ತಮಿಳು ಸೂಪರ್ ಸ್ಟಾರ್ ವಿಜಯ್ ಅವರು ರಾಜಕೀಯಕ್ಕಾಗಿ ಚಿತ್ರರಂಗವನ್ನು ತ್ಯಜಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ದಳಪತಿ ವಿಜಯ್ ಅವರು ತಮ್ಮ ಹೊಸ ಸಿನಿಮಾದ ಶೂಟ್ನಲ್ಲಿ ಬ್ಯುಸಿ ಆಗಿದ್ದಾರೆ. ಅತಿ ವೇಗದಲ್ಲಿ ಸಿನಿಮಾ ಮಾಡಿ ಮುಗಿಸುವುದನ್ನು ಅವರನ್ನು ನೋಡಿ ಅನೇಕರು ಕಲಿಯಬೇಕಿದೆ. ಸದ್ಯ ಅವರ ನಟನೆಯ ಹೊಸ ಚಿತ್ರಕ್ಕೆ ‘ದಳಪತಿ 69’ ಎಂದು ತಾತ್ಕಾಲಿಕ ಟೈಟಲ್ ಇಡಲಾಗಿದೆ. ಈ ಚಿತ್ರದ ಟೈಟಲ್ ಏನು ಎಂಬುದು ರಿವೀಲ್ ಆಗಿದೆ. ವಿಜಯ್ ನಟನೆಯ ಮೊದಲ ಚಿತ್ರಕ್ಕೆ ಯಾವ ಟೈಟಲ್ ಇಡಲಾಗಿತ್ತೋ ಅದೇ ಟೈಟಲ್ನ ಕೊನೆಯ ಚಿತ್ರಕ್ಕೂ ಇಡಲಾಗುತ್ತಿದೆ ಎನ್ನಲಾಗುತ್ತಿದೆ.
Update oda vandhurkom 🤗
69% completed ███░░#Thalapathy69FirstLookOnJan26 🔥#Thalapathy @actorvijay sir #HVinoth @thedeol @prakashraaj @menongautham #Priyamani @itsNarain @hegdepooja @_mamithabaiju @anirudhofficial @Jagadishbliss @LohithNK01 @sathyaDP @ActionAnlarasu… pic.twitter.com/FA2MbAjdAY— KVN Productions (@KvnProductions) January 24, 2025
ದಳಪತಿ ವಿಜಯ್ ಅವರ ಬಹು ನಿರೀಕ್ಷಿತ ಅಂತಿಮ ಚಿತ್ರವಾದ ದಳಪತಿ 69 ರ ಫಸ್ಟ್ ಲುಕ್ ಅನ್ನು ಜನವರಿ 26, ಭಾನುವಾರ ಗಣರಾಜ್ಯೋತ್ಸವದಂದು ಬಿಡುಗಡೆಗೊಳಿಸಲಾಗುವುದು ಎಂದು ಕೆವಿಎನ್ ಪ್ರೊಡಕ್ಷನ್ಸ್ ಘೋಷಿಸಿದೆ.
ವಿಜಯ್ ಅವರು ಬಾಲ ಕಲಾವಿದನಾಗಿ ಗಮನ ಸೆಳೆದವರು. ಆ ಬಳಿಕ ಅವರು ಹೀರೋ ಆದರು. 1992ರಲ್ಲಿ ರಿಲೀಸ್ ಆದ ‘ನಾಲೈಯ ತೀರ್ಪು’ ಸಿನಿಮಾ ಗಮನ ಸೆಳೆಯಿತು. ಇದು ಹೀರೋ ಆಗಿ ವಿಜಯ್ ನಟಿಸಿದ ಮೊದಲ ಸಿನಿಮಾ ಆಗಿದೆ. ಈಗ ಅವರ ಕೊನೆಯ ಚಿತ್ರಕ್ಕೆ ಇದೇ ಟೈಟಲ್ ಇಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.