ಬೆಂಗಳೂರು : ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕಿ ಮೃತಪಟ್ಟಿದ್ದಾಳೆ ಎಂದು ಆರಂಭದಲ್ಲಿ ಆರೋಪಿಸಲಾಗಿದ್ದ ಕೇಸಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇಂದು ಶುಕ್ರವಾರ ಬೆಳಗ್ಗೆ ಬಾಲಕಿ ಅಪಾರ್ಟ್ ಮೆಂಟಿನ ಸ್ವಿಮ್ಮಿಂಗ್ ಪೂಲ್ ಗೆ ಬಿದ್ದು ಮೃತಪಟ್ಟಿದ್ದಾಳೆ ಎಂದು ಪೊಲೀಸ್ ದೂರು ದಾಖಲಾಗಿದ್ದು ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸತ್ಯ ಹೊರಬರಬೇಕಿದೆ.

ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕಿ ಮೃತಪಟ್ಟಿದ್ದಾಳೆ ಎಂದು ಆರಂಭದಲ್ಲಿ ಆರೋಪಿಸಲಾಗಿದ್ದ ಕೇಸಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇಂದು ಶುಕ್ರವಾರ ಬೆಳಗ್ಗೆ ಬಾಲಕಿ ಅಪಾರ್ಟ್ ಮೆಂಟಿನ ಸ್ವಿಮ್ಮಿಂಗ್ ಪೂಲ್ ಗೆ ಬಿದ್ದು ಮೃತಪಟ್ಟಿದ್ದಾಳೆ ಎಂದು ಪೊಲೀಸ್ ದೂರು ದಾಖಲಾಗಿದ್ದು ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸತ್ಯ ಹೊರಬರಬೇಕಿದೆ.
ಏನಿದು ಘಟನೆ..?

ಕಳೆದ ತಿಂಗಳು ಕಾಡುಗೋಡಿಯಲ್ಲಿ ವಿದ್ಯುತ್ ತಂತಿ ತಗುಲಿ ತಾಯಿ-ಮಗು ಸಾವಿಗೀಡಾಗಿದ್ದ ಪ್ರಕರಣ ಮಾಸುವ ಮುನ್ನವೇ ವರ್ತೂರಿನ ಪ್ರೆಸ್ಟೀಜ್ ಹೆಬಿಟೇಡ್ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ 10 ವರ್ಷದ ಮಾನ್ಯ ಎಂಬ ಬಾಲಕಿ ವಿದ್ಯುತ್ ಸ್ಪರ್ಶದಿಂದ ಸಾವೀಗಿಡಾಗಿದ್ದಾಳೆ ಎಂದು ಹೇಳಲಾಗಿತ್ತು.
ನಿನ್ನೆ ಸಂಜೆ 7.30 ರ ಸುಮಾರಿಗೆ ಬಾಲಕಿ ಮಾನ್ಯ ಅಪಾರ್ಟ್ ಮೆಂಟಿನ ಸ್ವಿಮಿಂಗ್ ಪೂಲ್ ಬಳಿ ಆಟವಾಡುತಿದ್ದಳು. ಈ ವೇಳೆ ಮಾನ್ಯ ಸ್ವಿಮಿಂಗ್ ಪೂಲ್ ಗೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಮಾಹಿತಿ ಸಿಕ್ಕಿದ ತಕ್ಷಣ ಅಪಾರ್ಟ್ ಮೆಂಟ್ ನಿವಾಸಿಗಳು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಪ್ರಕರಣ ಸಂಬಂಧ ಮೃತ ಮಾನ್ಯ ತಂದೆ ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಒಟ್ನಲ್ಲಿ ಗಗನದೆತ್ತರಕ್ಕೆ ಕಟ್ಟಲಾಗಿರುವ ಅಪಾರ್ಟ್ ಮೆಂಟ್ ಗಳಲ್ಲಿ ಸೇಫ್ಟಿ ಎಷ್ಟರಮಟ್ಟಿಗಿರುತ್ತೆ ಅನ್ನೋದು ಈಗಾಗಲೇ ಹಲವು ಪ್ರಕರಣಗಳಿಂದ ಸಾಬೀತಾಗಿದೆ. ಇದೀಗ ಬಾಲಕಿ ಸಾವು ಸಂಭವಿಸಿದ್ದು, ಇದಕ್ಕೆ ಯಾವ ಬಣ್ಣ ಕಟ್ಟಲಾಗುತ್ತೋ ಕಾದು ನೋಡಬೇಕು.