ದರ್ಶನ್ ಅಭಿನಯದ ನವಗ್ರಹ ಚಿತ್ರ 16 ವರ್ಷಗಳ ನಂತರ ಮರು ಬಿಡುಗಡೆಗೆ ಸಿದ್ಧವಾಗಿದೆ. 2008ರಲ್ಲಿ ತೆರೆ ಕಂಡು ಹಿಟ್ ಆಗಿದ್ದ ಸಿನಿಮಾವನ್ನು ಮೀನಾ ತೂಗುದೀಪ ಶ್ರೀನಿವಾಸ್ ನಿರ್ಮಿಸಿದ್ದರು. ಈ ಸಿನಿಮಾ ಇಂದಿಗೂ ಕೂಡ ಕನ್ನಡಿಗರ ಮನದಲ್ಲಿ ವಿಶೇಷ ಸ್ಥಾನಪಡೆದಿದೆ.

ಇದೇ ಮೊದಲ ಬಾರಿಗೆ ನವಗ್ರಹ ರೀ-ರಿಲೀಸ್ ಆಗುತ್ತಿದೆ, ಈ ಸಂಬಂಧ ನಿರ್ದೇಶಕ ದಿನಕರ್ ತೂಗುದೀಪ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. “ಇದು ತೂಗುದೀಪ ಪ್ರೊಡಕ್ಷನ್ಸ್ ಅಡಿಯಲ್ಲಿ ತಯಾರಾಗಿರುವುದರಿಂದ ಇದು ಮಹತ್ವದ್ದಾಗಿದೆ, ನಮ್ಮ ಹೋಮ್ ಬ್ಯಾನರ್ ಅಡಿಯಲ್ಲಿ ನನ್ನ ಸಹೋದರ ದರ್ಶನ್ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದಾರೆ ಎಂದಿದ್ದಾರೆ.

ತರುಣ್ ಕಿಶೋರ್ ಸುಧೀರ್ ಮತ್ತು ಸೃಜನ್ ಲೋಕೇಶ್ ಸೇರಿದಂತೆ ಅನೇಕ ನಟರೊಂದಿಗೆ ನಿಕಟ ಬಾಂಧವ್ಯವನ್ನು ಹಂಚಿಕೊಂಡ ದಿನಕರ್ ಅವರಿಗೆ ಚಿತ್ರಕ್ಕಾಗಿ ಕಾಸ್ಟಿಂಗ್ ಸುಲಭವಾಗಿತ್ತು. “ಜಗ್ಗು ಪಾತ್ರಕ್ಕೆ ದರ್ಶನ್ ನನ್ನ ಮೊದಲ ಆಯ್ಕೆಯಲ್ಲ, ಆಪಾತ್ರವನ್ನು ವಿನೋದ್ ಪ್ರಭಾಕರ್ ಮಾಡಬೇಕೆಂದು ನಾನು ಬಯಸಿದ್ದೆ. ಆದರೆ, ನಾನು ವಿನೋದ್‌ಗೆ ಕಥೆಯನ್ನು ಹೇಳಿದಾಗ, ಅವರು ಅತಿಥಿ ಪಾತ್ರ ಅಥವಾ ಪೊಲೀಸ್ ಅಧಿಕಾರಿಗಿಂತ ನೆಗೆಟಿವ್ ಪಾತ್ರವನ್ನು ಮಾಡಲು ಬಯಸಿದ್ದರು. ಅವರ ಉತ್ಸಾಹ ಎಲ್ಲವನ್ನೂ ಬದಲಾಯಿಸಿತು, ಮತ್ತು ದರ್ಶನ್ ಜಗ್ಗು ಆದರು, ಮತ್ತು ವಿನೋದ್ ಟೋನಿಯಾಗಿ ಬಂದರು ಎಂದು ದಿನಕರ್ ಬಹಿರಂಗಪಡಿಸಿದರು.

ಸಿನಿಮಾದ ಪೊಲೀಸ್ ಪಾತ್ರಕ್ಕಾಗಿ ಅರ್ಜುನ್ ಸರ್ಜಾ ಅವರನ್ನು ಆಯ್ಕೆ ಮಾಡಲು ಬಯಸಿದ್ದರು. ಪಾತ್ರದ ಸಂಬಂಧ ಚರ್ಚಿಸಲು ಚೆನ್ನೈಗೆ ತೆರಳಿದ್ದೆ. “ದುರದೃಷ್ಟವಶಾತ್, ನಾನು ಅವರನ್ನು ಮನವೊಲಿಸಲು ಸಾಧ್ಯವಾಗಲಿಲ್ಲ, ಅಂತಿಮವಾಗಿ ಸೌರವ್ ಆ ಪಾತ್ರವನ್ನು ನಿರ್ವಹಿಸಿದರು ಎಂದು ವಿವರಿಸಿದರು. ನವಗ್ರಹದಲ್ಲಿ ಶರ್ಮಿಳಾ ಮಾಂಡ್ರೆ, ಗಿರಿ ದಿನೇಶ್, ಧರ್ಮ ಕೀರ್ತಿರಾಜ್, ವರ್ಷ, ಕೃತಿ ಪ್ರತಾಪ್ ಸೇರಿದಂತೆ ಪ್ರತಿಭಾವಂತ ಮೇಳದ ತಾರಾಗಣವಿದೆ. ಚಿತ್ರಕ್ಕೆ ಎವಿ ಚಿಂತನ್ ಅವರ ಸಂಭಾಷಣೆ, ಎವಿ ಕೃಷ್ಣ ಕುಮಾರ್ ಅವರ ಛಾಯಾಗ್ರಹಣ ಮತ್ತು ವಿ ಹರಿಕೃಷ್ಣ ಅವರ ಸಂಗೀತವಿದೆ.

ನವಗ್ರಹ ಫ್ರಾಂಚೈಸ್ ಮೂಲಕ ತಮ್ಮ ಹೋಮ್ ಬ್ಯಾನರ್ ಅನ್ನು ಪುನರುಜ್ಜೀವನಗೊಳಿಸುವ ಆಸೆಯಿದೆ. “ನವಗ್ರಹ ಚಿತ್ರ ಮಾಡುವಾಗ ನಮ್ಮ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಅಂದು ಯಾವುದನ್ನೂ ಪ್ಲಾನ್ ಮಾಡಿರಲಿಲ್ಲ ಮತ್ತು ಈಗ ಕೂಡ ಅದೇ ರೀತಿ ಆಗಲಿದೆ. ನವಗ್ರಹ 2 ಸಿನಿಮಾ ಬರಲಿದೆ ಎಂದು ನಾನು ನಂಬುತ್ತೇನೆ ಎಂದು ದಿನಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

By Veeresh

Leave a Reply

Your email address will not be published. Required fields are marked *

Verified by MonsterInsights