯಾಳಂ ನಟಿ ಕಾರ್ತಿಕಾ ಮುರಳೀಧರನ್ ಪ್ರಮುಖ ಪಾತ್ರದಲ್ಲಿ ನಟಿಸ್ತಿದ್ದಾರೆ. ಇದೀಗ ಚಿತ್ರದ ಮತ್ತೊಂದು ಮಹತ್ವದ ಪಾತ್ರಕ್ಕೆ ಚಹಲ್​ ಪತ್ನಿಗೆ ಆಫರ್​ ಹೋಗಿದೆ.

ಸದ್ಯ ಸ್ಟೋರಿ ಲೈನ್​ ಕೇಳಿರುವ ಧನಶ್ರೀ, ನಟಿಸೋಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ ಎನ್ನಲಾಗಿದೆ. ಮುಂಬೈನಲ್ಲಿ ಈಗಾಗಲೇ ಟ್ರಯಲ್​ ಶೂಟ್​ಗಳನ್ನ ಮಾಡಲಾಗಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ, ತೆಲುಗು ಇಂಡಸ್ಟ್ರಿಗೆ ಶೀಘ್ರದಲ್ಲೇ ಧನಶ್ರೀ ವರ್ಮಾ ಡೆಬ್ಯೂ ಮಾಡಲಿದ್ದಾರೆ.

ಧನಶ್ರೀ ವರ್ಮಾ ಈವರೆಗೆ ಯಾವುದೇ ಚಿತ್ರದಲ್ಲಿ ನಟಿಸಿಲ್ಲ.. ಆದ್ರೆ, ಜಲಕ​ ದಿಕಲಾಜಾನಂತಹ ಡಾನ್ಸ್​ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಹಲವು ಮ್ಯೂಸಿಕ್​ ಅಲ್ಬಂಗಳ ಭಾಗವಾಗಿದ್ದಾರೆ. 2023ರ ಏಕದಿನ ವಿಶ್ವಕಪ್​​ನಂತ ಬಿಗ್​ ಪ್ರಾಜೆಕ್ಟ್​ನಲ್ಲೂ ಕಾಣಿಸಿಕೊಂಡಿದ್ದರು.

ಸೋಷಿಯಲ್​ ಮೀಡಿಯಾದಲ್ಲಿ ಧನಶ್ರಿ ವರ್ಮಾ ಸಪರೇಟ್​ ಫ್ಯಾನ್​ ಬೇಸ್​​ ಇದೆ. ಇನ್ಸ್​​​​ಸ್ಟಾಗ್ರಾಂನಲ್ಲಿ 6.2 ಮಿಲಿಯನ್​​ ಫಾಲೋವರ್ಸ್​ ಹೊಂದಿದ್ದಾರೆ. ಯೂಟೂಬ್​, ಫೇಸ್​​ಬುಕ್​ಗಳಲ್ಲೂ ಧನಶ್ರೀಗೆ ಫಾಲೋವರ್ಸ್​ ಇದ್ದಾರೆ. ಈ ಪ್ರಸಿದ್ಧಿ ಹಾಗೂ ಟ್ಯಾಲೆಂಟ್​ಗೆ ಇದೀಗ ಟಾಲಿವುಡ್​​ನಿಂದ ಆಫರ್​​ ಬಂದಿದೆ. ಈ ಆಫರ್​ ಒಪ್ಪಿ ಧನಶ್ರೀ ತೆಲುಗು ಸಿನಿ ಇಂಡಸ್ಟ್ರಿಯಲ್ಲಿ ಬಣ್ಣ ಹಚ್ತಾರಾ ಎಂದು ಕಾದು ನೋಡಬೇಕಿದೆ.

Comments (0)

Your email address will not be published. Required fields are marked *

Back to top button