#Exclusive NewsTop Newsಫ್ರೀಡಂ ಟಿವಿ ವಿಶೇಷ

ಮನಸ್ಸು ಬದಲಿಸಿ ಟಿವಿ ಬೇಕು ಎಂದ ದರ್ಶನ್; ಹೆಚ್ಚಿತು ಚಾರ್ಜ್​ಶೀಟ್ ಆತಂಕ

ಚಾರ್ಜ್​ಶೀಟ್​ ಬಗ್ಗೆ ದರ್ಶನ್​ ಪದೇಪದೇ ಜೈಲಿನ ಸಿಬ್ಬಂದಿ ಬಳಿ ಕೇಳಿದ್ದಾರೆ. ಆದರೆ ಸೂಕ್ತ ಮಾಹಿತಿ ಸಿಕ್ಕಿಲ್ಲದ ಕಾರಣ ಟಿವಿ ಮೂಲಕ ತಿಳಿಯಲು ನಿರ್ಧರಿಸಿದ್ದಾರೆ. ಆದ್ದರಿಂದ ಇಷ್ಟು ದಿನ ಟಿವಿಯೇ ಬೇಡ ಎಂಬಂತೆ ಇದ್ದ ಅವರು ಈಗ ಮೇಲಧಿಕಾರಿಗಳ ಬಳಿ ಟಿವಿ ಬೇಕು ಎಂದು ಮನವಿ ಸಲ್ಲಿಸಿದ್ದಾರೆ. ದರ್ಶನ್​ ಇರುವ ಸೆಲ್​ಗೆ ಟಿವಿ ನೀಡಲು ಬಳ್ಳಾರಿ ಜೈಲಿನ ಅಧಿಕಾರಿಗಳು ಯೋಚಿಸುತ್ತಿದ್ದಾರೆ.


ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಎ2 ಆಗಿರುವ ದರ್ಶನ್​ ಈಗ ಬಳ್ಳಾರಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಈ ಕೇಸ್​ನ ತನಿಖೆ ಕೊನೇ ಹಂತಕ್ಕೆ ಬಂದಿದೆ. ಬೆಂಗಳೂರು ಪೊಲೀಸರು ಇನ್ನು ಎರಡೇ ದಿನದಲ್ಲಿ ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಕೆ ಮಾಡಲಿದ್ದಾರೆ. ಈ ಹಂತದಲ್ಲಿ ನಟ ದರ್ಶನ್​ಗೆ ಆತಂಕ ಶುರುವಾಗಿದೆ. ಚಾರ್ಜ್​​ಶೀಟ್​ ಬಗ್ಗೆ ತಿಳಿದುಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ, ಬಳ್ಳಾರಿ ಜೈಲಿನಲ್ಲಿ ತಮಗೆ ಟಿವಿ ಬೇಕು ಎಂದು ಮೇಲಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಅಚ್ಚರಿ ಏನೆಂದರೆ, ಇಷ್ಟು ದಿನಗಳ ಕಾಲ ದರ್ಶನ್​ ಅವರು ಟಿವಿ ಬೇಕು ಎಂದು ಕೇಳಿರಲಿಲ್ಲ.ಆದರೆ ಚಾರ್ಜ್​ಶೀಟ್​ ಬಗ್ಗೆ ಪದೇಪದೇ ಜೈಲಿನ ಸಿಬ್ಬಂದಿಯ ಬಳಿ ವಿಚಾರಿಸಿದ್ದರು. ಈ ಹಿನ್ನೆಲೆಯಲ್ಲಿ ಟಿವಿ ಬೇಕಿದ್ದರೆ ಜೈಲಧಿಕಾರಿಗೆ ಮನವಿ ಮಾಡಿ ಎಂದು ಸಿಬ್ಬಂದಿ ಕೂಡ ಸಲಹೆ ನೀಡಿದ್ದರು. ಆದರೆ ಆಗ ದರ್ಶನ್​ ಅವರು ಟಿವಿ ಸಹವಾಸ ಬೇಡ ಎಂಬ ರೀತಿ ಮೌನವಾಗಿದ್ದರು. ಆದರೆ ಇಂದು ಮನಸ್ಸು ಬದಲಾಯಿಸಿದ್ದಾರೆ.

Comments (0)

Your email address will not be published. Required fields are marked *

Back to top button