ಸಂಕ್ರಾತಿ ವೇಳೆಗೆ ದರ್ಶನ್ ಆಪರೇಷನ್ ಮಾಡಿಸಿಕೊಳ್ಳಲಿದ್ದಾರೆ. ಮೈಸೂರಿನಲ್ಲಿಯೇ ಆಪರೇಷನ್ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ದರ್ಶನ್ ಅವರಿಗೆ ವೈದ್ಯ ಅಜಯ್ ಹೆಗಡೆ ಅವರು ಚಿಕಿತ್ಸೆ ನೀಡುತ್ತಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ದರ್ಶನ್ ಅವರು ಈಗ ಜಾಮೀನು ಪಡೆದು ಹೊರ ಬಂದಿದ್ದಾರೆ. ಅವರಿಗೆ ಬೆನ್ನು ನೋವು ಅತಿಯಾಗಿ ಕಾಡಿತ್ತು. ಡಿಸ್ಕ್ನ ಸಮಸ್ಯೆಯಿಂದಾಗಿ ಈ ರೀತಿ ಆಗಿದೆ ಎಂದು ವರದಿಯಲ್ಲಿ ಉಲ್ಲೇಖ ಆಗಿತ್ತು. ಈಗ ದರ್ಶನ್ ಅವರಿಗೆ ಆಪರೇಷನ್ ಮಾಡಿಸೋದು ಅನಿವಾರ್ಯ ಆಗಿದೆ. ಅವರಿಗೆ ಬೆನ್ನು ನೋವು ವಾಸಿಯಾಗುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ, ಬೇರೆ ದಾರಿ ಕಾಣದೆ ಅವರು ಆಪರೇಷನ್ಗೆ ಒಪ್ಪಿಗೆ ಕೊಟ್ಟಿದ್ದಾರೆ.
ದರ್ಶನ್ ಅವರು ಐಷಾರಾಮಿ ಆಗಿ ಜೀವನ ನಡೆಸಿದವರು. ಈ ಕಾರಣಕ್ಕೆ ಜೈಲು ವಾಸ ಅವರಿಗೆ ಕಷ್ಟ ಆಯಿತು. ಜೈಲಿನಲ್ಲಿ ಕೂರಲು, ಮಲಗಲು ಅವರಿಗೆ ಬೇಕಾದ ರೀತಿಯ ವ್ಯವಸ್ಥೆ ಇಲ್ಲದ ಕಾರಣ ಬೆನ್ನು ನೋವು ಆರಂಭ ಆಯಿತು. ದರ್ಶನ್ ಅವರು ಆಪರೇಷನ್ ನೀಡಿ ಮಧ್ಯಂತರ ಜಾಮೀನು ಪಡೆದರು. ಇಷ್ಟು ದಿನಗಳ ಕಾಲ ಅವರು ಫಿಸಿಯೋ ಥೆರಪಿ ಮೂಲಕ ನೋವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ, ಅದು ಸಾಧ್ಯವಾಗಿಲ್ಲ. ಹೀಗಾಗಿ, ಅವರು ಆಪರೇಷನ್ ಮಾಡಿಸಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾರೆ.


