ಬೆಂಗಳೂರು: ನಟ ದರ್ಶನ್ ನಟನೆಯ ಡೆವಿಲ್ ಚಿತ್ರದಲ್ಲಿ ನಾಯಕಿ ನಟಿಯಾಗಿ ನಟಿಸಿರುವ ರಚನಾ ರೈ ಡಿ ಬಾಸ್ ಬಗ್ಗೆ ಗುಣಗಾನ ಮಾಡಿದ್ದಾರೆ..
ನಿಮ್ಮಂತಹ ಸೂಪರ್ ಸ್ಟಾರ್ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿರೋದು ನನ್ನ ಅದೃಷ್ಟ. ಪ್ರತಿ ದಿನ ನೀವು ಸೆಟ್ ನಲ್ಲಿ ಇರುತ್ತಿದ್ದ ರೀತಿ, ಸಿನಿಮಾ ಪ್ರೀತಿ, ತಾಳ್ಮೆ, ಕೆಲಸದ ಮೇಲಿನ ಶ್ರದ್ದೆ ನನಗೊಂದು ಒಳ್ಳೆಯ ಪಾಠ. ಕ್ಯಾಮೆರಾ ಮುಂದೆ ಮಾತ್ರವಲ್ಲದೇ, ಕ್ಯಾಮೆರಾ ಹಿಂದೆ ನೀವು ತೋರಿದ ಪ್ರೀತಿ, ಸಹಕಾರವನ್ನು ಮರೆಯುವಂತಿಲ್ಲ. ನಾನು ಕಂಡ ಅದ್ಭುತ ವ್ಯಕ್ತಿ ನೀವು ಎಂದು ರಚನಾ ಸೋಶಿಯಲ್ ಮಿಡೀಯಾದಲ್ಲಿ ಹಾಡಿನ ಸಮಯದ ಅನುಭವವನ್ನು ತೆರೆದಿಟ್ಟಿದ್ದಾರೆ.
ಸದ್ಯ ದರ್ಶನ್ ಜೈಲಿನಲ್ಲಿರುವುದರಿಂದ ಸಿನಿಮಾದ ಪ್ರಮೋಶನ್ ಜವಾಬ್ದಾರಿ ಇತರ ನಟರ ಹೆಗಲಿಗೆ ಬಿದ್ದಿದೆ. ಶ್ರೀ ಜೈ ಮಾತ ಕಂಬೈನ್ಸ್ ಲಾಂಛನದಲ್ಲಿ ಪ್ರಕಾಶ್ ವೀರ್‌ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರ ಡಿಸೆಂಬರ್12 ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಸುಧಾಕರ್. ಎಸ್.ರಾಜ್ ಅವರ ಛಾಯಾಗ್ರಹಣವಿರುವ “ದಿ ಡೆವಿಲ್” ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಹರೀಶ್ ಕೊಮ್ಮೆ ಸಂಕಲನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಹಾಗೂ ರಾಮ್ ಲಕ್ಷ್ಮಣ್ ಅವರ ಸಾಹಸ ನಿರ್ದೇಶನವಿದೆ.


