Thursday, November 20, 2025
22.5 C
Bengaluru
Google search engine
LIVE
ಮನೆದೇಶ/ವಿದೇಶಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ರೆ ಅಪಾಯ; ಇರಾನ್​ಗೆ ಟ್ರಂಪ್ ವಾರ್ನಿಂಗ್

ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ರೆ ಅಪಾಯ; ಇರಾನ್​ಗೆ ಟ್ರಂಪ್ ವಾರ್ನಿಂಗ್

ವಾಷಿಗ್ಟಂನ್: ಇರಾನ್ ಜೊತೆ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆರಿಕ ನೇರ ಮಾತುಕತೆ ನಡೆಸಲಿದೆ. ಇರಾನ್​ಗೆ ಪರಮಾಣು ಶಸ್ತ್ರಾಸ್ತ್ರ ಕೈಬಿಡುವಂತೆ ಹೇಳಲಾಗುತ್ತೆ. ಒಂದು ವೇಳೆ ಇರಾನ್ ಒಪ್ಪದೇ ಹೋದಲ್ಲಿ ಅಪಾಯಕ್ಕೆ ಸಿಲುಕಲಿದ್ದಾರೆ ಎಂದು ಇರಾನ್​ಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್ ವಾರ್ನಿಂಗ್ ಕೊಟ್ಟಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭೇಟಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಟ್ರಂಪ್, ಟೆಹ್ರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ಸಾಧ್ಯವಿಲ್ಲ. ಈ ಕುರಿತು ಅವರೊಂದಿಗೆ ನೇರವಾಗಿ ಮಾತುಕತೆ ನಡೆಸಿ, ಒಪ್ಪಂದ ಮಾಡಿಕೊಳ್ಳಲಾಗುವುದು ಎಂದರು. ಇರಾನ್​ ಮೇಲಿನ ಅಮೆರಿಕ ಕಾರ್ಯಾಚರಣೆ ಕುರಿತು ವಿಶ್ವಸಂಸ್ಥೆಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಇತ್ತೀಚಿಗೆ ಟ್ರಂಪ್​ ಇರಾನ್​ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿಗೆ ಪತ್ರವನ್ನು ಬರೆದು, ನೇರ ಮಾತುಕತೆಗೆ ಮುಂದಾಗುವಂತೆ ತಿಳಿಸಿದ್ದರು. ಈಗಾಗಲೇ ಇರಾನ್​ ಟ್ರಂಪ್​ ಅವರ ಮೊದಲ ಮನವಿಯನ್ನು ತಿರಸ್ಕರಿಸಿದ್ದು, ಪರೋಕ್ಷ ಮಾತುಕತೆ ಸಾಧ್ಯತೆ ಕುರಿತ ಮಾತುಗಳು ಕೇಳಿ ಬರುತ್ತಿವೆ. ಆದರೆ, ಟ್ರಂಪ್​ ಮಾತ್ರ ಇರಾನ್​ಗೆ ನಿರಂತವಾಗಿ ಮಾತುಕತೆಗೆ ಒಪ್ಪದಿದ್ದರೆ ದಾಳಿ ಮಾಡುವುದಾಗಿ ಎಚ್ಚರಿಕೆ ನೀಡುತ್ತಿದ್ದು, ಪ್ರತೀಕಾರದ ವಾರ್ನಿಂಗ್​ ಕೊಟ್ಟಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments