ಬೆಂಗಳೂರು : ಸದನದಲ್ಲಿ ಆರ್ಎಸ್ಎಸ್ ಗೀತೆ ಹಾಡಿದ ಡಿಸಿಎಂ ಡಿಕೆ ಶಿವಕುಮಾರ್ ನಡೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ವಲಯದಲ್ಲೂ ಕಿಚ್ಚು ಹಚ್ಚಿತ್ತು. ಡಿಕೆಶಿ ಆರ್ಎಸ್ಎಸ್ ಗುಣಗಾನವನ್ನ ಕೈ ನಾಯಕರು ಕೂಡ ವಿರೋಧಿಸಿದ್ರು. ವಿವಾದ ಅಲೆ ಎಬ್ಬಿಸಿದ್ದ RSS ಗೀತೆ ಕಿಚ್ಚಿಗೆ ಡಿಕೆಶಿ ಉತ್ತರ ನೀಡಿದ್ದಾರೆ.
ಯಾರ ಮನಸ್ಸಿಗೂ ನೋಯಿಸಲು ನನಗೆ ಇಷ್ಟವಿಲ್ಲ. ನನ್ನ ಜೀವನ ನಿಮ್ಮ ಜೀವನದ ಮೆಟ್ಟಿಲುಗಳಾಗಬೇಕು ಎಂದುಕೊಂಡವನು ನಾನು. ಯಾರಿಗಾದ್ರೂ ಇದರಿಂದ ನೋವಾಗಿದ್ರು ನಾನು ಕ್ಷಮಾಪಣೆ ಕೇಳಲು ಸಿದ್ದ ಎಂದು ಹೇಳಿದ್ದಾರೆ..
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಾನು ಅಸೆಂಬ್ಲಿಯಲ್ಲಿ ಬಿಜೆಪಿಯವರು ಮಾತಾಡ್ತಿದ್ದ ಸಂದರ್ಭದಲ್ಲಿ ಆರ್ಆರ್ಆರ್ ಗೀತೆ ಹಾಡಿದೆ. ಅವರೆಲ್ಲರೂ ಅವರ ಪಕ್ಷವೇ, ವಿರೋಧ ಪಕ್ಷದ ಅರಿವು ನನಗಿದೆ ಎಂದು ನಾನು ಕಾಲೆಳೆದಿದ್ದೆ. ಇದೇನು ಹೊಸದೇನು ಅಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆ, ಸಂಸದೀಯ ವ್ಯವಸ್ಥೆ ಯಲ್ಲಿ ನನ್ನ ಆಚಾರ ವಿಚಾರ ಮಾತಾಡಿದ್ದೇನೆ ಎಂದು ಡಿಕೆಶಿ ಹೇಳಿದ್ದಾರೆ.
ಯಾರಿಂದಲೂ ಪಾಠ ಕಲಿಯ ಬೇಕಿಲ್ಲ.
ಕಾಂಗ್ರೆಸ್ ಕಚೇರಿ ನಮಗೆ ದೊಡ್ಡ ದೇವಸ್ಥಾನ ಎಂದು ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇನೆ. ಮಲ್ಲಿಕಾರ್ಜುನ್ ಖರ್ಗೆ ಅಧ್ಯಕ್ಷರಾದ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ಕಚೇರಿ ಗಳನ್ನು ಕಟ್ಟಲು ಹೊರಟಿದ್ದೇನೆ. ಇದು ನನ್ನ ಕಮಿಟ್ಮೆಂಟ್. ನನ್ನ ಮೇಲೆ ಅನುಮಾನ ಪಡುವವರು ಮೂರ್ಖರು, ಅವರೆಲ್ಲ ನನ್ನ ನನ್ನ ಹತ್ತಿರಕ್ಕೆ ಬರಲು ಅವರು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆಶಿ ತಿರುಗೇಟು ಕೊಟ್ಟಿದ್ದಾರೆ.