ಕನ್ನಡದ ಖ್ಯಾತ ನಟ ದರ್ಶನ್ ಸೇರಿದಂತೆ ಹಲವರನ್ನು ಬಂಧಿಸಿರುವ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ಇದೀಗ ಎಸಿಪಿ ಚಂದನ್ ಮುಂದೆ ಎರಡನೇ ಭಾರೀ ವಿಚಾರಣೆಗೆ ನಟ ಚಿಕ್ಕಣ ವಿಚಾರಣೆಗೆ ಹಾಗರಾಗಿದ್ದರು.
ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಶಂಕಿತ ಆರೋಪಿಗಳಲ್ಲಿ ಒಬ್ಬನಾದ ವಿನಯ್‌ಗೆ ಸೇರಿದ ಸ್ಟೋನಿ ಬ್ರೂಕ್ ಹೋಟೆಲ್‌ನಲ್ಲಿ ಚಿಕ್ಕಣ್ಣ ಇದ್ದಾನೆ ಎಂದು ತಿಳಿದ ಬೆಂಗಳೂರು ಪೊಲೀಸರು, ಹಾಸ್ಯ ನಟ ಕಮ್ ಹೀರೋ ಚಿಕ್ಕಣ್ಣನಿಗೆ ಹಿಂದೆ ಹೊಮ್ಮೆ ನೋಟಿಸ್ ಜಾರಿ ಮಾಡಿದ್ದಾಗ ವಿಚಾರಣೆಗೆ ಹಾಜರಾಗಿದ್ದರು . ಮೂಲಗಳ ಪ್ರಕಾರ, ಪ್ರಮುಖವಾಗಿ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಚಿಕ್ಕಣ್ಣ ಅವರನ್ನು ಪ್ರಕರಣದಲ್ಲಿ ಸಾಕ್ಷಿಯನ್ನಾಗಿ ಮಾಡಲು ಪೊಲೀಸರು ಮುಂದಾಗಿದ್ದು, ಎರಡನೇ ಬಾರೀ ವಿಚಾರಣೆಗೆ ಬರುವಂತೆ ಎಸಿಪಿ ಚಂದನ್ ತಿಳಿಸಿದ್ದಾರೆ.
ಇತ್ತೀಚಿಗೆ ನಟ ಚಿಕ್ಕಣ್ಣ ವಿಚಾರಣೆ ಬಳಿಕ ಆರೋಪಿ ದರ್ಶನ್ ಭೇಟಿ ಮಾಡಲು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರು. ಹಾಗಾಗಿ ಎರಡನೇ ಬಾರಿ ನಟ ಚಿಕ್ಕಣ ಬಸವೇಶ್ವರ ನಗರದಲ್ಲಿರುವ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.