ನಟ ದರ್ಶನ್ ಬರೋಬ್ಬರಿ 8 ತಿಂಗಳ ಬಳಿಕ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದರು. ಈ ಹಿನ್ನಲೇ ಡೆವಿಲ್ ಚಿತ್ರದ ಚಿತ್ರಿಕರಣ ಅರ್ಧಕ್ಕೆ ನಿಂತಿತ್ತು. ಇದೀಗ ಡೆವಿಲ್ ಚಿತ್ರದ ಶೂಟಿಂಗ್ ಪುನಃ ಆರಂಭವಾಗಿದೆ.
ಡೆವಿಲ್ ಚಿತ್ರದ ಶೂಟಿಂಗ್ ಮೈಸೂರಲ್ಲಿ ನಡೆಯುತ್ತಿದ್ದು, ದರ್ಶನ್ ಚಿತ್ರಿಕರಣದಲ್ಲಿ ಭಾಗಿಯಾಗುವುದಕ್ಕೂ ಮುಂಚೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದರು.
ಮಾರ್ಚ್ 12ರಿಂದ 15ರ ವರೆಗೆ ಶೂಟಿಂಗ್ಗೆ ಅನುಮತಿ ಸಿಕ್ಕಿದೆ. ಇಂದಿನಿಂದ ಮಾರ್ಚ್ 14ರ ವರೆಗೆ ಸರ್ಕಾರಿ ಅರಿಥಿ ಗೃಹದಲ್ಲಿ ಡೆವಿಲ್ ಶೂಟಿಂಗ್ ನಡೆಯಲಿದ್ದು. ಮಾರ್ಚ್15 ರಂದು ಲಲಿತ್ಮಹಲ್ ಪ್ಯಾಲೇಸ್ನಲ್ಲಿ ಶೂಟಿಂಗ್ ನಡೆಯಲಿದೆ. ಇನ್ನು ಚಿತ್ರಿಕರಣ ನಡೆಯುವ ಸ್ಥಳದಲ್ಲಿ ಭಾರಿ ಭದ್ರತೆ ನಿಯೋಜನೆ ಮಾಡಲಾಗಿದೆ