ದರ್ಶನ್​ರ ಅಭಿಮಾನಿಯೊಬ್ಬ ಕೊರಳಿಗೆ ದರ್ಶನ್ ರವರ ಪೋಸ್ಟರ್ ಹಾಕಿಕೊಂಡು ಜೈಲಿನ ಬಳಿ ಬಂದು ದರ್ಶನ್ ಅನ್ನು ಬಿಡುಗಡೆ ಮಾಡುವಂತೆ ಗಲಾಟೆ ಮಾಡಿದ್ದಾನೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ದರ್ಶನ್ ಬಂಧನವಾಗಿ ಠಾಣೆಯಲ್ಲಿದ್ದಾಗ ಅಭಿಮಾನಿಗಳು ಠಾಣೆಯ ಮುಂದೆ ಜಮಾಯಿಸಿ ಹುಚ್ಚಾಟ ಮೆರೆದಿದ್ದರು. ಬಳಿಕ ಪರಪ್ಪನ ಅಗ್ರಹಾರಕ್ಕೆ ವರ್ಗಾವಣೆ ಮಾಡಿದಾಗ ಅಲ್ಲಿಯೂ ಜಮಾವಣೆಗೊಂಡಿದ್ದರು. ಇತ್ತೀಚೆಗೆ ಜೈಲಿನ ಬಳಿ ಬರುವ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗಿತ್ತು. ಆದರೆ ಗುರುವಾರ ದರ್ಶನ್​ರ ಅಭಿಮಾನಿಯೊಬ್ಬ, ದರ್ಶನ್ ಚಿತ್ರವನ್ನು ಕೊರಳಿಗೆ ಹಾಕಿಕೊಂಡು ಪರಪ್ಪನ ಅಗ್ರಹಾರ ಜೈಲಿನ ಬಳಿ ಬಂದು ಹುಚ್ಚಾಟ ಮೆರೆದಿದ್ದಾನೆ. ದರ್ಶನ್ ಯಾವುದೇ ತಪ್ಪು ಮಾಡಿಲ್ಲ ಅವರನ್ನು ಬಿಡುಗಡೆ ಮಾಡಬೇಕು ಎಂದಿದ್ದಾನೆ. ಕೊನೆಗೆ ಪೊಲೀಸರು ಆತನನ್ನು ಅಲ್ಲಿಂದ ಜಾಗ ಖಾಲಿ ಮಾಡಿಸಿದ್ದಾರೆ. ಇಲ್ಲಿದೆ ವಿಡಿಯೋ.

Leave a Reply

Your email address will not be published. Required fields are marked *

Verified by MonsterInsights