ರಾಜ್ಯಸಿನಿಮಾಸುದ್ದಿ

ಮಾಜಿ ಸಂಸದೆ ಸುಮಲತಾ ಅಂಬರೀಷ್, ಅಭಿಷೇಕ್ ಸೇರಿ 6 ಜನರನ್ನ ಅನ್​ಫಾಲೋ ಮಾಡಿದ ದಾಸ

ನಟ ದರ್ಶನ್ ಬರೋಬ್ಬರಿ ಒಂಬತ್ತು ತಿಂಗಳ ಬಳಿಕ ಮತ್ತೆ ಬಣ್ಣ ಹಚ್ಚಲಿದ್ದಾರೆ.  ಈ ಮಧ್ಯೆ ದರ್ಶನ್ ತಮ್ಮ ಇನ್ಟಾಗ್ರಾಮ್ ಖಾತೆಯಿಂದ ಮಾಜಿ ಸಂಸದೆ ಸುಮಲತಾ ಅಂಬರೀಷ್ ಮತ್ತು ಅಭಿಷೇಕ್ ಅಂಬರೀಷ್ ಸೇರಿದಂತೆ 6 ಜನರನ್ನು ಅನ್​ಫಾಲೋ ಮಾಡಿದ್ದಾರೆ. ಈ ಬೆನ್ನಲ್ಲೇ ಸುಮಲತಾ ಅಂಬರೀಷ್ ಹಾಕಿದ ಇನ್ಟಾ ಸ್ಟೇಟಸ್​ವೊಂದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ನಟ ದರ್ಶನ್ ಅನ್​ಫಾಲೋ ಮಾಡಿದ ಬೆನ್ನಲ್ಲೇ ಸುಮಲತಾ ಇಂಗ್ಲೀಷ್​ನ ಕ್ವೋಟ್​ವೊಂದನ್ನು ಸ್ಟೇಟಸ್ ಹಾಕಿಕೊಂಡಿದ್ದಾರೆ. ಮಾಜಿ ಸಂಸದೆ ಹಾಕಿದ ಸ್ಟೇಟಸ್ ಹೀಗಿದೆ, ಸತ್ಯ ತಿರುಚುವ, ಪಶ್ಚಾತ್ತಾಪವಿಲ್ಲದೆ ಜನರನ್ನು ನೋಯಿಸುವರು. ಆರೋಪವನ್ನು ಬೇರೆಡೆಗೆ ಬದಲಾಯಿಸುವವರು. ಆದರೂ ಕೆಲವರು ತಮ್ಮನ್ನು ತಾವು ಹೀರೋ ಎಂದುಕೊಳ್ಳುವಂತೆ ಮಾಡುವ ಅತ್ಯುತ್ತಮ ನಟನೆಗೆ ಆಸ್ಕರ್ ಪ್ರಶಸ್ತಿ ಕೊಡಬೇಕು ಎಂದು ಹೇಳಿದ್ದಾರೆ.

ನಟ ದರ್ಶನ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ  6 ಜನರನ್ನ ಫಾಲೋ ಮಾಡ್ತಿದ್ದರು ಅವರೆನ್ನೆಲ್ಲಾ ಏಕಾಏಕಿ ಅನ್​​ಫಾಲೋ ಮಾಡಿದ್ದಾರೆ. ಸುಮಲತಾ ಅಂಬರೀಶ್, ಲವ್ಲಿ ಬ್ರದರ್​​​​ ಅಭಿಷೇಕ್ ಅಂಬರೀಶ್, ಅಭಿಷೇಕ್ ಪತ್ನಿ ಅವಿವಾ, ಡಿ ಕಂಪನಿ, ದಿನಕರ್ ತೂಗುದೀಪ್​​, ಪುತ್ರ ವಿನೀಶ್​ನನ್ನ ಅನ್​ಫಾಲೋ ಮಾಡಿದ್ದಾರೆ. ಇದರಲ್ಲಿ ಸುಮಲತಾ ಅವರನ್ನು ಅನ್​ಫಾಲೋ ಮಾಡಿದ್ದೇ ಹೆಚ್ಚು ಚರ್ಚೆ ಆಗುತ್ತಿದ್ದು, ತಾಯಿ ಮಗನ ನಡುವೆ ಬೀರುಕು ಬಂತಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ..

Comments (0)

Your email address will not be published. Required fields are marked *

Back to top button