Top Newsರಾಜ್ಯ

ಗಂಗಮತ ಸಂಘದ ಎಲೆಕ್ಷನ್- ಚುನಾವಣಾಧಿಕಾರಿ ಮುರಳಿ ಬದಲಿಸಲು ಒತ್ತಾಯ

ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ಚುನಾವಣೆಗಾಗಿ ನೇಮಿಸಲ್ಪಟ್ಟ ಚುನಾವಣಾಧಿಕಾರಿ ಮುರಳಿಯನ್ನು ಬದಲಿಸಬೇಕು ಎಂದು ಸಂಘದ ಸದಸ್ಯರು ಒತ್ತಾಯ ಮಾಡಿದ್ದಾರೆ.

ಈ ಹಿಂದೆ ಭಜಂತ್ರಿ ಸಂಘದಲ್ಲಿ ಹಗರಣ ಮಾಡಿರುವ ಆರೋಪ ಮುರಳಿ ಮೇಲಿದೆ.. ಹೀಗಾಗಿ ಮುರಳಿ ಅವರಿಂದ ನ್ಯಾಯಯುತ ಮತ್ತು ನಿಸ್ಪಕ್ಷಪಾತ ಚುನಾವಣೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ.. ರಿಟೈನಿಂಗ್ ಆಫೀಸರ್​ ಸ್ಥಾನದಿಂದ ಮರುಳಿ ಅವರನ್ನು ಬದಲಾಯಿಸಿ ಎಂದು ಸಂಘದ ಸದಸ್ಯ ಸಂತೆಕಸಲಗೆರೆ ಬಸವರಾಜು ಅವರು ಒತ್ತಾಯ ಮಾಡಿದ್ದಾರೆ.

ಮುರಳಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿದರೂ ಪದೇ ಪದೇ ಅದೇ ಜಾಗಕ್ಕೆ ಕೂರ್ತಿದ್ದಾರೆ.. ಮುಖ್ಯಮಂತ್ರಿ ಅವರೇ ಜನವರಿ ತಿಂಗಳಲ್ಲಿ ಮುರಳಿ ಎತ್ತಂಗಡಿಗೆ ಆದೇಶ ನೀಡಿದ್ರು. ಆದ್ರೆ, ಮುರಳಿ ತಮ್ಮ ಪ್ರಭಾವ ಬಳಸಿ ಕೇವಲ ನಾಲ್ಕೇ ತಿಂಗಳಲ್ಲಿ ಮತ್ತದೇ ಸ್ಥಾನಕ್ಕೆ ಬಂದು ಕುಳಿತಿದ್ರು..

ಮುರಳಿ ವಿರುದ್ಧ ಕೋಟಿ ಕೋಟಿ ಗೋಲ್ಮಾಲ್ ಮಾಡಿದ್ದಾರೆ ಎಂಬ ಆರೋಪವೂ ಇದೆ. ಮುರಳಿ ಕರ್ಮಕಾಂಡದ ಬಗ್ಗೆ ಸಾಕಷ್ಟು ದೂರುಗಳು ಇದ್ದರೂ, ಸಹಕಾರ ಇಲಾಖೆ ಮಹಾಮೌನದಲ್ಲಿದೆ.. ಸಚಿವ ಕೆಎನ್ ರಾಜಣ್ಣ ಅವರೇ ಏನಿದೆಲ್ಲ ಎಂದು ಜನ ಕೇಳುವಂತಾಗಿದೆ.

Comments (0)

Your email address will not be published. Required fields are marked *

Back to top button