ಬೆಂಗಳೂರು: ಸಮಾನ ವೇತನ, ವಜಾಗೊಂಡ ನೌಕರರ ಮರು ನೇಮಕ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದಿನಿಂದ ಸಾರಿಗೆ ಸಂಘಟನೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದೆ.
ಇಂದು ಫ್ರೀಡಂ ಪಾರ್ಕ್‌ನಲ್ಲಿ ಸಾರಿಗೆ ನಿಗಮಗಳ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟಗಳು ಸತ್ಯಾಗ್ರಹಕ್ಕೆ ಮುಂದಾಗಿವೆ. ವೇತನ ಸೇರಿ ಇನ್ನಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿ ನಾಲ್ಕು ಸಾರಿಗೆ ನಿಗಮ ನೌಕರರಿಂದ ಮುಷ್ಕರಕ್ಕೆ ಮುಂದಾಗಿದೆ.
ಇನ್ನು ಈ ನಡುವೆ ಪ್ರತಿಭಟನೆ, ಧರಣಿ ಕಾರ್ಯಕ್ರಮದಲ್ಲಿ ನೌಕರರು ಭಾಗಿಯಾಗದಂತೆ ಹಾಗೂ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರಿಗೆ ಕೆಎಸ್ಆರ್ಟಿಸಿ ಸೂಚನೆ ನೀಡಿದೆ. ಅನಗತ್ಯವಾಗಿ ರಜೆ ಹಾಕಿ ಬಸ್ ಕಾರ್ಯಾಚರಣೆಗೆ ತೊಂದರೆ ಮಾಡಿದ್ರೆ ಕ್ರಮದ ಎಚ್ಚರಿಕೆ ನೀಡಿದೆ.


