ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ರೆಗ್ಯುಲರ್ ಬೇಲ್ ಸಿಗುವ ವಿಚಾರದಲ್ಲಿ ಮತ್ತೆ ನಿರಾಸೆಯಾಗಿದೆ. ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಡಿ.9ಕ್ಕೆ ಮುಂದೂಡಿದೆ.
ಕೊಲೆ ಆರೋಪಿ ದರ್ಶನ್, ಪವಿತ್ರಾಗೌಡ, ಪ್ರದೋಷ್ ಸೇರಿದಂತೆ ಇತರ ಆರೋಪಿಗಳ ಜಾಮೀನು ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಸಲಾಯಿತು. ಎಸ್‌ಪಿಪಿ ವಾದ ಮಂಡನೆ ಮಾಡಿದ ಬಳಿಕ ನ್ಯಾಯಮೂರ್ತಿಗಳು ಸೋಮವಾರ ಮಧ್ಯಾಹ್ನ 2:30ಕ್ಕೆ ಮುಂದೂಡಿದರು. ಅಲ್ಲದೇ ಮಧ್ಯಂತರ ಜಾಮೀನು ಅರ್ಜಿ ವಜಾ ಕೋರಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಸೋಮವಾರಕ್ಕೆ ಕೋರ್ಟ್ ಮುಂದೂಡಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ಮೊದಲು ಪ್ರದೋಷ್ ಪರ ವಕೀಲರು ವಾದ ಮಂಡಿಸಿದರು. ಈ ವೇಳೆ ದರ್ಶನ್‌ನಿಂದ 30 ಲಕ್ಷ ರೂ. ಪಡೆದ ಆರೋಪ ಇದೆ. ಸರೆಂಡರ್ ಆಗುವವರಿಗೆ ಹಾಗೂ ಪೊಲೀಸರಿಗೆ ಹಣ ನೀಡಲು ಪಡೆಯಲಾಗಿದೆ ಎಂಬ ಆರೋಪ ಇದೆ. ಕೊಲೆ ನಡೆದ ಸ್ಥಳದಲ್ಲಿ ಪ್ರದೂಷ್ ಇರಲಿಲ್ಲವೇ ಎಂದು ಜಡ್ಜ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ವಕೀಲರು, ಇಡೀ ಆರೋಪದಲ್ಲಿ ಪ್ರದೂಷ್ ಭಾಗಿಯಾಗಿಲ್ಲ. ದರ್ಶನ್, ಪವಿತ್ರಾಗೌಡ ಜೊತೆ ಘಟನಾ ಸ್ಥಳಕ್ಕೆ ಹೋಗಿದ್ದಾರೆ. ಆದ್ರೆ ಪ್ರದೋಷ್‌ನದ್ದು ಏನೂ ಪಾತ್ರವಿಲ್ಲ. ಸಾಕ್ಷಿ ಪುನೀತ್ ಪ್ರಕಾರ ಪ್ರದೂಷ್ ಮೆಸೆಜ್‌ಗಳನ್ನ ಮಾತ್ರ ಓದಿದ್ದ ಎಂದರು. ಇದಕ್ಕೆ ಎಸ್‌ಪಿಪಿ ಪ್ರಸನ್ನಕುಮಾರ್ ಆಕ್ಷೇಪಣಾ ವಾದ ಮಂಡಿಸಿದರು.