ಚಿತ್ರದುರ್ಗ: ಪವಿತ್ರ ಗೌಡಗೆ ಅಶ್ಲೀಲ ಪೋಟೋ ಹಾಗೂ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ ಅವರನ್ನು ಅರೆಸ್ಟ್ ಮಾಡಲಾಗಿದೆ.
ಚಿತ್ರದುರ್ಗ ನಗರದ ತುರುವನೂರು ರಸ್ತೆಯ ಮೊದಲನೇ ಕ್ರಾಸ್ ನ ನಿವಾಸಿಯಾಗಿರುವ ರೇಣುಕಸ್ವಾಮಿ ಅವರು ಮೆಡಿಕಲ್ ನಲ್ಲಿ ಕೆಲಸ ಮಾಡಿಕೊಂಡಿದ್ದನು.
ತುರುವನೂರು ರಸ್ತೆಯಲ್ಲಿರುವ ಮೃತನ ಮನೆಗೆ ಸ್ಥಳೀಯ ಚಿತ್ರದುರ್ಗ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ಯಾರು ಇಲ್ಲದಿರುವುದು ತಿಳಿದು ಬಂದಿದೆ. ಮನೆಯ ಸದಸ್ಯರು ಎಲ್ಲರೂ ಬೆಂಗಳೂರಿಗೆ ತೆರಳುತ್ತಿದ್ದಾರೆ ಎನ್ನಲಾಗಿದೆ.
ಶನಿವಾರ ರಾತ್ರಿ ರೇಣುಕಾಸ್ವಾಮಿಯನ್ನು ಕರೆ ತಂದ ಕೆಲವರು ಬೆಂಗಳೂರಿನಲ್ಲಿ ದರ್ಶನ ಮುಂದೆಯೇ ಆತನನ್ನು ಚೆನ್ನಾಗಿ ಥಳಿಸಿದ್ದಾರೆ. ದರ್ಶನ ಸಹ ಹಲ್ಲೆ ಮಾಡಿದ್ದಾರೆ ಎಂದು ವರದಿ ಆಗಿದೆ. ಬಳಿಕ ದರ್ಶನ್ ಮುಂದೆ ಮೂವರು ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿ ಬಳಿಕ ಚರಂಡಿಗೆ ಬಿಸಾಡಿದ್ದಾರೆ ಎಂದು ವರದಿಯಾಗಿದೆ.
ರೇಣುಕಾಸ್ವಾಮಿ ಚಿತ್ರದುರ್ಗ ವಿಆರ್ ಎಸ್ ಲೇಔಟ್ ನಿವಾಸಿ
ತಂದೆ ಕಾಶೀನಾಥ ಶಿವನಗೌಡ, ತಾಯಿ ರತ್ನಪ್ರಭಾ
ಪತ್ನಿ ಸಹನಾ ರೆಣುಕಾಪ್ರಸಾದ್ 8 ತಿಂಗಳ ಗರ್ಭಿಣಿ
ಬಾಲ್ಯದ ಸ್ನೇಹಿತರು ಬಂದಿದ್ದಾರೆ ಅಂತಾ ಮನೆಯಲ್ಲಿ ಹೇಳಿ ಹೋಗಿದ್ದ ರೇಣುಕಾಸ್ವಾಮಿ