ಬೆಂಗಳೂರು: ದರ್ಶನ್ ಸಹವಾಸದಿಂದ ನಾಗನಿಗೆ ಹೆಚ್ಚಾಯ್ತು ಸಂಕಷ್ಟ.. ದರ್ಶನ್ ರನ್ನ ಕಮಾನು ಎತ್ತುವ ಬದಲು ರೌಡಿಗಳ ಕಮಾನಿಗೆ ಸಿದ್ದತೆ.. ಭದ್ರತಾ ದೃಷ್ಟಿಯಿಂದ ನಟ ದರ್ಶನ್ರನ್ನು ರಾಜ್ಯದ ಬೇರೆ ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆ ಕಡಿಮೆ.
ರಾಜ್ಯದಲ್ಲೆ ಅತ್ಯಂತ ಹೆಚ್ಚು ಹೈ ಸೆಕ್ಯೂರಿಟಿ ಇರುವ ಜೈಲು ಪರಪ್ಪನ ಅಗ್ರಹಾರ. ಜೈಲಿನಲ್ಲಿ ಸಿಸಿಟಿವಿ, ಹೈ ಫ್ರೀಕ್ವೆನ್ಸಿ ಜಾಮರ್ KISF ISD PRISON DEPT ತಪಾಸಣೆ ಇದೆ. ಇಷ್ಟೆಲ್ಲ ಇದ್ರು, ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ ತನದಿಂದ ರಾಜಾತಿಥ್ಯ ಸಿಕ್ಕಿದೆ.
ರೌಡಿಶೀಟರ್ಸ್ ಕಮಾನೆತ್ತಿ ದರ್ಶನ್ಗೆ ನಿಯಮಗಳನ್ನ ಮತ್ತಷ್ಟು ಬಿಗಿಗೊಳಿಸಲಿರೋ ಜೈಲಾಧಿಕಾರಿಗಳು. ಕೇವಲ ರೌಡಿಶೀಟರ್ಸ್ಗಳನ್ನು ಕಮಾನು ಎತ್ತಲಿಕ್ಕೆ ಸಿದ್ದತೆ. ಬಳ್ಳಾರಿ ಅಥವಾ ಶಿವಮೊಗ್ಗ ಜೈಲಿಗೆ ನಾಗನನ್ನ ಕಮಾನು ಎತ್ತಲಿಕ್ಕೆ ಸಿದ್ದತೆ.
ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ, ಡಬಲ್ ಮೀಟರ್ ಮೋಹನ್ರನ್ನು ಸದ್ಯ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲು ಸಿದ್ದತೆ
ಸದ್ಯ ಪರಪ್ಪನ ಅಗ್ರಹಾರದಲ್ಲಿ ಬಿಂದಾಸ್ ಆಗಿದ್ದ ನಾಗನಿಗೆ ದರ್ಶನ್ ಸ್ನೇಹದಿಂದ ಸಂಕಷ್ಟ ಎದುರಾಗಿದೆ. 24 ಕೇಸ್ ಮಾಡಿರೋ ನಾಗನಿಗೆ ಸದ್ಯ ಪರಪ್ಪನ ಅಗ್ರಹಾರದಿಂದ ಬೇರೆಡೆ ಶಿಫ್ಟ್ ಆಗೋ ಭೀತಿ.