ಮಂಗಳೂರು: ಹೆತ್ತ ತಾಯಿಗೆ ಮಗಳು ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಂಗಳೂರಿನ ಪಂಚಾಯತ್ ಕಚೇರಿ ಬಳಿ ನಡೆದಿದ್ದು, ಮಗಳು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..
ಮಗಳ ವರ್ತನೆಯ ಬಗ್ಗೆ ಬಂದ ತಾಯಿಯನ್ನು ನೆಲಕ್ಕೆ ತಳ್ಳಿ ಮಗಳು ಹಲ್ಲೆ ನಡೆಸಿದ್ದಾಳೆ.. ತಾಯಿ. ಮಗಳ ಉತ್ತರ ಕರ್ನಾಟಕದ ಮೂಲದವರಾಗಿದ್ದು, ಇವರ ನಡುವೆ ಈ ಹಿಂದೆ ಹಲವು ಬಾರಿ ಜಗಳ ನಡೆದಿತ್ತು ಎಂದು ಹೇಳಲಾಗುತ್ತಿದೆ.. ಮಗಳ ವಿರುದ್ಧ ದೂರು ನೀಡಲೆಂದು ತಾಯಿ ಮಂಗಳೂರಿನ ಮೂಡುಶೆಡ್ಡೆ ಗ್ರಾಮ ಪಂಚಾಯತ್ ಕಚೇರಿಗೆ ತೆರಳಿದ್ರು. ಪದೇ ಪದೇ ತಾಯಿ ತನ್ನ ವಿರುದ್ಧ ಪೊಲೀಸರಿಗೆ ಹಾಗೂ ಪಂಚಾಯತ್ಗೆ ದೂರು ಕೊಡುತ್ತಿದ್ದಾಳೆ ಎಂದು ಕೊಪಗೊಂಡು ಕಚೇರಿಯ ಮುಂದೆಯೇ ಮಗಳು ತಾಯಿಗೆ ಥಳಿಸಿದ್ದಾರೆ.. ಮೂರು ದಿನಗಳ ಹಿಂದೆ ನಡೆದ ಘಟನೆಯ ವಿಡಿಯ ಈಗ ವೈರಲ್ ಆಗಿದೆ.


