ರಾಯಚೂರು: ಇಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಕುಟುಂಬ ಸಮೇತರಾಗಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಯ ದರ್ಶನ ಪಡೆದಿದ್ದಾರೆ.. ಬಳಿಕ ಸುಭುದೇಂದ್ರ ತೀರ್ಥ ಶ್ರೀಗಳ ಆಶೀರ್ವಾದ ಪಡೆದ್ರು. ಈ ವೇಳೆ ಶ್ರೀಗಳು ಡಿಕೆಶಿ ದಂಪತಿ ಮಂತ್ರಾಕ್ಷತೆ ನೀಡಿ ನೆನಪಿನ ಕಾಣಿಕೆ ನೀಡಿ ಅನುಗ್ರಹಿಸಿದರು.
ಬಳಿಕ ಮಾಧ್ಯಮಗಳ ಜೊತೆ ಮಾತಾಡಿದ ಅವರು, ಈ ಹಿಂದೆ ಜೋಡೊ ಯಾತ್ರೆ ವೇಳೆ ನಾನು ಹಾಗೂ ರಾಹುಲ್ ಗಾಂಧಿ ಅವರು ಮಂತ್ರಾಲಯ ಮಠಕ್ಕೆ ಬಂದಿದ್ದೆವು. ನಂತರ ಮತ್ತೊಮ್ಮೆ ರಾಯರ ಮಠಕ್ಕೆ ಬರಬೇಕು ಅನ್ನೋದು ಇತ್ತು. ಎಲ್ಲದಕ್ಕೂ ದೇವರ ಅನುಗ್ರಹ, ಗುರುವಿನ ಅನುಗ್ರಹ ಮುಖ್ಯ. ಇಂದು ವಿಶೇಷವಾದ ದಿನವೆಂದು ದರ್ಶನಕ್ಕೆ ಬಂದಿದ್ದೇನೆ ಎಂದ್ರು,
ಕಳೆದ ಬಾರಿ ಸಂಕಲ್ಪ ಮಾಡಿದ್ದಕ್ಕೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ರಾಯರ ಮಠದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇನೆ. ಮಠದಲ್ಲಿ ಭೂಮಿ ಪೂಜೆ ಕಾರ್ಯಕ್ರಮ ಇದೆ ಭಾಗವಹಿಸುತ್ತೇನೆ. ಎಲ್ಲರಿಗೆ , ನಾಡಿಗೆ ಒಳ್ಳೆಯದಾಗಲಿ ಅಂತ ಬೇಡಿಕೊಂಡಿದ್ದೇನೆ ಎಂದಿದ್ದಾರೆ.


