ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲೂ ದುಡ್ಡಿದ್ದವರದ್ದೇ ದುನಿಯಾ ಎನ್ನುವಂತಿದೆ. ಇಲ್ಲಿ ದರ್ಶನ್ ಮಾತ್ರವಲ್ಲ ಪ್ರತಿ ಕೈದಿಗಳಿಗೂ ಸಿಗುತ್ತಂತೆ ಸವಲತ್ತು. ಬೇಕಾದ್ರೆ ಸಾವಿರಾರು ರೂಪಾಯಿ ದುಡ್ಡು ಕೊಡಬೇಕಂತೆ. ಬಿಸಿ ನೀರು, ಎಣ್ಣೆ, ಸಿಗರೇಟು, ಸ್ಪೆಷನ್ ಊಟಕ್ಕೆ ಒಂದೊಂದು ರೇಟ್ ಫಿಕ್ಸ್ ಮಾಡಲಾಗಿದೆ.
ಇನ್ನು ಪ್ರಮುಖವಾಗಿ ಜೈಲಿನಲ್ಲಿ ವಸ್ತುಗಳ ಸಪ್ಲೈ ಮಾಡಲು ಒಂದು ಪ್ರತ್ಯೇಕ ಸಿಂಡಿಕೇಟ್ ಇದೆ. ಸಿನಿಮಾಗಳಂತೆ ಪರಪ್ಪನ ಅಗ್ರಹಾರ ಜೈಲಿನಲ್ಲೂ ಕೈದಿಗಳದ್ದೇ ದರ್ಬಾರ್. 10 ವರ್ಷಕ್ಕಿಂತ ಹೆಚ್ಚು ಕಾಲ ಇರುವ ಕೈದಿಗಳೇ ಈ ಸಿಂಡಿಕೇಟ್ನ ಸದಸ್ಯರು. ಯಾವ ಕೈದಿಗಳು ಯಾವ ಯಾವ ಸೆಲ್ನಲ್ಲಿ ಇರಬೇಕು? ಎಷ್ಟು ಹಣಕ್ಕೆ ಯಾವ ಸೌಲಭ್ಯ ಕೊಡಬೇಕೆಂದು ಡಿಸೈಡ್ ಮಾಡುತ್ತಾರೆ.
ಇದು ಪರಪ್ಪನ ಅಗ್ರಹಾರ ಜೈಲಲ್ಲ, ದುಡ್ಡಿನ ಖಜಾನೆಯಾಗಿದೆ. ಪರಪ್ಪನ ಅಗ್ರಹಾರದ ಜೈಲಿನಲ್ಲೂ ಬಾಡಿಗೆ ರೂಂಗಳು ವಿಐಪಿಯ ರೀತಿಯಲ್ಲಿ ಬಾಡಿಗೆ ಸಿಗುತ್ತವೆ. ವಿಐಪಿ ಸೆಲ್ಗಲಿಗೆ 50 ಸಾವಿರದಿಂದ 5 ಲಕ್ಷದವರೆಗೂ ಬಾಡಿಗೆ ಇರುತ್ತದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಸುಮಾರು 60 ವಿಐಪಿ ಸೆಲ್ಗಳಿದ್ದು, ರಾಜಕಾರಣಿಗಳನ್ನ ಹೊರತುಪಡಿಸಿ ಉಳಿದವರಿಗೆಲ್ಲಾ ಬಾಡಿಗೆಗೆ ನೀಡಲಾಗುತ್ತದೆ. ಸದ್ಯ ವಿಲ್ಸನ್ ಗಾರ್ಡನ್ ನಾಗ ವಿಐಪಿ ಸೆಲ್ಗಳ ಉಸ್ತುವಾರಿ ಆಗಿದ್ದಾನೆ. ಹಾಗಾಗಿ ದರ್ಶನ್ ಇದೇ ಕಾರಣಕ್ಕೆ ವಿಲ್ಸನ್ ಗಾರ್ಡನ್ ನಾಗ ಹತ್ತಿರವಾಗಿದ್ದು ಎನ್ನಲಾಗುತ್ತಿದೆ.
ಬಿಸಿ ನೀರಿಗೆ ಒಂದು ರೇಟ್, ಸಿಗರೇಟಿಗೆ ಒಂದು ರೇಟ್, ಊಟಕ್ಕೆ ಒಂದು ರೇಟ್, ಎಣ್ಣೆಗೆ ಒಂದು ರೇಟ್, ಫೋನ್, ಬೆಡ್, ಮಸಾಜ್ ಸೇರಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಮಾಡಲಾಗುತ್ತಂತೆ. ಕೈದಿಗಳಿಂದ ವ್ಯವಸ್ಥಿತವಾಗಿ ಹಣ ಸಂಗ್ರಹಿಸುವ ಸ್ವಯಂಸೇವಕರು, ಕೈದಿಗಳ ಭೇಟಿಗೆ ಆಗಮಿಸ್ತಿದ್ದವರಿಂದ ಹಣ ಪಡೆಯುತ್ತಾರಂತೆ. ಫೋನ್ ಪೇ, ಗೂಗಲ್ ಪೇ, ಬ್ಯಾಂಕ್ ಗಳಿಂದ ಹಣ ವರ್ಗಾವಣೆ ಮಾಡಿಸಿಕೊಂಡು, ಕೈದಿಗಳಿಂದ ಸಿಂಡಿಕೇಟ್ ಸದಸ್ಯರಿಗೆ ಹಣ ನೀಡಲಾಗುತ್ತಂತೆ.