ರಾಜಕೀಯರಾಜ್ಯಸುದ್ದಿ

ಉತ್ತರ ಕೊಡದ ಇಲಾಖೆಗಳು: ಸಿಎಂಗೆ ಸ್ಪೀಕರ್ ಖಾದರ್ ಖಡಕ್ ವಾರ್ನಿಂಗ್, ವಿಧಾನಸಭೆಯಲ್ಲಿ ಪಟ್ಟಿ ಓದಿದರು..!

ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಉತ್ತರ ನೀಡದೇ ಇರುವ ಇಲಾಖೆಗಳ ವಿರುದ್ಧ ಸ್ಪೀಕರ್ ಕಠಿಣ ಕ್ರಮ ಕೈಗೊಂಡಿದ್ದಾರೆ. ಸದನದಲ್ಲಿ ಉತ್ತರಿಸಲು ಬಾಕಿ ಇರುವ ಪ್ರಶ್ನೆಗಳಿಗೆ ಇನ್ನೂ ಉತ್ತರ ಕಳುಹಿಸದ ಇಲಾಖೆಗಳ ಬಗ್ಗೆ ಸ್ಪೀಕರ್ ಸರಕಾರಕ್ಕೆ ಪತ್ರ ಬರೆದು ತೀವ್ರ ಎಚ್ಚರಿಕೆ ನೀಡಿದ್ದಾರೆ.

ಸ್ಪೀಕರ್ ಪತ್ರದಲ್ಲಿ, “ಉತ್ತರ ನೀಡದಿರುವುದರಿಂದ ಶಾಸಕರ ಹಕ್ಕಿಗೆ ಮತ್ತು ಸದನದ ಘನತೆಗೆ ಚ್ಯುತಿಯಾಗಿದೆ. ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದೆ” ಎಂದು ಹೈಲೈಟ್ ಮಾಡಿದ್ದಾರೆ. ಇವತ್ತು ವಿಧಾನಸಭೆಯಲ್ಲಿ ಉತ್ತರಿಸದ ಇಲಾಖೆಗಳ ಪಟ್ಟಿ ಸ್ಪೀಕರ್ ಉಲ್ಲೇಖಿಸಿ, ಅಂಕಿ-ಅಂಶಗಳನ್ನು ಸಾರ್ವಜನಿಕಗೊಳಿಸಿದ್ದಾರೆ.

ಸಿಎಂ ಅವರು “ಇನ್ನೆರಡು ದಿನಗಳಲ್ಲಿ ಸರಿಹೋಗಲಿದೆ” ಎಂದು ಭರವಸೆ ನೀಡಿದರಾಗಿ, ಸರ್ಕಾರದ ಪರ ಪ್ರತಿನಿಧಿ ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ: “ಉತ್ತರ ನೀಡದ ಅಧಿಕಾರಿಗಳನ್ನ ಸಸ್ಪೆಂಡ್ ಮಾಡುವ ಅವಕಾಶವಿದೆ. ನಾಳೆಯಿಂದ ಎಲ್ಲವೂ ಸರಿಹೋಗಲಿದೆ.”

Comments (0)

Your email address will not be published. Required fields are marked *

Back to top button