Top Newsರಾಜಕೀಯರಾಜ್ಯಸುದ್ದಿ

ಡಿ.ಕೆ.ಶಿವಕುಮಾರ್ ಸಿಎಂ ಆಗೇ ಆಗ್ತಾರೆ; ನೊಣವಿನಕೆರೆ ಅಜ್ಜಯ್ಯ ಭವಿಷ್ಯ

ಯಾದಗಿರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗುವ ಯೋಗವಿದೆ ಎಂದು ನೊಣವಿನಕೆರೆ ಅಜ್ಜಯ್ಯ ಭವಿಷ್ಯ ನುಡಿದಿದ್ದಾರೆ.

ಯಾದಗಿರಿ ಜಿಲ್ಲೆಯ ಅಬ್ಬೆತುಕೂರಿನ ವಿಶ್ವರಾಧ್ಯರ ಮಠದಲ್ಲಿ ಮಾತನಾಡಿದ ಅವರು, ರೈತರ ಆಸೆ ಮತ್ತು ಶ್ರೀಮಠದ ಆಶೀರ್ವಾದದಿಂದ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗ್ತಾರೆ ಎಂದು ಹೇಳಿದ್ದಾರೆ.

ಎಲ್ಲರ ಆಸೆ ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕೆಂಬುದಿದೆ. ಶ್ರೀಮಠದ ಆಶಿರ್ವಾದದಿಂದ ಒಂದು ಸಿಎಂ ಆಗ್ತಾರೆ. ಯಾವ ದಿನ ಸಿಎಂ ಆಗ್ತಾರೆ ಅಂತ ಹೇಳೊಕೆ ಆಗಲ್ಲ. ನಾನೂ ಕೂಡ ಅಬ್ಬೆತುಮಕೂರು ವಿಶ್ವರಾಧ್ಯರ ಗದ್ದುಗೆಗೂ ಬಂದಿನಿ, ಅವರ ಆಶಿರ್ವಾದವೂ ಡಿಕೆಶಿಗೆ ಸಿಗಲಿ. ಶ್ರೀಶೈಲ ಜಗದ್ಗುರುಗಳು ಬಂದಿದ್ದಾರೆ, ಅವರ ಆಶಿರ್ವಾದವೂ ಡಿಕೆಶಿಗೆ ಸಿಗಲಿ ಎಂದು ಅಜ್ಜಯ್ಯ ಪ್ರಾರ್ಥಿಸಿದರು.

Comments (0)

Your email address will not be published. Required fields are marked *

Back to top button